ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ ಕೆಲವರಿಗಿನ್ನೂ ಸಂದೇಹವಿದೆ. ಅದೆಂದರೆ, ಅರ್ಧ ವ್ಯಂಜನಗಳು ಕೂಡಿಕೊಳ್ಳದಂತೆ ಮಾಡುವುದು ಹೇಗೆ? ಉದಾಹರಣೆಗೆ, ‘ಫೇಸ್‌ಬುಕ್’ ಅಂತ ಬರೆಯಬೇಕಿರುವುದು ‘ಫೇಸ್ಬುಕ್’ ಅಂತಾಗುತ್ತದೆ. ಈ ರೀತಿಯಾಗಿ ಅರ್ಧಾಕ್ಷರದ ಅಂತ್ಯವು ಮುಂದಿನ ವ್ಯಂಜನಾಕ್ಷರದೊಂದಿಗೆ ಕೂಡಿಕೊಳ್ಳದಂತೆ ಮಾಡುವುದಕ್ಕೆ ಹಲವರು ತ್ರಾಸ ಪಡುತ್ತಿದ್ದಾರೆ. ಅಕ್ಷರಗಳು ಕೂಡಿಕೊಳ್ಳದಂತೆ ಮಾಡಲು, ಯುನಿಕೋಡ್ ಅಕ್ಷರ ಶೈಲಿಯಲ್ಲಿ ‘ಝೀರೋ ವಿಡ್ತ್ ನಾನ್ ಜಾಯಿನರ್’ (ZWNJ) ಎಂಬ ಅಗೋಚರ ಅಕ್ಷರವೊಂದು ಸಹಕರಿಸುತ್ತದೆ. ಸ್ಕ್ರೀನ್ ಕೀಬೋರ್ಡಿನಲ್ಲಿ ಸ್ಪೇಸ್ ಅಕ್ಷರದ ಬಲಭಾಗದಲ್ಲೊಂದು ಕೀ ಇದೆ (ಚಿತ್ರ ನೋಡಿ). ಸ್+ZWNJ+ಬು ಬರೆದರೆ ಸ್‌ಬು ಅಂತ ಪ್ರತ್ಯೇಕವಾಗುತ್ತದೆ.
ಇವನ್ನೂ ನೋಡಿ
ಮೊಬೈಲ್ ಇರೋದು ಮಕ್ಳ್ ಕೈಲಲ್ವೇ?
"ಪುಟ್ಟಾ, ಎಷ್ಟೂಂತ ಆ ಮೊಬೈಲ್ ಫೋನ್ ಬಳಸ್ತೀಯಾ?"
"ಇಲ್ಲಮ್ಮಾ, ಚೂರೇ ಚೂರು. ಒಂದ್ಗಂಟೆ ಮಾತ್ರ"
***
"ಬೋರಾಗ್ತಿದೆ, ಮೊಬೈಲ್ ಕೊಡಮ್ಮಾ"
"ಫ್ರೆಂಡ್ಸೆಲ್ಲ ಮೊಬೈಲ್ ಆಡ್ತಾರೆ, ನಂಗ್ಯಾಕಮ್ಮಾ ಬಿಡಲ್ಲ?"
"ಇಲ್ಲಮ್ಮ, ಇನ್ನೂ ಒಂದು ಗಂಟೆ ಆಗಿಲ್ಲ, ತಡಿ"
***
"ಅಪ್ಪ ನೋಡಿದ್ರೆ ಯಾವಾಗ್ಲೂ ಮೊಬೈಲ್...