ನಿಮಗೆ ಯಾವ ರೀತಿಯ ಆಂಡ್ರಾಯ್ಡ್ ಫೋನ್ ಬೇಕೆಂಬ ಪರಿಕಲ್ಪನೆಯಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಾವಿರಾರು ಫೋನುಗಳು, ವಿಭಿನ್ನ ವಿನ್ಯಾಸ ಹಾಗೂ ವೈಶಿಷ್ಟ್ಯಗಳೊಂದಿಗೆ ರಾಶಿಬಿದ್ದಿವೆ. ಯಾವುದನ್ನು ಖರೀದಿಸಬೇಕೆಂದು ಆಯ್ಕೆ ಮಾಡಿಕೊಳ್ಳುವುದೇ ದೊಡ್ಡ ಸಮಸ್ಯೆ. ಇದಕ್ಕೆ ಗೂಗಲ್ ನೆರವಾಗಿದೆ. http://vknet.in/Phone ಪುಟದಲ್ಲಿ ಹೋಗಿ, ಏನೆಲ್ಲ ಬೇಕೆಂಬುದನ್ನು ಒಂದೊಂದಾಗಿ ಆಯ್ಕೆ ಮಾಡಿಕೊಳ್ಳುತ್ತಾ ಹೋಗಿ. ಯಾವೆಲ್ಲಾ ಆಂಡ್ರಾಯ್ಡ್ ಫೋನ್ ಮಾಡೆಲ್‌ಗಳು ಸೂಕ್ತ ಎಂಬುದನ್ನು ಈ ತಾಣವೇ ತೋರಿಸುತ್ತದೆ. ಅಲ್ಲಿಂದಲೇ ಖರೀದಿ ಮಾಡುವ ಆಯ್ಕೆಯೂ ಇದೆ. ಆದರೆ, ಕೊನೆಯಲ್ಲಿ ಕ್ಯಾರಿಯರ್ (ಮೊಬೈಲ್ ನೆಟ್‌ವರ್ಕ್ ಸೇವಾದಾರರು) ಆಯ್ಕೆ ಮಾಡಿಕೊಳ್ಳಲು ಹೇಳಲಾಗುತ್ತದೆ. ಅದು ಭಾರತಕ್ಕೆ ಸಂಬಂಧಿಸಿದ್ದಲ್ಲ. ಹೀಗಾಗಿ ಅದನ್ನು ಸ್ಕಿಪ್ ಮಾಡಿದರಾಯಿತು.
ಇವನ್ನೂ ನೋಡಿ
ಕಳ್ಳಗಣ್ಣಿನ ಸ್ಪೈ ಕ್ಯಾಮೆರಾ: ಎಲ್ಲೆಲ್ಲೂ ಇರಬಹುದು, ಎಚ್ಚರ!
ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾಗಳು ಭಾರಿ ಸದ್ದು ಮಾಡುತ್ತಿವೆ. ಅಪರಾಧಗಳ ಪತ್ತೆ ಕಾರ್ಯದಲ್ಲಿ ಅವುಗಳ ಕಾರ್ಯ ಮಹತ್ವದ್ದು. ಇದು ಅನ್ಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಪುಕಾರು ಕೇಳಿಬಂದರೂ, ಭದ್ರತೆಯ ದೃಷ್ಟಿಯಿಂದಾಗಿ ಈ ಮುಂದುವರಿದ ತಂತ್ರಜ್ಞಾನವು...




