ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿರುವವರಿಗೆ, ನಿರ್ದಿಷ್ಟ ವಿಷಯವೊಂದರ ಬಗ್ಗೆ ಮೊದಲು ಟ್ವೀಟ್ ಮಾಡಿದ್ದು ಯಾರು ಅಂತ ತಿಳಿದುಕೊಳ್ಳುವ ಕುತೂಹಲವಿರಬಹುದು. ಉದಾಹರಣೆಗೆ, ಮೊನ್ನೆ ನಟ ಸಲ್ಮಾನ್ ಖಾನ್‌ಗೆ ಶಿಕ್ಷೆ ಪ್ರಕಟವಾದ ದಿನ #SalmanVerdict ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಲಕ್ಷಾಂತರ ಟ್ವೀಟ್‌ಗಳು ಹರಿದಾಡಿದವು. ಆದರೆ ಅದನ್ನು ಮೊದಲು ಪ್ರಾರಂಭಿಸಿದ್ದು ಯಾರು ಅಂತ ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿಯೇ ಒಂದು ಜಾಲ ತಾಣವಿದೆ. http://ctrlq.org/first/ ಎಂಬಲ್ಲಿಗೆ ಹೋಗಿ, ಯಾವ ವಿಷಯದ ಟ್ವೀಟ್ ಬೇಕೋ ಅದನ್ನು ಟೈಪ್ ಮಾಡಿ. ಕೆಲವೇ ಕ್ಷಣಗಳಲ್ಲಿ ಅದು ಟ್ವಿಟರ್ ಡೇಟಾಬೇಸ್ ಅನ್ನು ಪರೀಕ್ಷಿಸಿ, ಫಲಿತಾಂಶವನ್ನು ನಿಮ್ಮ ಮುಂದಿಡುತ್ತದೆ.
ಇವನ್ನೂ ನೋಡಿ
ಶ್!!! ಇದು ಪ್ರೈವೇಟ್ ವಿಷ್ಯ!
ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಖ್ಯಾತ ಬ್ರ್ಯಾಂಡ್ನ ಹೊಸ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲೆಂದು ಬ್ರೌಸ್ ಮಾಡುತ್ತಿದ್ದೆ. ಅದು ಹೇಗಿದೆ, ಏನು ವಿಶೇಷತೆ ಅಂತೆಲ್ಲ ತಿಳಿದುಕೊಂಡ ಬಳಿಕ ಬ್ರೌಸರ್ ಮುಚ್ಚಿ, ಬೇರೊಂದು ಅಂತರ್ಜಾಲ ತಾಣವನ್ನು ನೋಡಲೆಂದು...


