ಕಂಪ್ಯೂಟರಿನಲ್ಲಿ ಕ್ಯಾಲ್ಕುಲೇಟರ್ ಅಡಕವಾಗಿದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ ಅದನ್ನು Programmes ನಲ್ಲಿ Accessories ಎಂಬಲ್ಲಿ ಹುಡುಕಿ ಹೋಗುವುದು ಸ್ವಲ್ಪ ಸುತ್ತಿ ಬಳಸುವ ವಿಧಾನ. ಆದರೆ, ಕ್ಷಿಪ್ರವಾಗಿ ಕ್ಯಾಲ್ಕುಲೇಟರ್ ತೆರೆಯಬೇಕೆಂದರೆ ಏನು ಮಾಡಬಹುದು? ನಿಮ್ಮ ಕಂಪ್ಯೂಟರಿನಲ್ಲಿ Start ಬಟನ್ (ವಿಂಡೋಸ್ ಲೋಗೋ) ಇರುವಲ್ಲಿ Run ಅಂತ ಬರೆದಿರುವುದನ್ನು ಕ್ಲಿಕ್ ಮಾಡಿದರೆ ಅಥವಾ ಕೀಬೋರ್ಡ್‌ನ ವಿಂಡೋಸ್ ಬಟನ್ ಹಾಗೂ R ಒತ್ತಿದಾಗ ತೆರೆದುಕೊಳ್ಳುವ ಬಾಕ್ಸ್‌ನಲ್ಲಿ Calc ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಕ್ಯಾಲ್ಕುಲೇಟರ್ ಓಪನ್ ಆಗಿಯೇಬಿಟ್ಟಿತು.
ಇವನ್ನೂ ನೋಡಿ
ಆನ್ಲೈನ್ನಲ್ಲಿಯೂ ಮಕ್ಕಳ ರಕ್ಷಣೆ: ಪೋಷಕರಿಗೆ ಹೆಚ್ಚುವರಿ ಜವಾಬ್ದಾರಿ
ಕಳೆದ ವಾರ ಬೆಂಗಳೂರಲ್ಲೇ ನಡೆದ ಒಂದು ಘಟನೆ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾದ ಮುಂಬಯಿಯ 'ಸ್ನೇಹಿತ'ನೊಬ್ಬ ಕಿರುಕುಳ ನೀಡುತ್ತಿದ್ದಾನೆ, ಕಾಲೇಜಿಗೆ ಬಂದು ಪೀಡಿಸಿದ್ದಾನೆ, ಫೋಟೋಗಳನ್ನು ತಿದ್ದುಪಡಿ ಮಾಡಿ ಬೆದರಿಸುತ್ತಿದ್ದಾನೆ ಅಂತ ಬೆಂಗಳೂರಿನ ಪಿಯು...