Google.com ಅಂತ ನಾವೆಲ್ಲಾ ಹೆಚ್ಚಾಗಿ ಸರ್ಚ್ ಎಂಜಿನ್ ಬಳಸುತ್ತೇವೆ. ಆದರೆ, ಇದನ್ನೇ ತಿರುಗಿಸಿ ಉಲ್ಟಾ ಬರೆದರೆ ಹೇಗಿರುತ್ತದೆ? ಉಲ್ಟಾ ಸೈಟೇ ಕಾಣಿಸುತ್ತದೆ! com.Google ಅಂತ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಎಂಟರ್ ಕೊಡಿ. ಗೂಗಲ್ ಸರ್ಚ್ ಎಂಜಿನ್‌ನಲ್ಲಿರುವ ಎಲ್ಲ ಪದಗಳು ಉಲ್ಟಾ ಆಗಿ ಗೋಚರಿಸುತ್ತವೆ. ಅಷ್ಟು ಮಾತ್ರವೇ ಅಲ್ಲ, ನೀವು ಅದರಲ್ಲಿ ಯಾವುದನ್ನಾದರೂ ಸರ್ಚ್ ಮಾಡಬೇಕೆಂದು ಟೈಪ್ ಮಾಡುತ್ತಾ ಹೋದರೆ, ಅದು ಕೂಡ ಕನ್ನಡಿಯಲ್ಲಿ ಕಾಣುವಂತೆ ತಿರುಗಾಮುರುಗಾ ಆಗಿ ಗೋಚರಿಸುತ್ತದೆ. ಚೆಕ್ ಮಾಡಿ!
ಇವನ್ನೂ ನೋಡಿ
Gmail ನಲ್ಲಿ ಉಚಿತ ಎಸ್ಸೆಮ್ಮೆಸ್: ಹೀಗೆ ಮಾಡಿ!
ಕಳೆದ ಬುಧವಾರ ಗೂಗಲ್ನ ಇಮೇಲ್ ಸೇವೆ Gmail ತೆರೆದವರಿಗೊಂದು ಅಚ್ಚರಿ ಕಾದಿತ್ತು. ಅದೆಂದರೆ ಇಮೇಲ್ ಮೂಲಕವೇ SMS ಕಳುಹಿಸಬಹುದೆಂಬ ಸೂಚನೆ! ವಾಸ್ತವವಾಗಿ ಈ ವ್ಯವಸ್ಥೆ ಹಿಂದಿನಿಂದಲೂ ಇದ್ದರೂ ಭಾರತದಲ್ಲಿ ಮಾತ್ರ ಲಭ್ಯವಾಗಿರಲಿಲ್ಲ. ಈಗ...