ಎರಡು ವಾರಗಳ ಕಾಲ ಬಳಸಿದ ನೋಡಿದಾಗ ಕಂಡುಬಂದ ವಿಷಯಗಳು ಇಲ್ಲಿವೆ.
ನೋಡಲು ಪುಟ್ಟ ಪೆಟ್ಟಿಗೆಯಂತಿರುವ ಇದು ಹಗುರವಾಗಿದೆ ಮತ್ತು ಇದರ ಆಕರ್ಷಣೆ ಎಂದರೆ, RGB ಬಣ್ಣಗಳಲ್ಲಿ ಬೆಳಗುವ ದೀಪದ ವ್ಯವಸ್ಥೆ. ಇದು ಮನೆಗೆ ಅಲಂಕಾರಿಕವಾಗಿಯೂ, ನೈಟ್ (ಬೆಡ್) ಲ್ಯಾಂಪ್ ಆಗಿಯೂ ಬಳಕೆಯಾಗುತ್ತದೆ. ಇದು ಎಲ್‌ಇಡಿ ದೀಪವಾಗಿರುವುದರಿಂದ ವಿದ್ಯುತ್ ಬಳಕೆ ಕಡಿಮೆ. ಸಾಧನದ ಪವರ್ ಆನ್ ಮಾಡದೆ, ಕೇವಲ RGB ಬಣ್ಣಗಳ LED ಬೆಳಕನ್ನು ಮಾತ್ರವೇ ಆನ್ ಮಾಡುವ ಆಯ್ಕೆಯೂ ಇಲ್ಲಿದೆ.
ತೀರಾ ಹಗುರವೂ, ಬೇಕಾದಲ್ಲಿಗೆ ಒಯ್ಯಲು ಹಿಡಿಕೆಯೂ ಇದರಲ್ಲಿದೆ. ಅಂದರೆ, ಪಿಕ್‌ನಿಕ್‌ಗೆ ಹೋಗುವಾಗ ಇದನ್ನು ಒಯ್ದರೆ, ಅಲ್ಲೇ ಹಾಡು ಹಾಕಿ ಕುಣಿಯಲು ಅನುಕೂಲಕರವಾಗಿದೆ. ಹಾಡು ಪ್ಲೇ ಆಗುತ್ತಿರುವಾಗ ಹಿತವಾದ ಬೆಳಕು ಕೂಡ ಬೆಳಗುತ್ತಿರುತ್ತದೆ.
ಮೊಬೈಲ್ ಫೋನ್, ಕಂಪ್ಯೂಟರ್‌ನಲ್ಲಿರುವ ಹಾಡುಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಿ ಈ ಸ್ಪೀಕರ್‌ನಲ್ಲಿ ಪ್ಲೇ ಮಾಡಬಹುದು. ಇದರ ಬೇಸ್ ತುಂಬ ಚೆನ್ನಾಗಿದೆ. ಮೆಲೊಡಿ ಹಾಡುಗಳಿಗೂ, ಅಬ್ಬರದ ಹಾಡುಗಳಿಗೂ ಸೂಕ್ತವಾಗಿ ಹೊಂದಿಕೊಳ್ಳುತ್ತದೆ ಈ ಸ್ಪೀಕರ್.
ವಿನ್ಯಾಸ ತೀರಾ ಸರಳವಾಗಿದೆ. ವಾಲ್ಯೂಮ್, ಫಾರ್ವರ್ಡ್/ಬ್ಯಾಕ್‌ವರ್ಡ್, ಪವರ್ ಈ ಬಟನ್‌ಗಳು ಸ್ಪೀಕರ್‌ನ ಮೇಲ್ಭಾಗದಲ್ಲಿ ಟಚ್ ಸ್ಕ್ರೀನ್ ರೀತಿಯಲ್ಲಿ, ಮೆದುವಾದ ಸ್ಪರ್ಶದೊಂದಿಗೆ ಕೆಲಸ ಮಾಡುತ್ತದೆ. ಮೋಡ್ ಸ್ವಿಚ್ ಕೂಡ ಇದೆ. ಇದರಲ್ಲಿ ಎಫ್‌ಎಂ ರೇಡಿಯೋ, ಬ್ಲೂಟೂತ್, ಎಸ್‌ಡಿ ಕಾರ್ಡ್, ಎಯುಎಕ್ಸ್ ಪೋರ್ಟ್‌ಗಳಿವೆ.
ಫೋನ್ ಜತೆಗೆ ಪೇರಿಂಗ್ ಮಾಡುವುದು ಸುಲಭವಾಗಿದೆ. ಈ ಸ್ಪೀಕರ್‌ನ ಪವರ್ ಬಟನ್ ಅನ್ನು ದೀರ್ಘಕಾಲ ಒತ್ತಿ ಹಿಡಿದಾಗ, ನೀಲಿ ಬಣ್ಣವು ಬೆಳಗುತ್ತದೆ. ಆಗ ಫೋನ್ ಬ್ಲೂಟೂತ್ ಆನ್ ಮಾಡಿ ZEB-PRISM ಅಂತ ಕಾಣಿಸುವ ಸಾಧನವನ್ನು ಪೇರ್ ಮಾಡಿದರಾಯಿತು.
ಫೋನ್‌ಗೆ ಪೇರ್ ಮಾಡಿದರೆ, ನಮಗೆ ಬರುವ ಕರೆಗಳನ್ನು ಕೂಡ ಈ ಬ್ಲೂಟೂತ್ ಸ್ಪೀಕರ್ ಮೂಲಕವೇ ಉತ್ತರಿಸ ಬಹುದು. ಇದರಲ್ಲಿರುವ ಮೈಕ್ ಸಂಭಾಷಣೆಗೆ ನೆರವಾಗುತ್ತದೆ.
ಬ್ಯಾಟರಿಯೂ ಚೆನ್ನಾಗಿದೆ. ಒಂದು ಸಲ ಚಾರ್ಜ್ ಮಾಡಿದರೆ ನಾಲ್ಕೈದು ಗಂಟೆಗಳ ಕಾಲ ನಿರಂತರವಾಗಿ ಹಾಡುಗಳನ್ನು ಕೇಳಬಹುದು.
ಗಾತ್ರ ಸ್ವಲ್ಪ ದೊಡ್ಡದು ಅನ್ನಿಸಬಹುದು ಕೆಲವರಿಗೆ. ಆದರೆ 2300 ರೂ. ಒಳಗೆ ಲಭ್ಯವಿರುವ ಜೆಬ್ರಾನಿಕ್ಸ್‌ನ ಈ ಬ್ಲೂಟೂತ್ ಎಲ್‌ಇಡಿ ಸ್ಪೀಕರ್‌ನ ಧ್ವನಿ ಔಟ್‌ಪುಟ್‌ನಿಂದಾಗಿ ಸಂಗೀತ ಪ್ರಿಯರಿಗೆ ಇಷ್ಟವಾಗಬಹುದು.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…