ಐಫೋನ್ ಕಳೆದುಹೋಗಿದೆ, ಪೊಲೀಸರಿಗೆ ದೂರು ನೀಡಲು ಅದರ IMEI ನಂಬರ್ ಬೇಕೇ ಬೇಕು. ಆದರೆ ಬಿಲ್ ಕೂಡ ಇಲ್ಲ, ಫೋನ್‌ನ ಬಾಕ್ಸ್ ಕೂಡ ಇಟ್ಟುಕೊಂಡಿಲ್ಲ. ಏನು ಮಾಡಬೇಕು? ಐಫೋನ್‌ನ IMEI ನಂಬರ್ ಪತ್ತೆ ಹಚ್ಚಲು ಮತ್ತೊಂದು ಮಾರ್ಗವಿದೆ. ಅದೆಂದರೆ, ಐಫೋನ್ ಹೊಂದಿರುವವರು ಅದನ್ನು iTunes ಎಂಬ ಆ್ಯಪ್ ಸ್ಟೋರ್‌ಗೆ ಲಿಂಕ್ ಮಾಡಿದಾಗ ಅದು ತಾನಾಗಿ ಸಿಂಕ್ ಆಗಿರುತ್ತದೆ. ಅದರಲ್ಲಿ ಫೋನಿನ ಮಾಹಿತಿಯ ಬ್ಯಾಕಪ್ ಇರುತ್ತದೆ. IMEI ನಂಬರ್ ನೋಡಲು ಕಂಪ್ಯೂಟರಿನಲ್ಲಿ iTunes ವೆಬ್ ತಾಣಕ್ಕೆ ಲಾಗಿನ್ ಆಗಿ ಅದರಲ್ಲಿ Preferences -> Devices ಎಂಬಲ್ಲಿಂದ ಫೋನ್ ಬ್ಯಾಕಪ್ ಆಯ್ಕೆ ಮಾಡಿದರೆ, IMEI ನಂಬರ್ ಸಂದೇಶದ ವಿಂಡೋದಲ್ಲಿ ಕಾಣಿಸುತ್ತದೆ. ಆದರೂ, ಎಲ್ಲಾದರೂ ಒಂದುಕಡೆ ಅದನ್ನು ಬರೆದಿಟ್ಟುಕೊಳ್ಳುವುದು ಸೂಕ್ತ.
ಇವನ್ನೂ ನೋಡಿ
ಗೂಗ್ಲಾಸುರನಿಗೆ ನಮಸ್ಕಾರ
ಏಯ್ ಮರೀ, ನಿನ್ನ ಹೆಸರೇನು? 'ಅಲಕ್ಷಿತಾ' 'ಇದೂ ಒಂದು ಹೆಸರಾ' ಅಂತ ನಾನಂದ್ಕೋತೀನಿ, ಆದ್ರೆ ಬಾಯ್ಬಿಟ್ಟು ಹೇಳಲ್ಲ. 'ನನ್ನ ಅಣ್ಣನ್ ಹೆಸ್ರು ಏನ್ ಗೊತ್ತಾ, ನಿಂದನ್!' 'ಓಹ್.' ಇದೊಂದು ಟ್ರೆಂಡ್. ಹುಡುಗ ಆದ್ರೆ ಮೂರು-ಮೂರುವರೆ ಅಕ್ಷರದ ಹೆಸ್ರು, ಹುಡ್ಗಿಯಾದ್ರೆ ನಾಲ್ಕಕ್ಷರ...



