ಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಮಹಿಳಾ ಸುರಕ್ಷತೆಯ ದೃಷ್ಟಿಯಿಂದ, ನಮ್ಮ ಪ್ರೊಫೈಲ್ ಚಿತ್ರವನ್ನು ಬೇರೆಯವರು ಡೌನ್‌ಲೋಡ್ ಮಾಡಿ, ತಿರುಚಿ ಶೇರ್ ಮಾಡದಂತೆ ಅಥವಾ ಬೇರೆ ಖಾತೆಗೆ ಅಳವಡಿಸಿಕೊಳ್ಳದಂತೆ ಫೇಸ್‌ಬುಕ್ ಅದನ್ನು ಲಾಕ್ ಮಾಡುವ ಸೌಕರ್ಯವನ್ನು ಪರಿಚಯಿಸಿತ್ತು. ಇದನ್ನು ನಮ್ಮ ಪ್ರೈವೆಸಿ ವಿಭಾಗದಲ್ಲಿ ಸಕ್ರಿಯಗೊಳಿಸಬಹುದಾಗಿತ್ತು.
ಇದೀಗ ಹೊಸ ವೈಶಿಷ್ಟ್ಯವನ್ನು ಫೇಸ್‌ಬುಕ್ ಪರಿಚಯಿಸುತ್ತಿದೆ. ಇದು ಪ್ರೊಫೈಲ್ ಫೋಟೋವನ್ನು ಲಾಕ್ ಮಾಡುವ ‘ಪ್ರೊಫೈಲ್ ಪಿಕ್ಚರ್ ಗಾರ್ಡ್’ನ ಮುಂದುವರಿದ ಭಾಗ. ಅಂದರೆ, ನಮ್ಮ ಇಡೀ ಪ್ರೊಫೈಲನ್ನೇ ಲಾಕ್ ಮಾಡುವುದು. ಈ ರೀತಿ ಮಾಡಿದರೆ, ನಮ್ಮ ಪ್ರೊಫೈಲ್ ಚಿತ್ರವಷ್ಟೇ ಅಲ್ಲದೆ, ನಮ್ಮ ಯಾವುದೇ ಅಪ್‌ಡೇಟ್‌ಗಳು ಕೂಡ ನಮ್ಮ ಸ್ನೇಹಿತರಲ್ಲದವರಿಗೆ ಕಾಣಿಸುವುದಿಲ್ಲ. ಇದು ನಮ್ಮ ಪ್ರೊಫೈಲನ್ನೇ ಲಾಕ್ ಮಾಡುವ ವಿಧಾನ.
ಈ ಲಾಕ್ ಆನ್ ಮಾಡಿಟ್ಟುಕೊಂಡರೆ, ನೀಲಿ ಬಣ್ಣದ ಬ್ಯಾಡ್ಜ್ ಒಂದು ಕಾಣಿಸುತ್ತದೆ. ನಾವು ಮಾಡುವ ಯಾವುದೇ ಪೋಸ್ಟ್‌ಗಳು ನಮ್ಮ ಸ್ನೇಹಿತರಿಗೆ ಮಾತ್ರವೇ ಕಾಣಿಸುತ್ತದೆ. ಪೋಸ್ಟ್ ಮಾಡುವಾಗಲೇ ‘ಪಬ್ಲಿಕ್’ ಆಗಿ ಪೋಸ್ಟ್ ಮಾಡಲಾಗುವುದಿಲ್ಲ ಎಂಬ ಎಚ್ಚರಿಕೆಯುಳ್ಳ ಸಂದೇಶವೊಂದು ಪಾಪ್-ಅಪ್ ಆಗುತ್ತದೆ.
ಈ ಸೌಕರ್ಯವು ಭಾರತದ ಫೇಸ್‌ಬುಕ್ ಬಳಕೆದಾರರಿಗೂ ಹಂತಹಂತವಾಗಿ ಪರಿಚಯಿಸಲಾಗುತ್ತಿದ್ದು, ಕೆಲವರಿಗೆ ಈಗಾಗಲೇ ಲಭ್ಯವಾಗಿದೆ.
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.