ಕಂಪ್ಯೂಟರಿನಲ್ಲಿ ಕ್ಯಾಲ್ಕುಲೇಟರ್ ಅಡಕವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದನ್ನು Programmes ನಲ್ಲಿ Accessories ಎಂಬಲ್ಲಿ ಹುಡುಕಿ ಹೋಗುವುದು ಸ್ವಲ್ಪ ಸುತ್ತಿ ಬಳಸುವ ವಿಧಾನ. ಆದರೆ, ಕ್ಷಿಪ್ರವಾಗಿ ಕ್ಯಾಲ್ಕುಲೇಟರ್ ತೆರೆಯಬೇಕೆಂದರೆ ಏನು ಮಾಡಬಹುದು? ನಿಮ್ಮ ಕಂಪ್ಯೂಟರಿನಲ್ಲಿ Start ಬಟನ್ (ವಿಂಡೋಸ್ ಲೋಗೋ) ಇರುವಲ್ಲಿ Run ಅಂತ ಬರೆದಿರುವುದನ್ನು ಕ್ಲಿಕ್ ಮಾಡಿದರೆ ಅಥವಾ ಕೀಬೋರ್ಡ್‌ನ ವಿಂಡೋಸ್ ಬಟನ್ ಹಾಗೂ R ಒತ್ತಿದಾಗ ತೆರೆದುಕೊಳ್ಳುವ ಬಾಕ್ಸ್‌ನಲ್ಲಿ Calc ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಕ್ಯಾಲ್ಕುಲೇಟರ್ ಓಪನ್ ಆಗಿಯೇಬಿಟ್ಟಿತು.
ಇವನ್ನೂ ನೋಡಿ
ಸ್ಲೋ ಆಗಿರುವ ಕಂಪ್ಯೂಟರಿನ ವೇಗ ಹೆಚ್ಚಿಸಬೇಕೇ? ನೀವೇ ಮಾಡಿನೋಡಿ!
ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014ಸಮಯ ಕಳೆದಂತೆ ನಮ್ಮ ಡೆಸ್ಕ್ಟಾಪ್ ಅಥವಾ ಲ್ಯಾಪ್ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವುದು ಸಾಧ್ಯವಾಗದು. ಈ ರೀತಿ ನಿಧಾನಗತಿಗೆ...

