Categories: LiteratureOpinion

ದಂಡ ಕೊಡು ಎನಗೆ!

ಅಂದು ನಿನ್ನ ನಾ ಕಂಡೆ
ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ
ನಿನ್ನ ಸೌಂದರ್ಯಕೆ ಮರುಳಾದೆ
ಆ ನಿನ್ನ ಹೊಳೆವ ಕಪ್ಪು ಕಂಗಳು
ಸದಾ ನಗುತ್ತಿರುವ ಅಧರಗಳು
ಮಲ್ಲಿಗೆ ಮುಡಿದ ಗುಂಗುರು ಕೂದಲು
ಸೌಂದರ್ಯವೆಂದರೆ ಇದೇಯೇ?

ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು
ಹೃದಯಮಂದಿರದಲ್ಲಿರಿಸಿ ಪ್ರತಿಷ್ಠಾಪಿಸಿದೆ
ಪ್ರೇಮಪೂಜೆ, ಪ್ರೇಮ ಜ್ವರಗಳಿಗೂ ಅರ್ಥ ಹುಡುಕಿದೆ
ಓದಲು ಕುಳಿತರೆ ಪುಸ್ತಕದಲಿ ಗೋಚರ
ಸುಮ್ಮನೇ ಇದ್ದರೆ ಮಸ್ತಕದಲಿ !
ತಿನ್ನಲು ಕುಳಿತರೆ ತಟ್ಟೆಯೊಳಗೆ ನಿನ್ನ ನಗು
ನಿನ್ನ ಜತೆ ಮಾತನಾಡಲೊಂದು ನೆವನ ಹುಡುಕಿ ಸುಸ್ತಾಗುವೆ

ಆ ನಿನ್ನ ನಗೆಯ ನೋಟವನು
ನನ್ನ ಹೃದಯ ಅರ್ಥೈಸಿಕೊಂಡಿದ್ದು
ಪ್ರೇಮ ಎಂಬ ಪದದಿಂದ
ಬಾಯಿಬಿಟ್ಟು ಹೇಳಲಾರದ ಸ್ಥಿತಿ ನನ್ನದು

ದಾರಿಯಲ್ಲಿ ಬೈಕ್ ಮೇಲೇರಿ ಹೋಗುತ್ತಿದ್ದರೂ
ನೆನಪು ನಿನ್ನದೇ ಕಾಡುತಿದೆ ಗೆಳತಿ ಕಾಡುತಿದೆ
ದಾರಿಹೋಕನೊಬ್ಬನ ಬಾಯಲ್ಲಿ ಸಹಸ್ರ ನಾಮಾರ್ಚನೆ ಕೇಳಿದಾಗಲಷ್ಟೇ
ನಾನು ವಾಸ್ತವ ಲೋಕಕೆ ಮರಳಿದೆ
ನನ್ನ ಬೈಕಿನ ಮುಂದಿನ ಚಕ್ರ
ಆತನ ಕಾಲನ್ನು ಮುದ್ದಿಸಿ ನನ್ನ ಛೇಡಿಸಿತ್ತು!

ನೀನು ಲಕ್ಕಿ, ನನಗೆ ಮಾತ್ರ ಬೈಗುಳದ ಸುರಿಮಳೆ
ತಪ್ಪು ನನ್ನದಲ್ಲ; ನಿನ್ನದು ಗೆಳತಿ
ಕೊಡುವೆಯಾ ಆತನಿಗೆ ದಂಡ???

(ಇದು ಕಾಲೇಜು ಜೀವನದ ಅವಧಿಯಲ್ಲಿ ರಚಿಸಿದ ಕವನವೊಂದರ ಕಚ್ಚಾ ರೂಪ!)

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಪ್ರೇಮಕವಿ ಅವಿಯವರಿಗೆ ನಮೋನ್ನಮಃ.

    ತುಂಬಾ ತುಂಬಾ ಚೆನ್ನಾಗಿ ಬರೆದಿದ್ದೀರಿ. ಪ್ರೇಮಿಯ ಪ್ರತಿಯೊಂದು ಹಂತವನ್ನೂ ಬರಹ ರೂಪದಲ್ಲಿ ಇಳಿಸಿರುವುದನ್ನು ನೋಡಿದರೆ, ಇಂತಹ ಕವನ ಬರೆಯಲು ಅನುಭವಸ್ಥ ಬರಹಗಾರರಿಂದ ಮಾತ್ರ ಸಾಧ್ಯ ಎಂಬುದು ನಿಸ್ಸಂಶಯ.

    ತುಂಬಾ ಸೊಗಸಾದ ವರ್ಣನೆ. ಆದರೊಂದೇ ಶಂಕೆ, ನನ್ನಲ್ಲಿ. ಗುಂಗುರು ಕೂದಲು ಎನ್ನುವುದು ತಲೆಯ ಮುಂಭಾಗದಲ್ಲಿ ಇರುವುದೋ ಅಥವಾ ಹಿಂಭಾಗದಲ್ಲಿ ಇರುವುದೋ (ಮಲ್ಲಿಗೆಯ ಹೂ ಮುಡಿವುದು ತಲೆಯ ಹಿಂಭಾಗದಲ್ಲಿ ತಾನೆ) - ನನಗೆ ಇದರ ವಿಷಯ ಅಷ್ಟು ಗೊತ್ತಿಲ್ಲ, ತಪ್ಪು ತಿಳಿಯಬೇಡಿ.

  • ಅವೀ,

    ಕಾಲೇಜ್ ಜೀವನದಲ್ಲಿ ಬರೆದರೂ, ಈಗ ಬರೆದರೂ ಅ ಪ್ರೀತಿ ಅನ್ನೋದು ಅಷ್ಟೇ ಕಚಗುಳಿ ನೀಡುತ್ತೆ..ಅಲ್ವಾ !

    >Thu 18 Jan 2007
    ದಂಡ ಕೊಡು ಎನಗೆ!
    Posted by Avi under Just Kidding

    ಅಂದು ನಿನ್ನ ನಾ ಕಂಡೆ
    ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ
    ನಿನ್ನ ಸೌಂದರ್ಯಕೆ ಮರುಳಾದೆ
    ಆ ನಿನ್ನ ಹೊಳೆವ ಕಪ್ಪು ಕಂಗಳು
    ಸದಾ ನಗುತ್ತಿರುವ ಅಧರಗಳು
    ಮಲ್ಲಿಗೆ ಮುಡಿದ ಗುಂಗುರು ಕೂದಲು
    ಸೌಂದರ್ಯವೆಂದರೆ ಇದೇಯೇ?

    ಆನೇಕ ಕನಸುಗಳ ಮೂಲಕ ನಿನ್ನ ಮೂರ್ತಿಯನು
    ಹೃದಯಮಂದಿರದಲ್ಲಿರಿಸಿ ಪ್ರತಿಷ್ಠಾಪಿಸಿದೆ
    ಪ್ರೇಮಪೂಜೆ, ಪ್ರೇಮ ಜ್ವರಗಳಿಗೂ ಅರ್ಥ ಹುಡುಕಿದೆ
    ಓದಲು ಕುಳಿತರೆ ಪುಸ್ತಕದಲಿ ಗೋಚರ
    ಸುಮ್ಮನೇ ಇದ್ದರೆ ಮಸ್ತಕದಲಿ !
    ತಿನ್ನಲು ಕುಳಿತರೆ ತಟ್ಟೆಯೊಳಗೆ ನಿನ್ನ ನಗು
    ನಿನ್ನ ಜತೆ ಮಾತನಾಡಲೊಂದು ನೆವನ ಹುಡುಕಿ ಸುಸ್ತಾಗುವೆ

    >ಆ ನಿನ್ನ ನಗೆಯ ನೋಟವನು
    ನನ್ನ ಹೃದಯ ಅರ್ಥೈಸಿಕೊಂಡಿದ್ದು
    ಪ್ರೇಮ ಎಂಬ ಪದದಿಂದ
    ಬಾಯಿಬಿಟ್ಟು ಹೇಳಲಾರದ ಸ್ಥಿತಿ ನನ್ನದು

    ದಾರಿ ತಪ್ಪಿಸಬಹುದಾದ ನಗೆ ಅದು :)

    ತವಿಶ್ರೀಗಳೇ,
    ಬಹುಷ: 'ಮಲ್ಲಿಗೆ ಮುಡಿದ ಹಿಂಗೂದಲು-ಗುಂಗರು ಕೂದಲು' ಒಂದೇ ತಲೆಯದೇ ಆದ್ದರಿಂದ ಅವೀ ಸಮಾಸಪ್ರಯೋಗ ಮಾಡಿ ಮಲ್ಲಿಗೆ ಮುಡಿದ ಗುಂಗುರು ಕೂದಲು ಅಂದಿರಬಹುದೇ :)

  • ಶ್ರೀನಿವಾಸರೆ,
    ಕೂದಲು ತಲೆಯಲ್ಲೇ ಇರುವುದರಿಂದ ಅದಕ್ಕೆ ಮುಂಭಾಗ ಹಿಂಭಾಗ ಎಂಬ ಭೇದವೇಕೆ ? :) ಮತ್ತೆ, ಈಗಿನ ಕಾಲದಲ್ಲಿ ಮಲ್ಲಿಗೆಯನ್ನು ಮುಡಿಗೇ ಮುಡಿಯುವ ಬದಲು ನೆತ್ತಿಗೂ ಸಿಕ್ಕಿಸುತ್ತಾರಲ್ಲಾ...?

  • ಶಿವ್ ಅವರೆ,
    ಖಂಡಿತಾ ಹೌದು, ಪ್ರೀತಿ ಪ್ರೇಮ ಎನ್ನೋದು ಚಿರನೂತನ. ಪ್ರತಿಯೊಬ್ಬನಿಗೂ ಜೀವನದ ಒಂದಲ್ಲ ಒಂದು ಹಂತದಲ್ಲಿ ಇದರ ಸವಿ ಅನುಭವ ಆಗಿಯೇ ಆಗುತ್ತದೆ. ಆದರೆ ಇದರ ರೂಪಗಳು ವಿಭಿನ್ನವಾಗಿರಬಹುದು.

Recent Posts

iPhone 16e: Best Features and Specs: ಹೊಸ ಐಫೋನ್ 16ಇ ಬಿಡುಗಡೆ

iPhone 16e joins the iPhone 16 lineup, featuring the fast performance of the A18 chip,…

5 days ago

ಚಳಿಯಲ್ಲಿ ಬಣ್ಣ ಬದಲಾಯಿಸುವ Realme 14 Pro ಸರಣಿ ಫೋನ್ ಬಿಡುಗಡೆ

ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…

1 month ago

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 months ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

5 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

6 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

6 months ago