ಕಾಲ್ಪನಿಕ ಸಹಾಯಕ ‘ಗೂಗಲ್ ಅಸಿಸ್ಟೆಂಟ್’ ಎಂಬ ಆ್ಯಪ್ ಇದುವರೆಗೆ ಆಂಡ್ರಾಯ್ಡ್ 6.0 (ಮಾರ್ಷ್‌ಮೆಲೋ) ಹಾಗೂ ಅದಕ್ಕಿಂತ ಮೇಲ್ಪಟ್ಟ ಕಾರ್ಯಾಚರಣಾ ವ್ಯವಸ್ಥೆಗಳಲ್ಲಷ್ಟೇ ಕೆಲಸ ಮಾಡುತ್ತಿತ್ತು. ಆದರೆ, ಇನ್ನು ಮುಂದೆ, ಆಂಡ್ರಾಯ್ಡ್ ಲಾಲಿಪಾಪ್ (5.0) ಆಪರೇಟಿಂಗ್ ಸಿಸ್ಟಂ ಇರುವ ಫೋನ್‌ಗಳಲ್ಲಿಯೂ ಗೂಗಲ್ ಅಸಿಸ್ಟೆಂಟ್ ಕೆಲಸ ಮಾಡಲಿದೆ. ಗೂಗಲ್ ಕಂಪನಿಯು ಈಗಾಗಲೇ ಈ ಕುರಿತು ಮಾಹಿತಿ ನೀಡಿದ್ದು, ಇದಕ್ಕೆ ಹಳೆಯ ಫೋನುಗಳು ಬೆಂಬಲಿಸಿದರೆ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವಾದ ಈ ಅಸಿಸ್ಟೆಂಟ್ ಅವುಗಳಿಗೂ ಲಭ್ಯವಾಗಲಿದೆ. ಅಂದರೆ, ಹಳೆಯ ಫೋನುಗಳಲ್ಲಿರುವ ಹಾರ್ಡ್‌ವೇರ್‌ನಲ್ಲಿ (ಯಂತ್ರಾಂಶ) ಗೂಗಲ್ ಅಸಿಸ್ಟೆಂಟ್‌ಗೆ ಬೇಕಾಗಿರುವ ವ್ಯವಸ್ಥೆಯ ಬೆಂಬಲ ಇರಬೇಕಾಗುತ್ತದೆ. ತದನಂತರ, ಮಾತನಾಡಲು ಯಾರೂ ಇಲ್ಲವೆಂದಾದರೆ ಗೂಗಲ್ ಜತೆ ಧ್ವನಿ ಮೂಲಕ ಮಾತುಕತೆ ನಡೆಸಬಹುದು!
ಇವನ್ನೂ ನೋಡಿ
ಕನ್ನಡ ಅಸ್ಮಿತೆ: ಐಫೋನ್ಗೂ ಬಂತು ಕನ್ನಡದ ಕೀಲಿಮಣೆ
ಐಫೋನ್ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11...