ಟೆಕ್ನೋ ಕ್ಯಾಮಾನ್ ಐ ಫೋನ್ ಹೇಗಿದೆ?

0
607

Camon iಅವಿನಾಶ್ ಬಿ.
ಹಾಂಕಾಂಗ್ ಮೂಲ ಟ್ರಾನ್ಸಿಶನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಮತ್ತೊಂದು ಫೋನ್ ಈಗ ಮಾರುಕಟ್ಟೆಗೆ ಬಂದಿದೆ. ಹೆಸರು ಕ್ಯಾಮಾನ್ ಐ. ಹೆಸರೇ ಹೇಳುವಂತೆ ಕ್ಯಾಮೆರಾ ಕೇಂದ್ರಿತ ಮೊಬೈಲ್ ಇದು ಎನ್ನುತ್ತದೆ ಕಂಪನಿ.

ಇದನ್ನು ಎರಡು ವಾರ ಬಳಸಿ ನೋಡಿದೆ. ಹೇಗಿದೆ?

Camon i ಫೋನ್‌ನ ಸ್ಪೆಸಿಫಿಕೇಶನ್ಸ್
13MP ಪ್ರಧಾನ ಕ್ಯಾಮೆರಾ ƒ/2.0 , ಜತೆಗೆ ಕ್ವಾಡ್ LED ಫ್ಲ್ಯಾಶ್
13MP ಸೆಲ್ಫೀ (ಮುಂಭಾಗದ ಕ್ಯಾಮೆರಾ) ƒ/2.0, LED ಫ್ಲ್ಯಾಶ್ ಹಾಗೂ ಸ್ಕ್ರೀನ್ ಫ್ಲ್ಯಾಶ್
14.35 cm (5.65 ಇಂಚು) ಟೆಕ್ನೋ ಫುಲ್ ವ್ಯೂ HD+ ಐಪಿಎಸ್ ಡಿಸ್‌ಪ್ಲೇ
2 SIM ಕಾರ್ಡ್ + Memory ಕಾರ್ಡ್ ಸ್ಲಾಟ್
ಕಾರ್ನಿಂಗ್ ಗೊರಿಲ್ಲಾ ಗ್ಲಾಸ್
ಆಂಡ್ರಾಯ್ಡ್ 7.0 ನೌಗಾಟ್ ಆಧಾರಿತ HiOS ಎಂಬ ಕಾರ್ಯಾಚರಣಾ ವ್ಯವಸ್ಥೆ
64-ಬಿಟ್ ಕ್ವಾಡ್ ಕೋರ್, MediaTek MT6737 1.3GHz ಪ್ರೊಸೆಸರ್
ಮೆಮೊರಿ: 32 GB ROM, 3GB RAM; 128GB ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ: 13MP + 13MP ಎರಡು ಕ್ಯಾಮೆರಾಗಳು
ಬ್ಯಾಟರಿ: 3050 mAh
ಸಾಮಾನ್ಯ ವೈಶಿಷ್ಟ್ಯಗಳು: ವೈಫೈ, ಬ್ಲೂಟೂತ್, ಜಿಪಿಎಸ್,
ಬೆಲೆ: 8999/-

ಮತ್ತಷ್ಟು
ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುವ ಏಂಬಿಯಂಟ್ ಲೈಟ್ ಸೆನ್ಸರ್
ಫಿಂಗರ್‌ಪ್ರಿಂಟ್ ಸೆನ್ಸರ್,
ಪ್ರಾಕ್ಸಿಮಿಟಿ ಸೆನ್ಸರ್
4ಜಿ VoLTE ಬೆಂಬಲ ಇದೆ.

ಮೊದಲ ಇಂಪ್ರೆಶನ್: ಸ್ಪೆಸಿಫಿಕೇಶನ್ ಗಮನಿಸಿದರೆ ಈ ಬೆಲೆಗೆ ಸಿಗುವ ಉತ್ತಮ ಫೋನ್ ಇದು. ಜತೆಗೆ ತೆಳ್ಳಗಿದೆ ಹಾಗೂ ತೂಕವೂ ಕಡಿಮೆ. ಕೈಯಲ್ಲಿ ಹಿಡಿಯಲು ತುಂಬಾ ಅನುಕೂಲ. ಸ್ಮಾರ್ಟ್ ಫೋನ್ ನೋಡಿದ ತಕ್ಷಣ ಹೊಳೆದದ್ದು ಇದು.

ಎರಡು ಜಿಎಸ್ಎಂ ನ್ಯಾನೋ ಸಿಮ್ ಕಾರ್ಡ್‌ಗಳ ಜತೆಗೆ ಪ್ರತ್ಯೇಕವಾಗಿ 128 ಜಿಬಿ ವರೆಗಿನ ಮೆಮೊರಿ ಕಾರ್ಡ್ ಬೆಂಬಲಿಸುವುದರಿಂದ ಫೋಟೋ/ವೀಡಿಯೋಗಳಿಗೆ ಹೆಚ್ಚು ಅನುಕೂಲ. ಆಂಡ್ರಾಯ್ಡ್‌ನ ಇತ್ತೀಚಿನ 7.0 ಆವೃತ್ತಿ ಆಧಾರಿತ ಹಾಯ್ ಒಎಸ್ ಕಾರ್ಯಾಚರಣಾ ವ್ಯವಸ್ಥೆ ಇದ್ದು, 720x 1440 ಪಿಕ್ಸೆಲ್ ಸ್ಕ್ರೀನ್ ರೆಸೊಲ್ಯುಶನ್ ಇದೆ.

ಇತರವುಗಳಿಗಿಂತ ಹೇಗೆ ಭಿನ್ನ
ಮೈಕ್ರೋ ಇಂಟೆಲಿಜೆನ್ಸ್ ವೈಶಿಷ್ಟ್ಯ: ಈ ಪೋನ್‌ನ ಸೆಟ್ಟಿಂಗ್ಸ್‌ನಲ್ಲಿ ಮೈಕ್ರೋ ಇಂಟೆಲಿಜೆನ್ಸ್ ಎಂಬ ವೈಶಿಷ್ಟ್ಯವಿದೆ. ಸ್ಕ್ರೀನ್ ಆಫ್ ಇರುವಾಗ ಸ್ಕ್ರೀನ್ ಮೇಲೆ ಎರಡು ಬಾರಿ ತಟ್ಟಿದರೆ, ಸಮಯ ಎಷ್ಟೆಂದು ಹೇಳುತ್ತದೆ. ಹಾಡು ನುಡಿಸಬೇಕಿದ್ದರೆ, ನಿರ್ದಿಷ್ಟ ಸನ್ನೆ ಹೊಂದಿಸುವ ಆಯ್ಕೆಯಿದೆ. ಫೋನನ್ನು ಫ್ಲಿಪ್ ಮಾಡಿದರೆ ಸೈಲೆನ್ಸ್ (ನಿಶ್ಶಬ್ದ) ಮೋಡ್ ಆಗುತ್ತದೆ. ಅಂತೆಯೇ, ರಿಂಗ್ ಆಗುತ್ತಿರುವಾಗ ಸ್ಕ್ರೀನ್ ಕವರ್ ಮಾಡಿದರೆ ಅದು ಮ್ಯೂಟ್ ಆಗುತ್ತದೆ. ಅದೇ ರೀತಿ, ಸ್ಕ್ರೀನ್ ಮೇಲೆ ಮೂರು ಬೆರಳು ಆಡಿಸಿದರೆ ಸ್ಕ್ರೀನ್ ಶಾಟ್ ತೆಗೆಯಬಹುದು, ಇಂಗ್ಲಿಷ್ ಅಕ್ಷರಗಳನ್ನು ಬರೆದರೆ, ನಿರ್ದಿಷ್ಟ ಹೆಸರಿನಿಂದ ಆರಂಭವಾಗುವ ಆ್ಯಪ್ ಲಾಂಚ್ ಮಾಡಬಹುದು.
ಫಿಂಗರ್‌ಪ್ರಿಂಟ್ ತಂತ್ರಜ್ಞಾನವಲ್ಲದೆ ಇದರಲ್ಲಿ ವಾಟ್ಸಾಪ್ ಮೋಡ್ ಎಂಬುದೊಂದಿಗೆ. ಈ ಮೋಡ್‌ನಲ್ಲಿಟ್ಟರೆ ವಾಟ್ಸಾಪ್ ನೋಟಿಫಿಕೇಶನ್‌ಗಳು ಮಾತ್ರ ಕಾಣಿಸುತ್ತವೆ. ಉಳಿದೆಲ್ಲ ಹಿನ್ನೆಲೆ ಆ್ಯಪ್‌ಗಳು ಡಿಸೇಬಲ್ ಆಗುತ್ತವೆ. ಡೇಟಾ (ಇಂಟರ್ನೆಟ್) ಬಳಕೆ ಮೇಲೆ ಕಡಿವಾಣ ಹಾಕಲು ಇದು ಸೂಕ್ತ ಮೋಡ್.

ಕನ್ನಡ ಟೈಪಿಂಗ್ ಕೀಬೋರ್ಡ್ ಅಳವಡಿಕೆಯಾಗಿಯೇ ಬಂದಿದ್ದು, ಇದು ಇನ್‌ಸ್ಕ್ರಿಪ್ಟ್ ಮಾದರಿಯ ಕೀಲಿ ವಿನ್ಯಾಸ ಹೊಂದಿದೆ. ಜತೆಗೆ, ಸುತ್ತಲಿನ ಬೆಳಕಿಗೆ ಸ್ಕ್ರೀನ್ ಬ್ರೈಟ್‌ನೆಸ್ ಸ್ವಯಂಚಾಲಿತವಾಗಿ ಹೊಂದಿಕೊಳ್ಳುವುದರಿಂದ ಕಣ್ಣಿಗೆ ತ್ರಾಸ ಕಡಿಮೆಯಾಗುತ್ತದೆ.

ಕಡಿಮೆ ಬೆಳಕಿನಲ್ಲಿ ಫೋಟೋ ಬ್ಲರ್ ಆಗಿರುತ್ತದೆ ಮತ್ತು ಟಚ್ ಸ್ಕ್ರೀನ್ ತಳಭಾಗದಲ್ಲಿರುವ ಮೆನು ಕೀಗಳಿಗೆ ಹಿಂಬೆಳಕು ಇಲ್ಲದಿರುವುದು ಸಾಮಾನ್ಯ ಕಾರ್ಯಾಚರಣೆಗೆ ಸ್ವಲ್ಪ ತ್ರಾಸವಾಗುತ್ತದೆ. ಅದು ಬಿಟ್ಟರೆ, ಅಗ್ಗದ ದರದಲ್ಲಿ ಒಳ್ಳೆಯ ಸ್ಪೆಸಿಫಿಕೇಶನ್ ಇರುವ ಫೋನ್ ಇದಾಗಿದ್ದು, ತೂಕ ಮತ್ತು ಅಳತೆಗೆ ಸಂಬಂಧಿಸಿದಂತೆ, ಕೈಯಲ್ಲಿ ಹಿಡಿಯಲು ಕೂಡ ಅನುಕೂಲಕರವಾಗಿದೆ.

ವಿಜಯ ಕರ್ನಾಟಕದಲ್ಲಿ ಪ್ರಕಟ

LEAVE A REPLY

Please enter your comment!
Please enter your name here