ಅದಕ್ಕಿಲ್ಲದ ಅವಸರ ಇದಕ್ಕೇಕೆ?

15
2104

ಹೀಗೇ ಯೋಚಿಸ್ತಾ ಕೂತಿದ್ದಾಗ ಹೊಳೆದದ್ದು:
ಪೊಲೀಸರು, ಕೇಂದ್ರ ಸರಕಾರ ಮತ್ತು ಮಹಾರಾಷ್ಟ್ರ ರಾಜ್ಯ ಸರಕಾರಗಳು ಐದಾರು ಜನರ ಸಾವಿಗೆ ಕಾರಣವಾಗಿದ್ದ ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆಯನ್ನು ಮಾಡುತ್ತಿರುವ ರೀತಿಯಲ್ಲಿಯೇ, ನೂರಾರು ಜೀವಗಳನ್ನು ಬಲಿತೆಗೆದುಕೊಂಡ ಅಹಮದಾಬಾದ್, ದೆಹಲಿ, ಜೈಪುರ, ಅಸ್ಸಾಂ, ಮುಂಬೈ ಮುಂತಾದೆಡೆ ನಡೆದ ಸರಣಿ ಬಾಂಬ್ ಸ್ಫೋಟಗಳಿಗೂ ಮಾಡಿದ್ದಿದ್ದರೆ, ಒಂದಷ್ಟು ದೇಶದ್ರೋಹಿಗಳನ್ನಾದರೂ ತಮ್ಮ ಕಪಿಮುಷ್ಟಿಯೊಳಗೆ ಸಿಲುಕಿಸಬಹುದಿತ್ತಲ್ವಾ….? ಯಾಕೆಂದರೆ ಎಲ್ಲ ರೀತಿಯ ಅಧಿಕಾರವೂ ಸರಕಾರದ ಕೈಯಲ್ಲಿದೆ.

ಹೀಗೆ ಕೇಳಿದ್ರೆ ಎಲ್ಲಾದ್ರೂ ನಮ್ಮನ್ನು ಕೋಮುವಾದಿ ಅನ್ನಬಹುದು ಎಂಬ ಆತಂಕ ನನಗೆ ಹುಟ್ಟಿಕೊಂಡಿದ್ದು ಸಹಜ ಅಲ್ವಾ? ಯಾಕೆಂದರೆ, ನಾನು ಮಾತೆತ್ತಿದ್ದು “ಹಿಂದೂ”ಗಳು ಸಿಕ್ಕಿಹಾಕಿಕೊಂಡಿರುವ ಮಾಲೆಗಾಂವ್ ಸ್ಫೋಟ ಪ್ರಕರಣದ ಬಗ್ಗೆ ಅಂತ ಬುದ್ಧಿಜೀವಿಗಳು ಖಂಡಿತಾ ಹೇಳುತ್ತಾರೆ ಅಂತ ನನಗೆ ಗೊತ್ತಿದೆ. ಆದರೆ ನಾನು ಇಲ್ಲಿ ವಿಷಯ ಎತ್ತಿದ್ದು, ತನಿಖಾ ಸಂಸ್ಥೆಗಳು ಎಷ್ಟು ಬೇಕಾದರೂ ತಿಣುಕಾಡಲಿ, ಒತ್ತಡಕ್ಕೊಳಗಾಗಲಿ ಅಥವಾ ಯಾವುದೇ ಆಮಿಷಕ್ಕೂ ಈಡಾಗಲಿ. ಆದ್ರೆ, ಅದೇ ಧಾವಂತವನ್ನು, ಅದೇ ಉತ್ಸಾಹವನ್ನು, ಅದೇ ಕರ್ತವ್ಯ ಪ್ರಜ್ಞೆಯನ್ನು ಬೇರೆ ಭಯೋತ್ಪಾದನಾ ಪ್ರಕರಣಗಳಲ್ಲಿಯೂ ತೋರಿಸಿದ್ದಿದ್ದರೆ ಖಂಡಿತವಾಗಿಯೂ ದೇಶದ್ರೋಹಿಗಳು ಸಿಕ್ಕಿಬೀಳುತ್ತಿದ್ದರು ಅಂತ ಮಾತ್ರ ತಾನೇ? ನನಗೇ ಡೌಟ್ ಆಗತೊಡಗಿದೆ ಈಗ!

ನೀವೇನಂತೀರಿ?

15 COMMENTS

  1. ನಿಜವಾಗಿಯೂ ಸತ್ಯ. ಆದರೆ ದೇಶದ ಹಿತಕ್ಕಿಂತ vote bank ಮುಖ್ಯ ವಾಗಿದೆಯಲ್ಲವೇ ? “ಪಂಚತಂತ್ರ” ದಲ್ಲಿ ಕುಲಕಂಟಕ ಗಂಗದತ್ತ ಎಂಬ ಕಥೆಯಿದೆ. ಭಾವಿಯೊಳಗೆ ಕಪ್ಪೆಗಳ ಎರಡು ಗುಂಪುಗಳಿದ್ದವು. ತಾನೇ ಸಾಮ್ರಾಟನಾಗಬೇಕೆಂದು ಗಂಗದತ್ತನಂಬ ಕಪ್ಪೆ ಹಾವೊಂದನ್ನು ಕರೆದು ತನ್ನ ವಿರೊಧಿಗಳನ್ನು ಯಾವಾಗ ಬೇಕೋ ಆವಾಗ ತಿನ್ನೆಂದು ತನ್ನಾಶ್ರಯದಲ್ಲಿಟ್ಟು ಕೊಂಡಿತು. ಫರಿಣಾಮ ? ಕೇವಲ ವಿರೊಧಿಗಳ ಗುಂಪೊಂದೇ ಅಲ್ಲ —ಆ ಹಾವು ಅಂತ್ಯದಲ್ಲಿ ಗಂಗದತ್ತನನ್ನೂ ತಿಂದು ಹಾಕಿತು !!!

    ಅಧಿಕಾರ ಲಾಲಸೆಗಾಗಿ— ರಾಜಕಾರಣಿಗಳು ದೇಶದ ಹಿತ-ದ್ರಶ್ಟಿಯನ್ನು ಮರೆತು ಯಾರಮೇಲೆ ಕ್ರಮವನ್ನು ಕೈಗೊಳ್ಳಬೇಕೊ ಅವರಮೇಲೆ ಕ್ರಮ ಕೈಗೊಳ್ಳದಿರುವುದರಿಂದಾಗಿ ಇಂದು 26/11 ರ ಮುಂಬೈ attack ಆಯ್ತು. ಸ್ವ ಹಿತಕ್ಕಾಗಿ “ಅಲ್ಪ ಸಂಖ್ಯಾತರ” ತುಶ್ಟೀಕರಣದ ರಾಜಕೀಯವು ಈ ಗಂಗದತ್ತನ ಕಥೆಯನ್ನು ಸ್ಮರಿಸುವಂತಾಗಿದೆ. ಪಾಠ ಕಲಿಯದಿದ್ದರೆ, ಸಮಯೋಚಿತ ಕ್ರಮ ಕೈಗೊಳ್ಳದಿದ್ದರೆ ಸರ್ವ ನಾಶವನ್ನು ನಾವು ಎದುರುಗೊಳ್ಳ ಬೇಕಾದೀತು—–ಅಥವಾ ನಮ್ಮ ಮುಂದಿನ ಪೀಳೀಗೆಯವರಿಗೆ ನಾವು ಇದನ್ನು ಬಳುವಳಿಯಾಗಿ ಕೊಡಬೇಕಾಗುತ್ತದೆ.

  2. ಅವೆಲ್ಲವುಗಳ ಮೇಲೆ ಈಗಾಗಲೇ ಇನ್ವೆಸ್ಟಿಗೇಶನ್ಸ್ ನಡೆಯುತ್ತಿದೆ, ಇಂಡಿಯನ್ ಮುಜಾಹಿದೀನ್-ನ ಭಟ್ಕಳದ ರಿಯಾಜ್ ಅಹಮದ್ ಸಹಚರರದು ಬೇರೆ ಬೇರೆ ಕಡೆ ಆವಾಗಾವಾಗ ಬಂಧನಗಳಾಗುತ್ತಿವೆ, ಅವರಿಗೆ ಈಮೈಲ್ ಕಳುಹಿಸಲು ಸಹಾಯಮಾಡಿದ ಸಾಫ್ಟ್-ವೇರ್ ಇಂಜಿನಿಯರನಿಂದ ಹಿಡಿದು ಬಹಳಷ್ಟು ಜನರು ಬಂಧಿತರಾಗಿದ್ದಾರೆ. ಅವರನ್ನೇನೂ ಬಿಟ್ಟಿಲ್ಲವಲ್ಲ ನಮ್ಮ ಪೊಲೀಸರು, ನಿಮಗ್ಯಾಕೆ ಹೀಗನಿಸಿತು? ಮಾಲೆಗಾಂವ್ ಹೊಸದಾದ ಕಾರಣ, ಮಾಧ್ಯಮಗಳು ಹೆಚ್ಚು ಪಬ್ಲಿಸಿಟಿ ಕೊಡುತ್ತವೆ, ಅದಕ್ಕೆ ನೋಡುವವರಿಗೂ ಅದರ ಮೇಲೆ ಮಾತ್ರವೇ ತನಿಖೆಯ ನಡೆಯುತ್ತಿದೆ ಅಂತ ಅನಿಸುತ್ತಿದೆಯೇನೋ?

  3. ಕೆ.ಆರ್.ಭಟ್ ಅವರೆ,
    ಬ್ಲಾಗಿಗೆ ಸ್ವಾಗತ. ನಂಗೂ ಹಾಗೇ ಅನಿಸುತ್ತಿದೆ. ಇದೆಲ್ಲಾ ತುಷ್ಟೀಕರಣ ಮತ್ತು ದ್ವೇಷ ರಾಜಕೀಯದ ಫಲ. ಇಲ್ಲಿ ಬಡ ಜನ ಸಾಮಾನ್ಯನೇ ಸಾಯುತ್ತಾನೆ ಹೊರತು ರಾಜಕಾರಣಿಗಳಲ್ಲ. ಅವರು ಸೇಫಾಗಿರ್ತಾರೆ.

  4. ಶ್ರೀ ಅವರೆ,
    ತನಿಖೆ ನಡೀತಾ ಇದೆ ಹೌದು. ಆದ್ರೆ. ಐದಾರು ಸಾವು ನೋವಿಗೂ, 60-70 ಮಂದಿ ಸತ್ತ ಸ್ಫೋಟ ಪ್ರಕರಣಗಳ ತನಿಖೆಗೂ ಎಷ್ಟೊಂದು ಅಜಗಜಾಂತರವಿದೆ ಎಂಬುದನ್ನಿಲ್ಲಿ ಗಮನಿಸಬೇಕು. ಹಿಂದೂ ಉಗ್ರವಾದ ಹುಟ್ಟಿಕೊಂಡಿದೆ ಅನ್ತಾರೆ, ಹಿಂದೂ ಆತ್ಮಾಹುತಿ ದಳ ಸಜ್ಜಾಗಿದೆ ಅಂತಾರೆ, ತೀರಾ ಇತ್ತೀಚೆಗೆ ಹಿಂದೂ ತಾಲಿಬಾನೀಕರಣ ಎಂಬ ಶಬ್ದವೂ ಕೇಳಿಬರುತ್ತಿದೆ. ಬಹುಶಃ ರಾಜಕಾರಣಿಗಳು ಈ ಪ್ರಕರಣಗಳನ್ನು ರಾಜಕೀಯಕರಣಗೊಳಿಸುವುದನ್ನು ನಿಲ್ಲಿಸಿದಲ್ಲಿ ಎಲ್ಲದಕ್ಕೂ ಪರಿಹಾರ ದೊರೆಯಬಹುದಲ್ವಾ?

  5. Dear Avinash,

    ನನ್ನ ಬ್ಲಾಗ್ ಆರ೦ಭವಾಗಿದೆ. ಪ್ರಥಮ ಬ್ಲಾಗ್ ಬರಹ post ಮಾಡಿದ್ದೇನೆ.ದಯವಿಟ್ಟು ಭೇಟಿ ಇತ್ತು ಓದಿ ಅಭಿಪ್ರಾಯಿಸಿದಲ್ಲಿ ನಾನು ಧನ್ಯ

  6. ಪರಾಂಜಪೆ ಅವರೆ,

    ಬ್ಲಾಗು ಮಾಡಿದ್ದು ತುಂಬಾ ಖುಷಿ. ನಿಮ್ಮ ಬ್ಲಾಗಿನ ಲಿಂಕು ನೀಡಲು ಮರೆತಿರಿ. ದಯವಿಟ್ಟು ಕೊಡಿ.
    -ಧನ್ಯವಾದ

  7. ಪರಾಂಜಪೆಯವರೇ ನಿಮ್ಮ ಮಾತಿನಲ್ಲಿ ಸತ್ಯವಿದೆ.ಅಲ್ಪ-ಸಂಖ್ಯಾತರ (ಅಲ್ಪರ್ !?) ಸ್ನೇಹಕ್ಕಾಗಿ ಅನಂತಮೂರ್ತಿಯವರಿಂದ ಇಂತಹ ಮಾತುಗಳು ಬಂದಿರಲಿಕ್ಕೂ ಸಾಕು. ಇಂತಹ ಹೇಳಿಕೆಗಳು ಯಾವುದೋ ಪ್ರಶಸ್ತಿಗಳಿಸಲು ಸಹಾಯವಾಗಬಹುದು ಆಥವಾ ಯವುದಾದರೂ ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅಲ್ಪಸಂಖ್ಯಾತರ vote ಗಿಟ್ಟಿಸಲು ಸಹಾಯವಾಗ ಬಹುದೆಂಬ ನಂಬಿಕೆಯಿಂದ ಈ ರೀತಿ ಹೇಳಿಕೆ ಕೊಟ್ಟಿರಬಹುದು. ಪರಾರ್ಥದಲ್ಲಿ ಸ್ವಾರ್ಥ ಸಾಧನೆಯ ಸಂಕೆತ ವಾಗಿರಬಹುದೇನೋ ??!!

  8. ಅವಿ, ತುಂಬಾ ದಿನ ಆಯ್ತು ಸಂಪರ್ಕಕ್ಕೆ ಸಿಗದೇ.. ಏನು ಸಮಾಚಾರ ? ಎಲ್ಲಿ ಮರೆಯದಿರಿ ಗುರುವರ್ಯಾ ?

  9. ಕೆ.ಎ. ಭಟ್ ಅವರೆ,
    ನೀವು ಹೇಳಿಕೆ ಚೆನ್ನಾಗಿದೆ, ಪರಾರ್ಥದಲ್ಲಿ ಸ್ವಾರ್ಥ ಸಾಧನೆಯ ಸಂಕೇತ!!!

  10. ಮಿಂಚುಳ್ಳಿ…
    ಸಿಕ್ಕಾಪಟ್ಟೆ ಬಿಸಿಬಿಸಿ… ಹೀಗಾಗಿ ಇತ್ತ ಕಡೆ ತಲೆ ಕೊಡಲಾಗಿಲ್ಲ… ಬರ್ತೀನಿ.

LEAVE A REPLY

Please enter your comment!
Please enter your name here