Google.com ಅಂತ ನಾವೆಲ್ಲಾ ಹೆಚ್ಚಾಗಿ ಸರ್ಚ್ ಎಂಜಿನ್ ಬಳಸುತ್ತೇವೆ. ಆದರೆ, ಇದನ್ನೇ ತಿರುಗಿಸಿ ಉಲ್ಟಾ ಬರೆದರೆ ಹೇಗಿರುತ್ತದೆ? ಉಲ್ಟಾ ಸೈಟೇ ಕಾಣಿಸುತ್ತದೆ! com.Google ಅಂತ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಎಂಟರ್ ಕೊಡಿ. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಎಲ್ಲ ಪದಗಳು ಉಲ್ಟಾ ಆಗಿ ಗೋಚರಿಸುತ್ತವೆ. ಅಷ್ಟು ಮಾತ್ರವೇ ಅಲ್ಲ, ನೀವು ಅದರಲ್ಲಿ ಯಾವುದನ್ನಾದರೂ ಸರ್ಚ್ ಮಾಡಬೇಕೆಂದು ಟೈಪ್ ಮಾಡುತ್ತಾ ಹೋದರೆ, ಅದು ಕೂಡ ಕನ್ನಡಿಯಲ್ಲಿ ಕಾಣುವಂತೆ ತಿರುಗಾಮುರುಗಾ ಆಗಿ ಗೋಚರಿಸುತ್ತದೆ. ಚೆಕ್ ಮಾಡಿ!
ಇವನ್ನೂ ನೋಡಿ
ಮೊಬೈಲ್ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್
ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಟೈಪಿಂಗ್ ದೊಡ್ಡ ಸಮಸ್ಯೆಯಾಗಿ...


