ವಾಟ್ಸಾಪ್ ಬಳಸುತ್ತಿರುವವರಿಗೆ ಇತ್ತೀಚೆಗೆ ಅದು ಪರಿಚಯಿಸಿದ ‘ಡಿಲೀಟ್’ ಆಯ್ಕೆ ಬಗ್ಗೆ ಗೊತ್ತಿದೆ. ನಾವೇನಾದರೂ ತಪ್ಪು ಸಂದೇಶವನ್ನು ಕಳುಹಿಸಿದರೆ, ಅಥವಾ ತಪ್ಪಾದ ಗ್ರೂಪುಗಳಿಗೆ ಫಾರ್ವರ್ಡ್ ಮಾಡಲಾದ ಸಂದೇಶವನ್ನು ಏಳು ನಿಮಿಷಗಳೊಳಗೆ ಡಿಲೀಟ್ ಮಾಡುವ ಆಯ್ಕೆ ನೀಡಲಾಗಿತ್ತು. ಅದರ ಜನಪ್ರಿಯತೆಯನ್ನು ಮನಗಂಡ ವಾಟ್ಸಾಪ್, ಡಿಲೀಟ್ ಮಾಡಬಹುದಾದ ಅವಧಿಯನ್ನು ವಿಸ್ತರಿಸಿದೆ. ಅಂದರೆ, ಬೇರೆಯವರು ನೋಡುವ ಮುನ್ನ ಇದುವರೆಗೆ 420 ಸೆಕೆಂಡುಗಳೊಳಗೆ ನಾವು ಡಿಲೀಟ್ ಮಾಡಿದ್ದರೆ ಅದನ್ನು ಮುಂದೆ ಯಾರೂ ನೋಡುವುದು ಸಾಧ್ಯವಿರಲಿಲ್ಲ. ಈಗಿನ ಪ್ರಕಾರ, ಈ ಅವಧಿಯನ್ನು ವಾಟ್ಸಾಪ್ 4096 ಸೆಕೆಂಡಿಗೆ ವಿಸ್ತರಿಸಿದೆ. ಅಂದರೆ 68 ನಿಮಿಷ 16 ಸೆಕೆಂಡುಗಳವರೆಗೂ ನೀವು ‘ಡಿಲೀಟ್ ಫಾರ್ ಎವ್ರಿವನ್’ ಎಂಬ ಬಟನ್ ಕ್ಲಿಕ್ ಮಾಡಬಹುದು. ಆ ಬಳಿಕ ಡಿಲೀಟ್ ಮಾಡಲಾಗದು. ಅಷ್ಟರೊಳಗೆ ಯಾರಾದರೂ ಅದನ್ನು ಓದಿದ್ದರೆ ತಪ್ಪು ಬರೆದಿರುವುದಕ್ಕೆ/ಫಾರ್ವರ್ಡ್ ಮಾಡಿರುವುದಕ್ಕೆ ಕ್ಷಮೆ ಇಲ್ಲ!
ಇವನ್ನೂ ನೋಡಿ
ಸಿಂಗ್-ಜರ್ದಾರಿ ಭೇಟಿ: ಅಮೆರಿಕ ‘ಒತ್ತಡ’ ತಂತ್ರದ ಫಲವೇ?
ಇತ್ತೀಚಿನ ಕೆಲವೊಂದು ವಿದ್ಯಮಾನಗಳತ್ತ ಕಣ್ಣೋಟ ಹಾಯಿಸಿದರೆ, ಅಮೆರಿಕವು ಒಮ್ಮೆ ಭಾರತದತ್ತ, ಮಗದೊಮ್ಮೆ ಪಾಕಿಸ್ತಾನದತ್ತ ವಾಲುತ್ತಾ, ಈ ಜಾಗತಿಕ ಆರ್ಥಿಕ ಸಂಕಷ್ಟ ದಿನಗಳಲ್ಲಿಯೂ ಜಗತ್ತಿನ ಪ್ರಬಲ ಶಕ್ತಿಯಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಭಾರತವನ್ನು ಅಸ್ಥಿರಗೊಳಿಸಲು ಒಳಗಿಂದೊಳಗೆಯೇ...