ಜಿಮೇಲ್ ಖಾತೆ ಹೊಂದಿರುವವರಿಗೆ ಗೂಗಲ್ ಡ್ರೈವ್ ಎಂಬ ಆನ್‌ಲೈನ್ (ಕ್ಲೌಡ್) ಸ್ಟೋರೇಜ್ ತಾಣದಲ್ಲಿ 15 ಜಿಬಿಯಷ್ಟು ಪ್ರಮಾಣದಲ್ಲಿ ಯಾವುದೇ ಫೈಲುಗಳನ್ನು ಉಚಿತವಾಗಿ ಸಂಗ್ರಹಿಸಿಡಬಹುದೆಂದು ಗೊತ್ತಲ್ಲವೇ? ಈ ಉಚಿತ ಸಂಗ್ರಹಣಾಗಾರಕ್ಕೆ ಇನ್ನೂ ಎರಡು ಜಿಬಿಯಷ್ಟು ಹೆಚ್ಚುವರಿಯಾಗಿ ಸೇರ್ಪಡಿಸಿಕೊಳ್ಳಬಹುದು. ಹೇಗೆ ಗೊತ್ತೇ? http://goo.gl/ccgyV0 ಎಂಬಲ್ಲಿ ಕ್ಲಿಕ್ ಮಾಡಿ, ನಿಮ್ಮ ಜಿಮೇಲ್ ಮೂಲಕ ಲಾಗಿನ್ ಆಗಿ. ನಿಮ್ಮ ಖಾತೆಯ ಆನ್‌ಲೈನ್ ಸುರಕ್ಷತೆ ಕುರಿತು ಮರುಪರಿಶೀಲನೆ ಮಾಡಿಕೊಳ್ಳಿ. ತನ್ನಲ್ಲಿರುವ ಎಲ್ಲ ಫೈಲುಗಳ ರಕ್ಷಣೆಗೆ ಗೂಗಲ್ ಬದ್ಧವಾಗಿದ್ದರೂ, ನಿಮ್ಮ ಸುರಕ್ಷತೆಗಾಗಿ ಮತ್ತೊಮ್ಮೆ ಪರಿಶೀಲನೆ ಮಾಡಿಕೊಳ್ಳಲು, ಗೂಗಲ್ ನೀಡುತ್ತಿರುವ ಕೊಡುಗೆ. ಒಂದು ಕಂಡಿಶನ್ ಇದೆ. ಫೆ.17ರೊಳಗೆ ಇದನ್ನು ಮುಗಿಸಿದರೆ ಮಾತ್ರ. ಫೆ.28ರೊಳಗೆ ಈ ಕುರಿತು ನಿಮಗೆ ಮೇಲ್ ಮೂಲಕ ದೃಢೀಕರಣ ಲಭಿಸುತ್ತದೆ.
ಇವನ್ನೂ ನೋಡಿ
ಅದ್ಭುತವೀ Google ಅಸಿಸ್ಟೆಂಟ್: ಹೇಗೆ ಬಳಸುವುದು ಗೊತ್ತೇ?
ಆಂಡ್ರಾಯ್ಡ್ ಫೋನುಗಳೆಂದರೆ ಅಂಗೈಯಲ್ಲಿರುವ ಅದ್ಭುತ. ಐಫೋನ್ ಅಥವಾ ವಿಂಡೋಸ್ ಫೋನ್ ಬಳಕೆದಾರರಿಗಿಲ್ಲದ ಹಲವಾರು ವೈಶಿಷ್ಟ್ಯಗಳು ಕ್ಷಣ ಕ್ಷಣಕ್ಕೂ ಇಲ್ಲಿ ನಮ್ಮ ಉಪಯೋಗಕ್ಕೆ ಬರುತ್ತವೆ. ಒಂದಿಷ್ಟು ಯೋಚನೆ ಮಾಡಿ ಸೆಟ್ ಮಾಡಿಟ್ಟುಕೊಂಡುಬಿಟ್ಟರೆ, ಇದರಿಂದಾಗುವ ಉಪಯೋಗಗಳಂತೂ...