ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಮನರಂಜನೆ. ಗೂಗಲ್ ಸರ್ಚ್ ಎಂಜಿನ್ ತೆರೆಯಿರಿ. tilt ಅಂತ ಬರೆದು ಸರ್ಚ್ ಮಾಡಿ. ನಿಮ್ಮ ಸ್ಕ್ರೀನ್ ಟಿಲ್ಟ್ ಆದಂತೆ (ಓರೆಯಾಗಿ ವಾಲಿದಂತೆ) ಕಾಣಿಸುತ್ತದೆ. ಇದು ಗೂಗಲ್ ಎಂಜಿನಿಯರ್‌ಗಳು ಮನರಂಜನೆಗಾಗಿಯೇ ಮಾಡಿದ ಕೆಲಸ. ಇನ್ನು ಮೊದಲ ಲಿಂಕ್ ಕಾಣಸಿಗುತ್ತದೆಯಲ್ಲ, ಅದನ್ನು http://elgoog.im/tilt/ ಕ್ಲಿಕ್ ಮಾಡಿ. ಅದರಲ್ಲಿ ಯಾವುದೇ ಪದವನ್ನು ಟೈಪ್ ಮಾಡಿ ಹುಡುಕಿ. ಉಲ್ಟಾ ಸರ್ಚ್ ಮಾಡಿ ತೋರಿಸುತ್ತದೆ.
ಇವನ್ನೂ ನೋಡಿ
Oppo F19 Review: ಉತ್ತಮ ಕ್ಯಾಮೆರಾ, ಭರ್ಜರಿ ಬ್ಯಾಟರಿ
ಚೀನಾ ಮೂಲದ ಒಪ್ಪೋ ಸ್ಮಾರ್ಟ್ ಮೊಬೈಲ್ ತಯಾರಕ ಕಂಪನಿಯು ಎಫ್19 ಎಂಬ ವಿನೂತನ ಮೊಬೈಲ್ ಫೋನನ್ನು ಈ ತಿಂಗಳ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಎರಡು ವಾರ ಬಳಸಿ ನೋಡಿದಾಗ ಅದು...