Google.com ಅಂತ ನಾವೆಲ್ಲಾ ಹೆಚ್ಚಾಗಿ ಸರ್ಚ್ ಎಂಜಿನ್ ಬಳಸುತ್ತೇವೆ. ಆದರೆ, ಇದನ್ನೇ ತಿರುಗಿಸಿ ಉಲ್ಟಾ ಬರೆದರೆ ಹೇಗಿರುತ್ತದೆ? ಉಲ್ಟಾ ಸೈಟೇ ಕಾಣಿಸುತ್ತದೆ! com.Google ಅಂತ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಎಂಟರ್ ಕೊಡಿ. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಎಲ್ಲ ಪದಗಳು ಉಲ್ಟಾ ಆಗಿ ಗೋಚರಿಸುತ್ತವೆ. ಅಷ್ಟು ಮಾತ್ರವೇ ಅಲ್ಲ, ನೀವು ಅದರಲ್ಲಿ ಯಾವುದನ್ನಾದರೂ ಸರ್ಚ್ ಮಾಡಬೇಕೆಂದು ಟೈಪ್ ಮಾಡುತ್ತಾ ಹೋದರೆ, ಅದು ಕೂಡ ಕನ್ನಡಿಯಲ್ಲಿ ಕಾಣುವಂತೆ ತಿರುಗಾಮುರುಗಾ ಆಗಿ ಗೋಚರಿಸುತ್ತದೆ. ಚೆಕ್ ಮಾಡಿ!
ಇವನ್ನೂ ನೋಡಿ
ಟೆಕ್ ಟಾನಿಕ್: ಫಾರ್ವರ್ಡ್ ಸಂದೇಶ ಗುರುತಿಸುವುದು ಸುಲಭ
ವಾಟ್ಸ್ಆ್ಯಪ್ನಲ್ಲಿ ಯಾವುದೇ ಸಂದೇಶದ ಪೂರ್ವಾಪರ ನೋಡದೆ ನಾವು ಒಳಿತು-ಕೆಡುಕು ವಿಚಾರಿಸದೆ ಬೇರೆ ಗ್ರೂಪುಗಳಿಗೆ, ತಮ್ಮ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಿರುತ್ತೇವೆ. ಇಂಥ ಸಂದರ್ಭದಲ್ಲಿ ಈ ಉತ್ತಮ ಲೇಖನಗಳು ಫಾರ್ವರ್ಡ್ ಮಾಡಿದವರೇ ಬರೆದಿದ್ದೋ ಎಂಬ ಗೊಂದಲ...




