ಯಾಹೂ ಕನ್ನಡ ವೆಬ್ ಸೈಟ್

25
473

ಯಾಹೂ ಕನ್ನಡ ವೆಬ್ ಸೈಟ್ ಆರಂಭವಾಗಿದೆ.

ಅದರ ಯುಆರ್ಎಲ್

in.kannada.yahoo.com

ಇದರೊಂದಿಗೆ ತಮಿಳು, ಮಲಯಾಳ, ತೆಲುಗು, ಹಿಂದಿ, ಗುಜರಾತಿ ಮತ್ತು ಪಂಜಾಬಿ ಭಾಷೆಯಲ್ಲಿಯೂ ಯಾಹೂ ಪೋರ್ಟಲ್‌ಗಳು ಆರಂಭವಾಗಿವೆ.

25 COMMENTS

  1. ಯಾಹೂಹೂಹೂ… ಇವರದ್ದೂ ಕನ್ನಡ ಅವತರಣಿಕೆ ಪ್ರಾರಂಭವಾಯಿತೇ? ಅಂತರ್ಜಾಲದಲ್ಲಿ ಪತ್ರಿಕೆಗಳ ಸಂಖ್ಯೆ ಏರುತ್ತಿದ್ದು, ಮುದ್ರಣ ಮಾಧ್ಯಮ ಕೆಳಗಿಳಿಯುವ ಹೊತ್ತು. ಯಾಹೂಗೆ ಒಳ್ಳೆಯದಾಗಲಿ, ಕನ್ನಡಮ್ಮನ ಪತಾಕೆ ಜಗಜ್ಜಾಹೀರಾಗಲಿ. ಇದರ ಹಿಂದಿರುವ ಪುಣ್ಯಾತ್ಮರಿಗೆ ನನ್ನ ಅಭಿನಂದನೆಗಳು.

  2. ಶ್ರೀನಿವಾಸರೆ,

    ಅಂತರ್ಜಾಲ ಪತ್ರಿಕೆಗಳಿದ್ದರೂ ಮುದ್ರಣ ಮಾಧ್ಯಮಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ ಅನ್ನೋ ನಂಬಿಕೆ ನನಗಿದೆ.

    ಅದಿನ್ನೂ ಟೆಸ್ಟಿಂಗ್ ಹಂತದಲ್ಲಿರುವುದಾಗಿ ಕಾಣಿಸುತ್ತದೆ. ಈಗ ಲಿಂಕ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.

    ಕೆಲವು ದಿನ ಕಾಯಬೇಕಾಗಬಹುದು.

  3. ರಾಧಾಕೃಷ್ಣ ಅವರಿಗೆ ಸ್ವಾಗತ.
    ಕನ್ನಡ ಬ್ಲಾಗ್ ತೆರೆಯುವುದು ಬಹಳ ಸುಲಭ. ಬ್ಲಾಗರ್ ಡಾಟ್ ಕಾಮ್ ಇಲ್ಲವೇ ವರ್ಡ್‌ಪ್ರೆಸ್ ಡಾಟ್ ಕಾಮ್ ತೆರೆದಲ್ಲಿ ಅದುವೇ ನಿಮ್ಮನ್ನು ಬ್ಲಾಗು ತೆರೆಯಲು ಸೂಚಿಸುತ್ತದೆ.
    ಬ್ಲಾಗು ತೆರೆಯಿರಿ, ಬರೆಯಿರಿ
    ಶುಭವಾಗಲಿ.

  4. ‘ಯಾಹೂ ವೆಬ್ ತಾಣ’ ಶುರುವಾಗಿದ್ದನ್ನು ನಿಮ್ಮ ಬ್ಲಾಗಿನಿಂದ ತಿಳಿದೆ. ಎಂಥಾ ಸಂತೊಷದ ಸುದ್ದೀ ಸಾರ್ -ಇದು. ನಮ್ಮ ನಮ್ಮ ಅನಿಸಿಕೆಗಳು ಇದ್ದೇ ಇರತ್ತಲ್ಲ. ಅದನ್ನೆಲ್ಲಾ ತೊಡ್ಕೊಬೊದಲ್ವ. ಕನ್ನಡದಲ್ಲಿ ಏನ್ಹೊಸ್ದಾದ್ರೂ ನನಗೆ ‘ಹೋಳ್ಗೆತುಪ್ಪ ತಿಂದಂಗಾಗತ್ತೆ’ ನೊಡಿ. ನಮ್ಮ ಮನಸ್ಸಿನ ದ್ವಾರಗಳು ತೆರೆಯಲಿ. ಬೊಂಬಾಯಿನ ಕೃತಕ ಜೀವನ ಶೈಲಿಯ ತರಹ, ಮುಚ್ಚಿದ ಬಾಗಿಲುಗಳಾಗದಿರಲಿ. ಮನಸ್ಸುಗಳು ಬಿಚ್ಚಲಿ, ಗರಿಕೆದರಲಿ, ಪುರ್ರನೆ ಎಲ್ಲಿಗೊ ಹಾರಿ ಹಾರಿ ಗಗನದಲ್ಲಿ ಮರೆಯಾಗಲಿ…!
    ನಮ್ಮಂತಹ ಬೊರಣ್ಣಗಳು ಸ್ವಲ್ಪ ಹೊತ್ತು ಸುಮ್ಮನಿರಲಿ !

  5. ಲಕ್ಷ್ಮಿ ವೆಂಕಟೇಶ್ ಅವರಿಗೆ ಈ ಬ್ಲಾಗಿಗೆ ಸ್ವಾಗತ.

    ನಿಮಗಾಗಿರೋ ಸಂತೋಷವು ದೂರ ಹೋದರೂ ಕನ್ನಡದ ಬಗೆಗೆ ನಿಮಗಿರುವ ಅಭಿಮಾನದ ಪ್ರತೀಕ ಅಂತ ತಿಳಿದುಕೊಳ್ಳಬಹುದು.

    ನಿಮ್ಮನ್ನು ನೀವು ಬೋರ್ಅಣ್ಣಗಳು ಅಂತ ಯಾಕೆ ತಿಳಿದುಕೊಳ್ಳುತ್ತೀರಿ… ನೀವು ಬರೆಯಿರಿ.

    ನಿಮ್ಮ ಬರವಣಿಗೆ ನೋಡಿದ್ರೆ ನೀವೂ ಯಾಕೆ ಒಂದು ಬ್ಲಾಗ್ ಆರಂಭಿಸಬಾರದು?
    ಬರ್ತಾ ಇರಿ
    ಧನ್ಯವಾದ

  6. ನಾನು ಈಗಾಗಲೇ ‘ಸಂಪದ ‘ ದಲ್ಲಿ ಬರೀತಾನೇ ಇದಿನಿ. ಇನ್ನೊಂದು ಬ್ಲಾಗೇ; ಸರಿ ಹೇಗೆ ಮಾಡೊದು ತಿಳಿಸ್ತೀರಾ ಸಾರ್…

    ನಮಸ್ಕಾರಗಳು
    ವೆಂ

  7. Kannada font should be improved in artcles published in the site.It is not legible now.I hope you will go through this.

  8. ಪ್ರೇಮ್ ಕುಮಾರ್ ಅವರೆ,
    ನನ್ನ ಪುಟ್ಟ ತಾಣಕ್ಕೆ ಸ್ವಾಗತ. ಕನ್ನಡ ಫಾಂಟ್ ನಲ್ಲಿರುವ ಸಮಸ್ಯೆಗಳು ಅದು ಸಿಸ್ಟಂಗೆ ಸಂಬಂಧಪಟ್ಟವು. ನಮ್ಮ ಸಿಸ್ಟಮಿನಲ್ಲಿ ಅಪ್‌ಡೇಟೆಡ್ ಫಾಂಟ್ ಇದ್ದರೆ ಎಲ್ಲ ಅಕ್ಷರಗಳು ತಪ್ಪಿಲ್ಲದೆ ಕಾಣಿಸುತ್ತವೆ.

    • ಅರುಣ್ ಅವರೆ,
      ಈವಾಗ ಕಥೆ ಬೇರೆಯಾಗಿದೆ. ವೆಬ್‌ದುನಿಯಾ ಮೂಲಕ ಯಾಹೂ ಕನ್ನಡ ಸೈಟ್ ಬರ್ತಾ ಇದೆ.

LEAVE A REPLY

Please enter your comment!
Please enter your name here