ಬೆಂಗಳೂರು: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1 ಅನ್ನು ಸೆ.9ರಂದು ಬಿಡುಗಡೆ ಮಾಡಿದೆ. ರಿಯಲ್‌ಮಿ ನಾರ್ಜೋ ಸರಣಿ ಮತ್ತು AIoT ಸಾಧನಗಳಿಗೆ ಇತ್ತೀಚಿನ ಸೇರ್ಪಡೆಗಳಿವು.
ಹೊಸ ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಕಾರ್ಯಕ್ಷಮತೆಯ ಸಾಧನಗಳನ್ನು ಬಯಸುವ ಯುವ, ತಂತ್ರಜ್ಞಾನ-ಪ್ರೇಮಿ ಗ್ರಾಹಕರಿಗೆ ಉಪಯುಕ್ತ. ನವೀನ ಟರ್ಬೊ ತಂತ್ರಜ್ಞಾನದಿಂದ ಚಾಲಿತವಾಗಿರುವ ಈ ಸಾಧನವು, ಸಂವರ್ಧಿತ ಸಂಸ್ಕರಣಾ ವೇಗ ಮತ್ತು ಸುಗಮ ಬಳಕೆದಾರ-ಅನುಭವವನ್ನು ಖಚಿತಪಡಿಸುತ್ತದೆ. ವಿಶೇಷವಾಗಿ ಮೊಬೈಲ್ ಗೇಮಿಂಗ್ ಉತ್ಸಾಹಿಗಳಿಗೆ ಆಕರ್ಷಕವಾಗಿದೆ.
ಬಿಡುಗಡೆಯ ಬಗ್ಗೆ ಮಾತನಾಡಿದ ರಿಯಲ್‌ಮಿ ವಕ್ತಾರರು, “ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1 ಸಾಧನಗಳು ನಮ್ಮ ಜೆನ್-ಝಡ್ ಬಳಕೆದಾರರಿಗೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಪ್ರೀಮಿಯಂ ವೈಶಿಷ್ಟ್ಯಗಳನ್ನು ತಲುಪಿಸುವ ನಮ್ಮ ಬದ್ಧತೆಯನ್ನು ಸಾಕಾರಗೊಳಿಸುತ್ತವೆ. ನಾವು ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುತ್ತಲೇ ಇರುವುದರಿಂದ, ಭಾರತದಲ್ಲಿ 70 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ತಲುಪುತ್ತಿದ್ದೇವೆ” ಎಂದಿದ್ದಾರೆ.
ಮೀಡಿಯಾಟೆಕ್ ಮಾರ್ಕೆಟಿಂಗ್ ಮತ್ತು ಕಮ್ಯುನಿಕೇಷನ್ಸ್ ನಿರ್ದೇಶಕ ಅನುಜ್ ಸಿದ್ಧಾರ್ಥ್ ಮಾತನಾಡಿ, ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಸುಧಾರಿತ 4nm ಪ್ರೊಸೆಸಿಂಗ್ ಪ್ರಕ್ರಿಯೆ ತಂತ್ರಜ್ಞಾನವಿರುವ ಫ್ಲ್ಯಾಗ್‌ಶಿಪ್ ದರ್ಜೆಯ ಚಿಪ್‌ಸೆಟ್ ಆಗಿದೆ. SoC ಇಂಧನ ದಕ್ಷತೆಯೊಂದಿಗೆ ಹೆಚ್ಚಿನ ಕಾರ್ಯಕ್ಷಮತೆಯನ್ನು ತಡೆರಹಿತವಾಗಿ ಸಂಯೋಜಿಸುತ್ತದೆ, ಆ ಮೂಲಕ ವಿಸ್ತೃತ ಅವಧಿಗೆ ಸ್ಥಿರ ಮತ್ತು ಸುಗಮ ಹೈ-ಫ್ರೇಮ್-ರೇಟ್ ಗೇಮಿಂಗ್‌ಗೆ ಪೂರಕವಾಗಿದೆ. ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಹೊಂದಿರುವ ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ತ್ವರಿತ ಮಲ್ಟಿಟಾಸ್ಕಿಂಗ್ ಮತ್ತು ಅಸಾಧಾರಣ ಛಾಯಾಗ್ರಹಣ ಸಾಮರ್ಥ್ಯಗಳನ್ನು ಒದಗಿಸುತ್ತದೆ. SoC ಹೈಪರ್ ಎಂಜಿನ್ ಆಪ್ಟಿಮೈಸೇಶನ್ ಸೂಟ್ ಅನ್ನು ಸಹ ಒಳಗೊಂಡಿದ್ದು, ಗೇಮಿಂಗ್ ಸಮಯದಲ್ಲಿ ನೆಟ್ವರ್ಕ್ ಸಂಪರ್ಕಕ್ಕೆ ಆದ್ಯತೆ ನೀಡಲು ಪ್ರೊಸೆಸರ್‌ಗೆ ಅನುವು ಮಾಡಿಕೊಡುತ್ತದೆ ಎಂದಿದ್ದಾರೆ.
ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ ಫೋನ್‌ನಲ್ಲಿ ಟರ್ಬೊ ಕಾರ್ಯಕ್ಷಮತೆಯಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 7300 ಎನರ್ಜಿ ಚಿಪ್‌ಸೆಟ್ ಮತ್ತು ವಿಭಾಗದ ಅತಿದೊಡ್ಡ ಸ್ಟೇನ್‌ಲೆಸ್ ಸ್ಟೀಲ್ ವಿಸಿ ಕೂಲಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದು 90fps ಮತ್ತು GT ಮೋಡ್ + GT ಗೇಮಿಂಗ್ ವೈಶಿಷ್ಟ್ಯಗಳೊಂದಿಗೆ ವೇಗದ ಗೇಮಿಂಗ್ ಅನುಭವವನ್ನು ನೀಡುತ್ತದೆ. ಈ ಸಾಧನವು 12GB ಮತ್ತು 14GB RAM ಮತ್ತು 256GB ROM ಹೊಂದಿರುತ್ತದೆ. ಇದು 120Hz ರಿಫ್ರೆಶ್ ರೇಟಿಂಗ್ ಇರುವ OLED ಎಸ್ಪೋರ್ಟ್ಸ್ ಡಿಸ್‌ಪ್ಲೇಯನ್ನು ಹೊಂದಿದ್ದು, ಅತಿದೊಡ್ಡ 92.65% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಕೇವಲ 185 ಗ್ರಾಂ ತೂಕದ 7.6 mm ಅಲ್ಟ್ರಾ-ಸ್ಲಿಮ್, ಮೋಟಾರ್‌ಸ್ಪೋರ್ಟ್-ಪ್ರೇರಿತ ವಿನ್ಯಾಸವನ್ನು ಹೊಂದಿದೆ . ಫೋನ್ 50 MP ಎಐ ಕ್ಯಾಮೆರಾ, 16 MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬೃಹತ್ ಬ್ಯಾಟರಿಯೊಂದಿಗೆ 45W ಅಲ್ಟ್ರಾ ಫಾಸ್ಟ್ ಚಾರ್ಜ್ ಅನ್ನು ಬೆಂಬಲಿಸುತ್ತದೆ. ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ IP65 ಡಸ್ಟ್ & ವಾಟರ್ ರೆಸಿಸ್ಟೆನ್ಸ್, ರೈನ್ ವಾಟರ್ ಸ್ಮಾರ್ಟ್ ಟಚ್, ಡ್ಯುಯಲ್ ಸ್ಟೀರಿಯೊ ಸ್ಪೀಕರ್‌ಗಳು, ಏರ್ ಗೆಸ್ಚರ್ ಮತ್ತು ವಿವಿಧ ಎಐ ವೈಶಿಷ್ಟ್ಯಗಳು ಸೇರಿವೆ. ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ ಮೂರು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ: ಟರ್ಬೊ ಯೆಲ್ಲೋ, ಟರ್ಬೊ ಗ್ರೀನ್, ಟರ್ಬೊ ಪರ್ಪಲ್ ಮತ್ತು ಮೂರು ಸ್ಟೋರೇಜ್ ರೂಪಾಂತರಗಳು: 6GB + 128GB, ಬೆಲೆ 14,999 ರೂ.; 8 GB + 128GB, ಬೆಲೆ 15,999 ರೂ. ಮತ್ತು 12GB + 256GB, ಬೆಲೆ 18,999 ರೂ. ಇವುಗಳು realme.com ಮತ್ತು Amazon.in ನಲ್ಲಿ ಲಭ್ಯ ಇವೆ.
ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ ಬೆಲೆ
ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ (6GB + 128GB) ₹16,999 +₹2000 ಕೂಪನ್. ಒಟ್ಟಾರೆ ಬೆಲೆ ₹14,999
ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ (8GB +128GB) ₹17,999 +₹2000 ಕೂಪನ್, ಒಟ್ಟಾರೆ ಬೆಲೆ ₹15,999
ರಿಯಲ್‌ಮಿ ನಾರ್ಜೋ 70 ಟರ್ಬೊ 5ಜಿ (12GB+256GB) ₹20,999+₹2000 ಕೂಪನ್ ಒಟ್ಟಾರೆ ಬೆಲೆ ₹18,999
ಇದರ ಜೊತೆಗೆ, ರಿಯಲ್‌ಮಿ ಬಡ್ಸ್ ಎನ್ 1 ಅನ್ನು ಬಿಡುಗಡೆಗೊಳಿಸಲಾಗಿದೆ. ಇದು 46dB ಹೈಬ್ರಿಡ್ ನಾಯ್ಸ್ ಕ್ಯಾನ್ಸಲೇಶನ್, 12.4mm ಡೈನಾಮಿಕ್ BASS ಡ್ರೈವರ್ ಮತ್ತು 40 ಗಂಟೆಗಳ ಟೋಟಲ್ ಪ್ಲೇಬ್ಯಾಕ್ ಸಾಮರ್ಥ್ಯವನ್ನು ಹೊಂದಿದೆ. 360° ಆಡಿಯೊ ಪರಿಣಾಮ ಹೊಂದಿದ್ದು, ಎರಡು ಸಾಧನಗಳನ್ನು ಸಂಪರ್ಕಿಸಬಹುದು.
ರಿಯಲ್‌ಮಿ ಬಡ್ಸ್ ಎನ್ 1 ಬೆಲೆ (ಎನರ್ಜೈಸಿಂಗ್ ಗ್ರೀನ್) ₹2,499 ಆಗಿದ್ದು, ₹300 ಕಡಿತ+ ₹200 ಕೂಪನ್ ಸೇರಿದರೆ, ಒಟ್ಟಾರೆ ಬೆಲೆ ₹1,999. realme.com ಮತ್ತು Amazon.in ನಲ್ಲಿ ಲಭ್ಯವಿದೆ.