ನೀವು ಜಿಮೇಲ್‌ಗೆ ಲಾಗಿನ್ ಆಗಬೇಕಿದ್ದರೆ ಇತ್ತೀಚೆಗೆ ಲಾಗಿನ್ ಪುಟದಲ್ಲಿ ಸಾಕಷ್ಟು ಬದಲಾವಣೆಯಾಗಿರುವುದನ್ನು ನೀವು ಕಂಡಿದ್ದೀರಿ. ಪಾಸ್‌ವರ್ಡ್‌ಗೆ ಮತ್ತಷ್ಟು ಭದ್ರತೆ ಒದಗಿಸುವ ನಿಟ್ಟಿನಲ್ಲಿ ಗೂಗಲ್ ಈ ಬದಲಾವಣೆ ಮಾಡಿದೆ. ಲಾಗಿನ್ ಪ್ರಕ್ರಿಯೆಯನ್ನು ವಿಭಜಿಸಲಾಗಿದೆ. ಮೊದಲ ಸ್ಕ್ರೀನ್‌ನಲ್ಲಿ ನಿಮ್ಮ ಲಾಗಿನ್ ಐಡಿ (ಬಳಕೆದಾರ ಹೆಸರು) ನಮೂದಿಸಬೇಕಾಗುತ್ತದೆ, ಎರಡನೇ ಪುಟದಲ್ಲಿ ಪಾಸ್‌ವರ್ಡ್ ಸೇರಿಸಲು ಅವಕಾಶ ನೀಡಲಾಗಿದೆ. ಇದರ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಕೆಲವು ಬಳಕೆದಾರರು, ಲಾಗಿನ್ ಆಗಲು ಹೆಚ್ಚಿನ ಸಮಯ, ಶ್ರಮ ವ್ಯರ್ಥವಾಗುತ್ತಿದೆ ಎಂದು ದೂರಿಕೊಂಡಿದ್ದಾರೆ.
ಇವನ್ನೂ ನೋಡಿ
ಆಂಡ್ರಾಯ್ಡ್ನಲ್ಲಿ ಗೂಗಲ್ ಆಪ್ತ ಸಹಾಯಕನನ್ನು ಟ್ರೈ ಮಾಡಿ…
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-86, ಜುಲೈ 28, 2014ಇತ್ತೀಚೆಗೆ ಗೂಗಲ್ ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಭವಿಷ್ಯದ ಹಲವಾರು ಯೋಜನೆಗಳನ್ನು ಜನರ ಮುಂದಿಟ್ಟಿತ್ತು. ಸ್ಮಾರ್ಟ್ಫೋನ್ಗಳ ಜನಪ್ರಿಯ ಕಾರ್ಯಾಚರಣಾ ವ್ಯವಸ್ಥೆಯಾಗಿರುವ ಆಂಡ್ರಾಯ್ಡ್ನ ಅತ್ಯಾಧುನಿಕ...
