280 ಅಕ್ಷರಗಳಿಗೆ ಅವಕಾಶವಿರುವ ಕಿರು ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ನಕಲಿ ಖಾತೆಗಳ ಹಾವಳಿಯಿಂದಾಗಿ ಸೆಲೆಬ್ರಿಟಿಗಳು ಹಾಗೂ ಇತರರಿಗೂ ತುಂಬ ಹಾನಿಯಾಗುತ್ತಿತ್ತು. ಅಂದರೆ, ನಿರ್ದಿಷ್ಟ ವ್ಯಕ್ತಿಯ ಐಡೆಂಟಿಟಿಯನ್ನೇ ಹೋಲುವ ನಕಲಿ ಖಾತೆಗಳಿಂದಾಗಿ ಅಸಲಿ ವ್ಯಕ್ತಿಗಳು ಇರಸುಮುರಸಿಗೆ ಈಡಾಗುತ್ತಿದ್ದರು. ಇದಕ್ಕಾಗಿ 2016ರಲ್ಲಿ ಟ್ವಿಟರ್ ದೃಢೀಕೃತ ಖಾತೆ (ವೆರಿಫೈಡ್ ಅಕೌಂಟ್) ಒದಗಿಸುವ ಪರಿಪಾಠ ಆರಂಭಿಸಿತು. ಆದರೆ ವಿವಾದಾಸ್ಪದ ಖಾತೆಗಳಿಗೂ ವೆರಿಫೈಡ್ ಅಕೌಂಟ್ ಎಂಬ ನೀಲಿ ಟಿಕ್ ಮಾರ್ಕ್ ನೀಡುವುದಕ್ಕೆ ಆಕ್ಷೇಪಗಳು ಬಂದ ಹಿನ್ನೆಲೆಯಲ್ಲಿ ಟ್ವಿಟರ್ 2017ರಲ್ಲಿ ಖಾತೆಯ ದೃಢೀಕರಣವನ್ನು ನಿಲ್ಲಿಸಿತ್ತು. ಇದೀಗ, ಪುನಃ ಖ್ಯಾತರಾಗಿರುವ ಜನ ಸಾಮಾನ್ಯರಿಗೂ ನೀಲಿ ಟಿಕ್ ಮಾರ್ಕ್ ನೀಡಲು ಸಿದ್ಧ ಎಂದು ಟ್ವಿಟರ್ ಸಿಇಒ ಜಾಕ್ ಡೋರ್ಸೆ ಕಳೆದ ವಾರ ಪ್ರಕಟಿಸಿದ್ದಾರೆ. ಟ್ವಿಟರ್‌ನ ಅರ್ಜಿ ಫಾರಂ ಭರ್ತಿ ಮಾಡಿದರೆ ನಾವೂ ವೆರಿಫೈಡ್ ಅಕೌಂಟ್ ಹೊಂದಬಹುದಾದ ಆಯ್ಕೆ ಶೀಘ್ರವೇ ದೊರೆಯಲಿದೆ.
ಇವನ್ನೂ ನೋಡಿ
ಕೃಷ್ಣಂ ವಂದೇ ಜಗದ್ಗುರುಂ…
ವೇದಾನುದ್ಧರತೇ ಜಗನ್ನಿವಪಹತೇ ಭೂಗೋಲಮದ್ಭಿಭ್ರತೇ
ದೈತ್ಯ ದಾರಯತೇ ಬಲಿಂಧಲಯತೇ ಕ್ಷತ್ರಕ್ಷಯೇ ಕುರ್ವತೇ
ಪೌಲಸ್ತಂ ಜಿಯತೇ ಹಲಂಕಲಯತೇ ಕಾರುಣ್ಯ ಮಾತನ್ವತೇ
ಮ್ಲೇಚ್ಛಾನ್ ಮಾರ್ದಯತೇ ದಶಾಕೃತಿಕೃತೇ ಕೃಷ್ಣಾಯ ತುಭ್ಯಂ ನಮಃ || ಸಾರ: ವೇದಗಳನ್ನು ಉದ್ಧರಿಸಿದ (ಮತ್ಸ್ಯಾವತಾರಿ), ಜಗತ್ತನ್ನು ಹೊತ್ತ (ಕೂರ್ಮಾವತಾರಿ), ಭೂಮಿಯನ್ನು...