ಇಂಟರ್ನೆಟ್ ಇದ್ದರೆ ಏನೆಲ್ಲಾ ಮಾಡಬಹುದೆಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಯಾವುದಾದರೂ ಕೆಲಸ ಮಾಡಬೇಕಿದೆ, ಮೇಲ್ ಕಳಿಸಲೋ, ಯಾರಿಗಾದರೂ ಕರೆ ಮಾಡಲೋ, ಬಿಲ್ ಪಾವತಿಸಲೋ, ನಿರ್ದಿಷ್ಟ ಸಮಯಕ್ಕೆ ಅದರ ಬಗ್ಗೆ ನಿಮಗೆ ನೆನಪಿಸಬೇಕಾಗುತ್ತದೆ. ಯಾರಲ್ಲಿ ಹೇಳುವುದು? ಎಲ್ಲರೂ ಮರೆಗುಳಿಗಳೇ! ಇನ್ನು ಯೋಚನೆ ಬೇಕಾಗಿಲ್ಲ. ಗೂಗಲ್ ಇದೆ. ಗೂಗಲ್ ಸರ್ಚ್ ಪುಟದಲ್ಲಿ ಹೋಗಿ, Set a reminder ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಒಂದು ಸ್ಕ್ರೀನ್ ಕಾಣಿಸುತ್ತದೆ. ಯಾವುದರ ಬಗ್ಗೆ, ಯಾವಾಗ, ಎಲ್ಲಿ, ಯಾವ ದಿನಾಂಕ, ಸಮಯಕ್ಕೆ ಎಂದೆಲ್ಲಾ ಕೇಳುತ್ತದೆ. ಆ ಫಾರ್ಮ್ ಭರ್ತಿ ಮಾಡಿದರಾಯಿತು. ಇಂಟರ್ನೆಟ್‌ಗೆ ಸಂಪರ್ಕವಾಗಿರುವ ನಿಮ್ಮ ಆಂಡ್ರಾಯ್ಡ್ ಫೋನ್ ಸಕಾಲಕ್ಕೆ ನಿಮಗೆ ಅದನ್ನು ನೋಟಿಫಿಕೇಶನ್ ಮೂಲಕ ಸೂಚನೆ ನೀಡುತ್ತದೆ.
ಇವನ್ನೂ ನೋಡಿ
ಹೆಸರು ಮೂರಾಬಟ್ಟೆ: ಇದು ಸೂಪರ್ ಪವರ್ ಆಗೋ ಭಾರತದ ಸ್ಥಿತಿ!
ಈ ದೇಶಕ್ಕೆ ಏನು ಗಂಡಾಂತರ ಕಾದಿದೆಯೋ ಗೊತ್ತಿಲ್ಲ... ಒಂದು ಕಾಲದಲ್ಲಿ ಭಾರತ ಸೂಪರ್ ಪವರ್ ಆಗುವತ್ತ ದಾಪುಗಾಲಿಟ್ಟಿದೆ ಎಂಬ ಮಾತು ಕೇಳಿಬರುತ್ತಿತ್ತು. ಹೆಚ್ಚೇನಿಲ್ಲ, ಕೇವಲ ಆರೇಳು ವರ್ಷಗಳ ಹಿಂದೆ. ಈಗೇನಾಗಿದೆ? ರಾಜಕಾರಣಿಗಳ ಹಣದ...