ಎಲ್ಲಿಗೋ ಹೋಗುವಿರಿ ನಿಲ್ಲಿ ಓ ಮೋಡಗಳೆ
ನಿಮಗಿಂತಲೂ ಮೇಲೆ ನಾವೂ ಹಾರುವೆವು!!!
ಕಚೇರಿ ಕಾರ್ಯ ನಿಮಿತ್ತ ಮುಂಬಯಿಗೆ ತೆರಳಿದ ಸಂದರ್ಭ ತೆಗೆದ ಚಿತ್ರವಿದು.
ಮೊದಲ ಬಾರಿಗೆ ಆಕಾಶದಲ್ಲಿ ತೇಲಾಡಿದ ಅನುಭವ ನನ್ನದಾದರೆ, ನನ್ನ ಕ್ಯಾಮರಕ್ಕೂ ಸಾಕಷ್ಟು ಆಹಾರ ದೊರೆತವು. ಒಂದೊಂದಾಗಿ ಅವುಗಳು ಇಲ್ಲಿ ಮೂಡಿ ಬರಲಿವೆ. ಚೆನ್ನೈ ವಿಮಾನ ನಿಲ್ದಾಣದಲ್ಲಿ ನಾವಿದ್ದ ವಿಮಾನ ಇಳಿಯುತ್ತಿರುವಾಗಿನ ಅನುಭವವನ್ನು ನನ್ನ ಕ್ಯಾಮರವು ವೀಡಿಯೋ ಮೂಲಕ ದಾಖಲಿಸಿಕೊಂಡಿದೆ. ಅದನ್ನೂ ಶೀಘ್ರವಾಗಿ ಈ ಬ್ಲಾಗಿನಲ್ಲಿ ಏರಿಸುತ್ತೇನೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
View Comments
ಅವೀ,
ವಿಮಾನದಿ ಮೋಡಗಳ ಲೋಕದಲ್ಲಿ ಸಾಗುವುದು ಒಂದು ಸೊಗಸಾದ ಅನುಭವ..
ಆಕಾಶದಿ ತೇಲಾಡಿದ್ದು ವಿಮಾನದಲ್ಲಿ ಇದ್ದದ್ದಕ್ಕೋ ಅಥವಾ ....:)
ಶಿವ್ ಅವರೆ,
ನಿಮ್ಮ ಶಂಕೆ ಸಹಜವಾದದ್ದು!!!
ಆದರೆ ನೀವು ಅಥವಾ ಎಂದು ಕೆಲವು ಚುಕ್ಕಿಗಳನ್ನಿರಿಸಿದ್ದಕ್ಕೆ ಸೇರ್ಪಡೆ (ಸ್ಪಷ್ಟನೆ!):
ಮೊದಲ ಯಾನದ ಸುಖದಲ್ಲಿ ಮನಸ್ಸು ತೇಲಾಡುತ್ತಿತ್ತು...!!!!
appa entha adhbuta photo idu. Avi avare, elliruve cheluve elliruve haaDige sarigide nodi ee sequence! :-)
Avi avare, naanu ondu kannada blog shuru madiddene. Adare kannada font nalli yeno problem ide. Neevu yava font upayogistira, hege kannadadalli bariyodu anta tiLisikodteera? Tumba dhanyavada.
ವೀಣಾ ಅವರೆ,
ಎಲ್ಲಿರುವೇ ಎಲ್ಲೆಲ್ಲಾ ಚೆಲ್ಲಾಡಿರುವೇ... ಎಂದು ಸ್ವಲ್ಪ ತಿರುಗಿಸಿದರೆ ಈ ಮೋಡಗಳಿಗೆ ಸೂಕ್ತವಾದೀತು.
ಅನಾಮಿಕ ಅವರೆ,
ಕನ್ನಡ ಬ್ಲಾಗುಗಳಿಗೆ ಭವಿಷ್ಯದ ಫಾಂಟ್ ಎಂದೇ ಕರೆಯಲಾಗುವ ಯುನಿಕೋಡ್ ಫಾಂಟ್ ಸೂಕ್ತ. ಅದು ಯಾವುದೇ ಹೊಸ ಕಂಪ್ಯೂಟರುಗಳಲ್ಲಿ ಡೀಫಾಲ್ಟ್ ಆಗಿ ಇರುತ್ತದೆ. ಕನ್ನಡಕ್ಕೆ ಬಳಸುವ ಫಾಂಟಿನ ಹೆಸರು "ತುಂಗಾ". ಅದು ಅಲ್ಲದಿದ್ದರೆ ಏರಿಯಲ್ ಯುನಿಕೋಡ್ ಫಾಂಟಿನಲ್ಲೂ ಕನ್ನಡ ಕಾಣಿಸುತ್ತದೆ.
ನಿಮಗೆ ಹೆಚ್ಚಿನ ಮಾಹಿತಿ http://bhashaindia.com/patrons/patronshome.aspx?lang=kn ಇಲ್ಲಿ ಜಾಲಾಡಿದರೆ ಸಿಗಬಹುದು. ಮತ್ತೇನಾದರೂ ಸಹಾಯ ಬೇಕಿದ್ದರೆ ತಿಳಿಸಿ.
ಧನ್ಯವಾದ.