ಇಂಟರ್ನೆಟ್ ಇದ್ದರೆ ಏನೆಲ್ಲಾ ಮಾಡಬಹುದೆಂಬುದಕ್ಕೆ ಮತ್ತೊಂದು ಉದಾಹರಣೆ ಇಲ್ಲಿದೆ. ಯಾವುದಾದರೂ ಕೆಲಸ ಮಾಡಬೇಕಿದೆ, ಮೇಲ್ ಕಳಿಸಲೋ, ಯಾರಿಗಾದರೂ ಕರೆ ಮಾಡಲೋ, ಬಿಲ್ ಪಾವತಿಸಲೋ, ನಿರ್ದಿಷ್ಟ ಸಮಯಕ್ಕೆ ಅದರ ಬಗ್ಗೆ ನಿಮಗೆ ನೆನಪಿಸಬೇಕಾಗುತ್ತದೆ. ಯಾರಲ್ಲಿ ಹೇಳುವುದು? ಎಲ್ಲರೂ ಮರೆಗುಳಿಗಳೇ! ಇನ್ನು ಯೋಚನೆ ಬೇಕಾಗಿಲ್ಲ. ಗೂಗಲ್ ಇದೆ. ಗೂಗಲ್ ಸರ್ಚ್ ಪುಟದಲ್ಲಿ ಹೋಗಿ, Set a reminder ಅಂತ ಟೈಪ್ ಮಾಡಿ, ಎಂಟರ್ ಕೊಡಿ. ಒಂದು ಸ್ಕ್ರೀನ್ ಕಾಣಿಸುತ್ತದೆ. ಯಾವುದರ ಬಗ್ಗೆ, ಯಾವಾಗ, ಎಲ್ಲಿ, ಯಾವ ದಿನಾಂಕ, ಸಮಯಕ್ಕೆ ಎಂದೆಲ್ಲಾ ಕೇಳುತ್ತದೆ. ಆ ಫಾರ್ಮ್ ಭರ್ತಿ ಮಾಡಿದರಾಯಿತು. ಇಂಟರ್ನೆಟ್‌ಗೆ ಸಂಪರ್ಕವಾಗಿರುವ ನಿಮ್ಮ ಆಂಡ್ರಾಯ್ಡ್ ಫೋನ್ ಸಕಾಲಕ್ಕೆ ನಿಮಗೆ ಅದನ್ನು ನೋಟಿಫಿಕೇಶನ್ ಮೂಲಕ ಸೂಚನೆ ನೀಡುತ್ತದೆ.
ಇವನ್ನೂ ನೋಡಿ
ಮತದಾರರಿಗೆ ನೀಡಿದ ಭರವಸೆಗಳು ಗಾಳಿಯಲ್ಲಿ!
ಚುನಾವಣಾ ಫಲಿತಾಂಶಗಳು ಮತ್ತೊಂದು ಅತಂತ್ರ ವಿಧಾನಸಭೆಯನ್ನು ಸೃಷ್ಟಿಸುವುದು ಹೆಚ್ಚಿನ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ. ಅದು ಹಾಗಾದರೆ, ಓಟಿಗಾಗಿ ಕೋಟಿ ಕೋಟಿ ಖರ್ಚು ಮಾಡಿ ಅಧಿಕಾರ ಸಿಗದವರು ಸುಮ್ಮನಿರುತ್ತಾರೆಯೇ? ಅಥವಾ ಹೇಗಾದರೂ ಮಾಡಿ ಸರಕಾರವೊಂದನ್ನು ಸ್ಥಾಪಿಸದಿರಲು ಅವರೇನು ಪೆದ್ದರೇ? ಖಂಡಿತಾ ಅಲ್ಲ. ಮತ್ತೆ ಮೈತ್ರಿಗೆ ಮುಂದಾಗುತ್ತಾರೆ. 'ಜನತೆಯ ಮೇಲೆ ಚುನಾವಣೆ ಹೇರಲು ನಮಗೆ ಇಷ್ಟವಿಲ್ಲ, ಅದಕ್ಕೆ ಈ ಮೈತ್ರಿ ಅನಿವಾರ್ಯ' ಎಂಬ ರಾಜಕೀಯ ಕ್ಷೇತ್ರದಲ್ಲಿ ಹಳಸಿಹೋದ ವಾಕ್ಯವೊಂದು ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತದೆ. ಇದು ವ್ಯವಸ್ಥೆಯ ವ್ಯಂಗ್ಯ.

