Google.com ಅಂತ ನಾವೆಲ್ಲಾ ಹೆಚ್ಚಾಗಿ ಸರ್ಚ್ ಎಂಜಿನ್ ಬಳಸುತ್ತೇವೆ. ಆದರೆ, ಇದನ್ನೇ ತಿರುಗಿಸಿ ಉಲ್ಟಾ ಬರೆದರೆ ಹೇಗಿರುತ್ತದೆ? ಉಲ್ಟಾ ಸೈಟೇ ಕಾಣಿಸುತ್ತದೆ! com.Google ಅಂತ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಎಂಟರ್ ಕೊಡಿ. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಎಲ್ಲ ಪದಗಳು ಉಲ್ಟಾ ಆಗಿ ಗೋಚರಿಸುತ್ತವೆ. ಅಷ್ಟು ಮಾತ್ರವೇ ಅಲ್ಲ, ನೀವು ಅದರಲ್ಲಿ ಯಾವುದನ್ನಾದರೂ ಸರ್ಚ್ ಮಾಡಬೇಕೆಂದು ಟೈಪ್ ಮಾಡುತ್ತಾ ಹೋದರೆ, ಅದು ಕೂಡ ಕನ್ನಡಿಯಲ್ಲಿ ಕಾಣುವಂತೆ ತಿರುಗಾಮುರುಗಾ ಆಗಿ ಗೋಚರಿಸುತ್ತದೆ. ಚೆಕ್ ಮಾಡಿ!
ಇವನ್ನೂ ನೋಡಿ
ಟೆಕ್ ಟಾನಿಕ್: ಪದ ವಿವರಣ ಕೋಶ
ಕಂಪ್ಯೂಟರ್ ಹಾಗೂ ಮೊಬೈಲ್ ಮುಂತಾದ ಸಾಧನಗಳನ್ನು ಬಳಸುತ್ತಿರುವವರಿಗೆ ಕೆಲವೊಂದು ಇಂಗ್ಲಿಷ್ ಪದಗಳ ಅರ್ಥ ತಿಳಿಯುವ ತುಡಿತ ಇರುತ್ತದೆ. ರ್ಯಾಮ್ ಅಂದರೇನು, ನೆಟ್ ನ್ಯೂಟ್ರಾಲಿಟಿ, ಮೆಗಾಬಿಟ್, ಕ್ಲಿಪ್ ಬೋರ್ಡ್, ಎಫ್ಟಿಪಿ, ಬಗ್, ಹಾರ್ಡ್ ಡಿಸ್ಕ್,...