ಸ್ಪೆಸಿಫಿಕೇಶನ್‌ನತ್ತ ಗಮನ ಹರಿಸಿದರೆ,
ಸ್ಕ್ರೀನ್: 5.7-ಇಂಚು, IPS LCD ಡಿಸ್‌ಪ್ಲೇ, 720 x 1440 ರೆಸೊಲ್ಯುಶನ್ ಇದೆ.
ಚಿಪ್‌ಸೆಟ್: ಸ್ನ್ಯಾಪ್‌ಡ್ರ್ಯಾಗನ್ 450, ಒಕ್ಟಾ-ಕೋರ್ 1.8 GHz ಕೋರ್ಟೆಕ್ಸ್-A53 ಸಿಪಿಯು; ಅಡ್ರಿನೋ 506 GPU.
ಮೆಮೊರಿ: 4 GB RAM; 32 GB ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್‌ಗೆ ಪ್ರತ್ಯೇಕ ಸ್ಲಾಟ್ ಇದೆ.
ಕ್ಯಾಮೆರಾ: 16 MP ಹಿಂಭಾಗದ ಕ್ಯಾಮೆರಾ; f/2.0 ಲೆನ್ಸ್; LED ಫ್ಲ್ಯಾಶ್; 1080p ವೀಡಿಯೋ
ಸೆಲ್ಫೀ ಕ್ಯಾಮೆರಾ: 24 MP ಮುಂಭಾಗದ ಕ್ಯಾಮೆರಾ; f/2.0 ಲೆನ್ಸ್; LED ಫ್ಲ್ಯಾಶ್ ಜತೆಗೆ, ಬೊಕೇ ಎಂಬ ಎಫೆಕ್ಟ್ ನೀಡುವ ವ್ಯವಸ್ಥೆ
ಕಾರ್ಯಾಚರಣಾ ವ್ಯವಸ್ಥೆ: ಆಂಡ್ರಾಯ್ಡ್ 7.1 ನೌಗಾಟ್ ಆಧಾರಿತ, ಫನ್‌ಟಚ್ OS 3.2.
ಬ್ಯಾಟರಿ: 3,000 mAh
ತೂಕ: 139 ಗ್ರಾಂ
ಸಂಪರ್ಕ: ಡ್ಯುಯಲ್ ನ್ಯಾನೋ ಸಿಮ್ ಸ್ಲಾಟ್, LTE ಬೆಂಬಲ, Wi-Fi, ಬ್ಲೂಟೂತ್ 4.2; ಜಿಪಿಎಸ್, ಎಫ್ಎಂ ರೇಡಿಯೋ
ವಿಶೇಷತೆ: ಫಿಂಗರ್‌ಪ್ರಿಂಟ್ ಸ್ಕ್ಯಾನರ್, ಫೇಸ್ ಅನ್‌ಲಾಕ್ ವ್ಯವಸ್ಥೆ
ಬೆಲೆ: ರೂ. 16990.
ಬಾಕ್ಸ್‌ನಲ್ಲಿ ಚಾರ್ಜರ್, ಯುಎಸ್‌ಬಿ ಕೇಬಲ್, ಜತೆಗೆ ಉತ್ತಮ ಇಯರ್‌ಬಡ್‌ಗಳಿರುವ ಇಯರ್‌ಫೋನ್, ಸಿಮ್ ಕಾರ್ಡ್ ಟ್ರೇ ತೆರೆಯುವ ಕೀ ಜತೆಗೆ ತೆಳುವಾದ ಸಿಲಿಕೋನ್ ಹಿಂಭಾಗದ ಕವಚ ಇದೆ.
ಸ್ಪೆಸಿಫಿಕೇಶನ್‌ನತ್ತ ಗಮನ ಹರಿಸಿದರೆ, ಈ ಫೋನ್ ಪ್ರಧಾನವಾಗಿ ಸೆಲ್ಫೀ ಪ್ರಿಯರನ್ನು ಗಮನದಲ್ಲಿಟ್ಟುಕೊಂಡು ರೂಪಿಸಿದ ಮೊಬೈಲ್ ಎಂಬುದು ಖಾತ್ರಿಯಾಗುತ್ತದೆ. ಈಗಿನ ಟ್ರೆಂಡ್ ಪ್ರಕಾರ, ಫುಲ್‌ವ್ಯೂ ವೈಡ್‌ಸ್ಕ್ರೀನ್ ವ್ಯವಸ್ಥೆ. ಅಂತೆಯೇ ಇದರ ಬಾಡಿ ಪ್ಲಾಸ್ಟಿಕ್‌ನದ್ದಾದರೂ, ನೋಡಲು ಮೆಟಾಲಿಕ್ (ಲೋಹ)ದಂತೆಯೇ ಇದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹಿಂಭಾಗದಲ್ಲಿದೆ. ಫ್ಯಾಬ್ಲೆಟ್ ಕೆಟಗರಿಯಲ್ಲಿರುವ ಇದು ಹಗುರವಾಗಿದ್ದು, ಜೇಬಿನಲ್ಲಿ ಅನುಕೂಲಕರವಾಗಿ ಕೂರುತ್ತದೆ. ಕಣ್ಣಿನ ರಕ್ಷಣೆಗಾಗಿ ಐ ಪ್ರೊಟೆಕ್ಷನ್ ಎಂಬ ವ್ಯವಸ್ಥೆಯಿದ್ದು, ಹೊರಗಿನ ಬೆಳಕಿಗೆ ತಕ್ಕಂತೆ ಸ್ಕ್ರೀನ್‌ನ ಪ್ರಕಾಶಮಾನತೆಯನ್ನು ಬದಲಾಯಿಸುವ ಮೂಲಕ ಕಣ್ಣುಗಳಿಗೆ ಹೆಚ್ಚು ಒತ್ತಡ ಆಗುವುದಿಲ್ಲ. ಆಡಿಯೋ, ಲೌಡ್‌ಸ್ಪೀಕರ್‌ಗಳು ಹಾಡುಗಳನ್ನು ಕೇಳುವುದಕ್ಕೆ ಅನುಕೂಲಕರವಾಗಿವೆ.
ಆ್ಯಪಲ್ ಐಫೋನ್‌ಗಳಂತೆಯೇ, ಸ್ಕ್ರೀನ್‌ನಲ್ಲಿ ಕೆಳಗಿನಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ನಮಗೆ ಶಾರ್ಟ್‌ಕಟ್‌ಗಳ ಟ್ರೇ ಕಾಣಿಸುತ್ತದೆ. ಎರಡು ಸ್ಕ್ರೀನ್‌ಗಳಲ್ಲಿ ಕಾಣಿಸುವ ಶಾರ್ಟ್‌ಕಟ್‌ಗಳನ್ನು ನಮಗೆ ಬೇಕಾದಂತೆ ಹೊಂದಿಸಿಕೊಳ್ಳುವ ಆಯ್ಕೆಯಿದೆ. ಅದೇ ರೀತಿ, ಎರಡೆರಡು ಖಾತೆಗಳಲ್ಲಿ ವಾಟ್ಸಾಪ್, ಫೇಸ್‍ಬುಕ್, ಇನ್‌ಸ್ಟಾಗ್ರಾಂ ಲಾಗಿನ್ ಆಗುವುದಕ್ಕಾಗಿಯೇ ಇರುವ ಆ್ಯಪ್ ಕ್ಲೋನ್ ವೈಶಿಷ್ಟ್ಯ ಇದರಲ್ಲಿದೆ. ಫಿಂಗರ್ ಸೆನ್ಸರ್ ಚೆನ್ನಾಗಿದ್ದು, ಮುಖದ ಮೂಲಕವೂ ಸ್ಕ್ರೀನ್ ಅನ್‌ಲಾಕ್ ಮಾಡಬಹುದು.
ಸ್ಮಾರ್ಟ್ ಫಂಕ್ಷನ್‌ಗಳು: ಬ್ಯಾಟರಿ ಬಳಕೆ ಚೆನ್ನಾಗಿದೆ. ವಿಶೇಷವಾಗಿ ಗಮನ ಸೆಳೆದಿದ್ದು ಇದರಲ್ಲಿರುವ ಸನ್ನೆ ಆಧಾರಿತ ಚಲನೆಯ ಸ್ಮಾರ್ಟ್ ಫಂಕ್ಷನ್‌ಗಳು. ಸೆಟ್ಟಿಂಗ್ಸ್‌ನಲ್ಲಿ ಸ್ಮಾರ್ಟ್ ಮೋಷನ್ ಎಂಬಲ್ಲಿ ಹೋಗಿ ನೋಡಿದರೆ ಏನೆಲ್ಲಾ ಇದೆಯೆಂದು ಗೋಚರಿಸುತ್ತದೆ. ಸ್ಕ್ರೀನ್ ಆಫ್ ಆಗಿರುವಾಗಲೇ ನಿರ್ದಿಷ್ಟ ಅಕ್ಷರಗಳನ್ನು ಸ್ಕ್ರೀನ್ ಮೇಲೆ ಬರೆದಾಗ, ಅದಕ್ಕೆ ಸಂಬಂಧಿಸಿದ ಆ್ಯಪ್‌ಗಳು, ಉದಾಹರಣೆಗೆ M ಎಂದು ಕೈಯಿಂದ ಸ್ಕ್ರೀನ್ ಮೇಲೆ ಬರೆದಾಗ Music ಆ್ಯಪ್ ಲಾಂಚ್ ಆಗುತ್ತದೆ. ಸ್ಕ್ರೀನ್ ಆಫ್ ಆಗಿರುವಾಗಲೇ ಕೆಳಕ್ಕೆ ಸ್ವೈಪ್ ಮಾಡಿದರೆ ಕ್ಯಾಮೆರಾ ತೆರೆದುಕೊಳ್ಳುತ್ತದೆ. ಸ್ಕ್ರೀನ್‌ನಲ್ಲಿ ಬೆಳಕು ಬಾರದಿರುವಾಗಲೇ ಮೇಲಕ್ಕೆ ಸ್ವೈಪ್ ಮಾಡಿದರೆ ಅನ್‌ಲಾಕ್ ಆಗುತ್ತದೆ.
4 ಜಿಬಿ RAM ಇರುವುದರಿಂದ ಗೇಮಿಂಗ್ ಹಾಗೂ ಮಲ್ಟಿಟಾಸ್ಕಿಂಗ್‌ಗೆ ಹೆಚ್ಚು ಅನುಕೂಲ. ಕ್ಯಾಮೆರಾದಲ್ಲಿ ಪ್ರೊಫೆಶನಲ್ ಮೋಡ್ ಇರುವುದು ಫೋಟೋ ಬಗ್ಗೆ ಆಸ್ಥೆ ಹೊಂದಿರುವವರಿಗೆ ಅನುಕೂಲ. ಐಫೋನ್ ಬಳಸಿದವರಿಗೆ ವಿವೋದ ಕ್ಯಾಮೆರಾ ಇಂಟರ್‌ಫೇಸ್ ತುಂಬಾ ಸುಲಭವಾಗುತ್ತದೆ. HDR ಮೋಡ್, ಕಡಿಮೆ ಬೆಳಕಿನ ಫೋಟೋಗಳು ಬಹುತೇಕ ಉತ್ತಮವಾಗಿವೆ. 24 ಮೆಗಾಪಿಕ್ಸೆಲ್‌ನ ಸೆಲ್ಫೀ ಕ್ಯಾಮೆರಾದಲ್ಲಿ ಮುಖವನ್ನು ಮತ್ತಷ್ಟು ಚಂದಗಾಣಿಸುವ ಫೇಸ್ ಬ್ಯೂಟಿ ವೈಶಿಷ್ಟ್ಯವಿದೆ. ಇಷ್ಟೇ ಅಲ್ಲದೆ, ಗ್ರೂಪ್ ಸೆಲ್ಫೀ ತೆಗೆದುಕೊಳ್ಳಲು ಅನುಕೂಲವಾಗುವಂತೆ ಪನೋರಮಾ ಮಾದರಿಯ ವೈಶಿಷ್ಟ್ಯ ಇದರ ಮತ್ತೊಂದು ವಿಶೇಷತೆಗಳಲ್ಲೊಂದು.
ಆಂಡ್ರಾಯ್ಡ್ ಮೇಲೆ ಫನ್‌ಟಚ್ ಎಂಬ ಕಸ್ಟಂ ಸ್ಕಿನ್ ಇರುವುದು ಬಹುತೇಕ ಐಫೋನ್ ಬಳಸಿದ ಅನುಭವ ನೀಡುತ್ತದೆ. ಕ್ಯಾಮೆರಾ ಅತ್ಯುತ್ತಮವಾಗಿದ್ದು, ಫಿಂಗರ್‌ಪ್ರಿಂಟ್ ವೇಗವಾಗಿ ಕೆಲಸ ಮಾಡುತ್ತದೆ. ಯುವ ಜನಾಂಗಕ್ಕೆ ಇದು ಇಷ್ಟವಾಗಬಹುದು. ಮಾರುಕಟ್ಟೆಯಲ್ಲಿ ಸ್ಫರ್ಧಿಸಲು ಈಗಿನ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಇದರಲ್ಲಿ ಅಳವಡಿಸಬಹುದಾಗಿತ್ತು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…