Invest in MF, Shares: ಹೂಡಿಕೆ, ಷೇರು ಮಾರಾಟ – ಖರೀದಿಗೆ ಆ್ಯಪ್‌ಗಳು

ಸ್ಟಾಕ್ ಮಾರುಕಟ್ಟೆ ಅಥವಾ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದೆಂದರೆ ಅತ್ಯಂತ ಅಪಾಯದ ಕೆಲಸ ಎಂಬ ಒಂದು ಕಾಲವಿತ್ತು. ಷೇರುಗಳ ಮೌಲ್ಯದ ಏರಿಳಿತವನ್ನೆಲ್ಲ ನೆನಪಿಟ್ಟುಕೊಂಡು, ಖರೀದಿ-ಮಾರಾಟದಲ್ಲಿ ತೊಡಗಿಸಿಕೊಳ್ಳುವ ಜಾಣ್ಮೆ ಇರುವವರಿಗೆ ಸಮಯ ಹೊಂದಿಸುವುದು ತ್ರಾಸದಾಯಕ. ಸ್ವಲ್ಪ ಎಚ್ಚರ ತಪ್ಪಿದ್ರೂ ನಷ್ಟವಾಗಬಹುದು. ಸಮಯವೆಲ್ಲವನ್ನೂ ಷೇರುಗಳ ಮೌಲ್ಯದ ಮೇಲೆಯೇ ಇರಿಸಬೇಕಾಗುತ್ತಿತ್ತು. ಆದರೀಗ, ಮೊಬೈಲ್ ಫೋನ್ – ಇಂಟರ್ನೆಟ್ ಸಂಪರ್ಕ ಬೆರಳತುದಿಯಲ್ಲೇ ಇರುವಾಗ, ಷೇರು ಮಾರುಕಟ್ಟೆ ವ್ಯವಹಾರ ತೀರಾ ಸರಳವಾಗಿಬಿಟ್ಟಿದೆ. ಷೇರುಗಳಲ್ಲಿ ಹಣ ತೊಡಗಿಸುವುದು, ಅದರ ಮೌಲ್ಯ ಹೆಚ್ಚಾದಾಗ ಮಾರುವುದು, ಕಡಿಮೆಯಾದಾಗ ಖರೀದಿಸುವುದನ್ನೆಲ್ಲ ಕ್ಷಣ ಮಾತ್ರದಲ್ಲಿ ನಿಭಾಯಿಸಿಬಿಡಬಹುದು. ನಮ್ಮ ಲಾಭ ಸಂಪಾದನೆಗೆ ತಂತ್ರಜ್ಞಾನವು ನೆರವಿಗೆ ಬಂದಿದ್ದು, ಮೊಬೈಲ್ ಫೋನ್ ಎಂಬ ಅಂಗೈಯ ಅರಮನೆಯಲ್ಲಿ ಇದಕ್ಕೆ ಪೂರಕವಾದ ಆ್ಯಪ್‌ಗಳು ನಮ್ಮ ಕೆಲಸವನ್ನು ಸುಲಭವಾಗಿಸಿವೆ.

ಹಣಕಾಸು ಕ್ಷೇತ್ರವು ಆಧುನಿಕ ತಂತ್ರಜ್ಞಾನವನ್ನು ಮಿಳಿತವಾಗಿಸಿಕೊಂಡು ಬೃಹತ್ತಾಗಿ ಬೆಳೆದಿದೆ. ಜನಸಾಮಾನ್ಯರಲ್ಲಿ ಕೂಡ ‘ಮಾರುಕಟ್ಟೆ ಬಿತ್ತು’ ಎಂಬ ಬೇಸರವೂ ‘ಮಾರ್ಕೆಟ್ ಮೇಲೇರಿತು’ ಎಂಬ ಖುಷಿಯ ಮಾತುಗಳೂ ಕೇಳಿಬರತೊಡಗಿವೆ. ಇದಕ್ಕೆ ಕಾರಣವಾಗಿದ್ದೇ ಮೊಬೈಲ್ ಫೋನ್‌ನಲ್ಲಿರುವ ಆ್ಯಪ್‌ಗಳು. ಜನ ಸಾಮಾನ್ಯರು ಕೂಡ ತಮ್ಮಲ್ಲಿ ಉಳಿತಾಯವಾಗಿರುವ ಹಣವನ್ನು ಬೆಳೆಸಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವತ್ತ ಮನ ಮಾಡಿದ್ದಾರೆ. ತಂತ್ರಜ್ಞಾನವನ್ನು ಬಳಸಿಯೇ ಮೋಸ ಮಾಡುವವರ ಸಂಖ್ಯೆಯೂ ಅಧಿಕವಾಗಿದೆ. ಇಲ್ಲಿ ಹಣ ತೊಡಗಿಸಿ, ಹಣವನ್ನು ಕೆಲವೇ ಕ್ಷಣಗಳಲ್ಲಿ ದುಪ್ಪಟ್ಟು ಮಾಡಿಕೊಳ್ಳಿ ಎಂಬಂಥಹಾ ಬಾಯಲ್ಲಿ ನೀರೂರಿಸುವ ಆಮಿಷಕ್ಕೆ ಮರುಳಾಗುವ ನಮ್ಮ ಖಾಸಗಿ ಮಾಹಿತಿಯನ್ನು, ಬ್ಯಾಂಕಿಂಗ್ ಪಾಸ್‌ವರ್ಡ್ ಮುಂತಾದ ಸೂಕ್ಷ್ಮ ವಿಷಯಗಳನ್ನು ಕದಿಯುವ ಆ್ಯಪ್‌ಗಳೇ ಜಾಸ್ತಿ ಇರುವ ಈ ಕಾಲದಲ್ಲಿ, ಯಾವ ಆ್ಯಪ್ ಅನ್ನು ನಂಬಬೇಕು ಎಂಬ ಕುರಿತು ಹಲವರಿಗೆ ಗೊಂದಲವಿದೆ.

ಮ್ಯೂಚುವಲ್ ಫಂಡ್‌ಗಳಲ್ಲಿ ಅಥವಾ ನೇರವಾಗಿ ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುವುದಕ್ಕೆ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್‌ನ ಆ್ಯಪ್ ಸ್ಟೋರ್‌ಗಳಲ್ಲಿ ಸಾಕಷ್ಟಿವೆ. ಅವುಗಳ ನಡುವೆ ನಕಲಿ ಅಥವಾ ಆ್ಯಪ್‌ಗಳೂ ಸೇರಿಕೊಂಡಿರಬಹುದು. ಈ ಕಾರಣಕ್ಕಾಗಿ ನಮ್ಮ ಪ್ರಜಾವಾಣಿ ಓದುಗರಿಗಾಗಿ, ಈಗಾಗಲೇ ಹಣಕಾಸು ಹೂಡಿಕೆಯಲ್ಲಿ ನಿರತರಾಗಿರುವವರೊಂದಿಗೆ ಸಮಾಲೋಚಿಸಿ, ಇಲ್ಲಿ ಕೆಲವು ಆ್ಯಪ್‌ಗಳನ್ನು ಪಟ್ಟಿ ಮಾಡಲಾಗಿದೆ.

ಪ್ರಮುಖವಾಗಿ ಕೇಳಿಬರುತ್ತಿರುವ ಆ್ಯಪ್ ಹೆಸರುಗಳೆಂದರೆ ಮೋತಿಲಾಲ್ ಓಸ್ವಾಲ್ (Motilal Oswal), ಜೆರೋಧಾ ಅವರ ಕೈಟ್ (Kite by Zerodha), ಅಪ್‌ಸ್ಟಾಕ್ಸ್ (Upstox), 5 ಪೈಸಾ (5paisa), ಏಂಜೆಲ್ ಒನ್ (Angel One), ಕೊಟಕ್ ಸೆಕ್ಯುರಿಟೀಸ್ (Kotak Securities), ಐಸಿಐಸಿಐ ಡೈರೆಕ್ಟ್ ಮಾರ್ಕೆಟ್ಸ್ ಆ್ಯಪ್ (ICICI Direct Markets App), ಟ್ರೇಡಿಂಗ್ ವ್ಯೂ (TradingView), ಐಐಎಫ್ಎಲ್ (IIFL), ಶೇರ್ ಖಾನ್ (ShareKhan), ಈಡೆಲ್ವೀಸ್ (Edelweiss), ಫೈಯರ್ಸ್ (FYERS), ಗ್ರೋ (Groww), ಅಲೀಸ್‌ಬ್ಲೂ (AliceBlue) ಮುಂತಾದವು. ಅಲ್ಲದೆ, ಬಹುತೇಕ ಎಲ್ಲ ಬ್ಯಾಂಕ್‌ಗಳು ಕೂಡ ತಮ್ಮದೇ ಆದ ಟ್ರೇಡಿಂಗ್ ಆ್ಯಪ್ ಹೊಂದಿರುತ್ತವೆ.

ಆದರೆ ನೆನಪಿಡಿ. ಆ್ಯಪ್‌ಗಳು ಉಚಿತವಾಗಿ ಲಭ್ಯವಿದ್ದರೂ, ಅದರ ಬಳಕೆ ಸಂಪೂರ್ಣ ಉಚಿತವಾಗಿರಲಾರದು. ವಹಿವಾಟಿಗೆ ತಕ್ಕಂತೆ, ಕನಿಷ್ಠ ಬ್ರೋಕರೇಜ್ ಅಥವಾ ಕಮಿಷನ್ ಅನ್ನು ಈ ಆ್ಯಪ್‌ಗಳಿಗೂ ನೀಡಬೇಕಾಗುತ್ತದೆ. ಜೊತೆಗೆ, ಪ್ರತಿಯೊಂದು ಆ್ಯಪ್‌ಗೂ ತನ್ನದೇ ಆದ ವೈಶಿಷ್ಟ್ಯಗಳಿವೆ. ಅನುಭವ, ಹೂಡಿಕೆಯ ಗುರಿ, ವಹಿವಾಟಿನ ಅಗತ್ಯತೆಗಳಿಗೆ ಅನುಗುಣವಾಗಿ ಈ ಆ್ಯಪ್‌ಗಳನ್ನು ರೂಪಿಸಲಾಗಿದೆ. ಕೆಲವು ಆ್ಯಪ್‌ಗಳು ವಾರ್ಷಿಕ ಶುಲ್ಕವನ್ನು ಅಥವಾ ವಹಿವಾಟಿಗೆ ತಕ್ಕಂತೆ ಸೇವಾ ಶುಲ್ಕವನ್ನೂ ಯಾಚಿಸುತ್ತವೆ.

ದಿನದ ವೇಳೆ ಕುಳಿತಲ್ಲೇ ವಹಿವಾಟು (ಷೇರುಗಳ ಮಾರಾಟ, ಖರೀದಿ) ನಡೆಸಲು (ಇಂಟ್ರಾ ಡೇ) ನಿರ್ದಿಷ್ಟ ಶುಲ್ಕ (ಹೆಚ್ಚಿನವು ₹20, ಕೆಲವು ಆ್ಯಪ್‌ಗಳಲ್ಲಿ ಉಚಿತ) ವಿಧಿಸುತ್ತವೆ. ಅದೇ ರೀತಿ, ದೀರ್ಘಕಾಲಿಕ ಹೂಡಿಕೆಗೆ ಕೂಡ ಇಂತಿಷ್ಟು ಅಂತ ಕಮಿಷನ್ ಇರುತ್ತದೆ. ಈ ಆ್ಯಪ್‌ಗಳಲ್ಲಿ ಸೈನ್ ಇನ್ ಆಗಿ, ಡಿಮ್ಯಾಟ್ ಖಾತೆ ತೆರೆಯಲು ಸುಮಾರು ₹200ರಿಂದ ₹400ರವರೆಗೆ ಆರಂಭಿಕ ಶುಲ್ಕವನ್ನೂ ಕೆಲವು ಆ್ಯಪ್‌ಗಳು ವಿಧಿಸಬಹುದು (ಷೇರು ವಹಿವಾಟಿಗೆ ಡಿಮ್ಯಾಟ್ ಖಾತೆ ಇರುವುದು ಕಡ್ಡಾಯ, ಕೆಲವು ಬ್ಯಾಂಕುಗಳು ಉಚಿತವಾಗಿ ಮಾಡಿಕೊಡುತ್ತವೆ). ಕೆಲವು ಆ್ಯಪ್‌ಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗೆ ಶುಲ್ಕ ಇರುವುದಿಲ್ಲ. ಮತ್ತೆ ಕೆಲವು ಆ್ಯಪ್‌ಗಳು, ಹೂಡಿಕೆದಾರರ ವಾರ್ಷಿಕ ಲಾಭಾಂಶ ಶೇ.10 ದಾಟಿದರಷ್ಟೇ ಶೇ.0.5ರಿಂದ ಶೇ.1ರಷ್ಟು ಕಮಿಷನ್ ಪಡೆಯುತ್ತವೆ. ಆದರೆ, ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸಿ ಲಾಭ ಮಾಡುವುದನ್ನು ನಿಧಾನವಾಗಿ ಕಲಿತುಕೊಂಡ ಬಳಿಕ, ಈ ಶುಲ್ಕಗಳೆಲ್ಲ ನಗಣ್ಯ ಎನ್ನಿಸಬಹುದು.

ಈ ಸ್ಟಾಕ್ ಟ್ರೇಡಿಂಗ್ ಆ್ಯಪ್‌ಗಳ ಮತ್ತೊಂದು ದೊಡ್ಡ ಅನುಕೂಲವೆಂದರೆ, ಯಾವ ಷೇರಿನ ಮೌಲ್ಯ ಇಳಿಕೆಯಾಯಿತು, ಯಾವುದರ ಮೌಲ್ಯ ಏರಿಕೆಯಾಯಿತು ಎಂದು ಆ ಕ್ಷಣದಲ್ಲೇ ತೋರಿಸುತ್ತವೆ. ಇಷ್ಟೇ ಅಲ್ಲ, ನಾವು ಯಾವುದರಲ್ಲಿ ಹೂಡಿಕೆ ಮಾಡಬಹುದು, ಯಾವಾಗ ಷೇರು ಮಾರಾಟ ಮಾಡಬಹುದು, ಯಾವಾಗ ಯಾವುದನ್ನು ಖರೀದಿಸಬಹುದು ಮುಂತಾಗಿ ತಜ್ಞಸಲಹೆಯನ್ನೂ ನೀಡುತ್ತವೆ. ಹೀಗೆ, ಷೇರು ಮಾರುಕಟ್ಟೆಗೆ ಹೊಸದಾಗಿ ಕಾಲಿಟ್ಟವರನ್ನೂ ಮುನ್ನಡೆಸಿ, ತಾವೂ ಬೆಳೆಯುವ ಕೆಲಸವನ್ನು ಈ ಆ್ಯಪ್‌ಗಳು ಮಾಡುತ್ತವೆ.

ಆದರೆ, ಷೇರು ವಹಿವಾಟಿಗೆ ಸಂಬಂಧಿಸಿ ಮೂರು ಗಮನಿಸಲೇಬೇಕಾದ ವಿಚಾರಗಳಿವೆ:

  1. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದರಲ್ಲಿ ರಿಸ್ಕ್ ಇದೆ. ಯೋಚನೆ ಮಾಡಿ ಹೂಡಿಕೆ ಮಾಡಬೇಕು.
  2. ಒಂದೇ ಕಂಪನಿಯ ಷೇರಿನಲ್ಲಿ ಹೂಡಿಕೆ ಮಾಡಬಾರದು (ಎಂದರೆ ಷೇರುಗಳನ್ನು ಖರೀದಿಸಬಾರದು). ವಿಭಿನ್ನ ಕಂಪನಿಗಳ ಷೇರು ಖರೀದಿಸಿದರೆ, ಒಂದರಲ್ಲಿ ನಷ್ಟವಾದರೂ, ಮತ್ತೊಂದರಲ್ಲಿ ಲಾಭ ದೊರೆಯಬಹುದು.
  3. ದಿಢೀರ್ ಲಾಭ ನಿರೀಕ್ಷಿಸದೆ, ತಾಳ್ಮೆಯಿಂದ ಕಾಯಬೇಕಾಗುತ್ತದೆ. ವ್ಯವಸ್ಥಿತವಾಗಿ ಹಂತ ಹಂತವಾಗಿ ಹೂಡಿಕೆ ಹೆಚ್ಚಿಸುತ್ತಾ ಜಾಣ್ಮೆಯಿಂದ ಆದಾಯ ಹೆಚ್ಚಿಸಿಕೊಳ್ಳಬಹುದು.

Tech Tips by Avinash B Published in Prajavani on 06/07 Feb 2024

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

3 weeks ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

2 months ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

6 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

6 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago