ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ,
ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ?
ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z), ಪ್ರಚಲಿತದಲ್ಲಿರುವ ವಾಕ್ಯವೊಂದು ಹೀಗಿದೆ.
“The quick brown fox jumps over the lazy dog”
ಇದೇ ಮಾದರಿಯಲ್ಲಿ ಕನ್ನಡದಲ್ಲಿಯೂ ಇದೆಯೇ? ಅಥವಾ ಒಂದು ವಾಕ್ಯದಲ್ಲಿ ಎಲ್ಲ ಅಕ್ಷರಗಳು ಬರುವಂತೆ ರಚಿಸಬಹುದೇ? ಎಂಬ ಬಗ್ಗೆ ತಿಳಿದವರು ಸಲಹೆ ನೀಡುವಿರೇ?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಅವಿನಾಶಿಗಳೇ ಇಗೋ ಕನ್ನಡ,
"ಅಆಇಈ ಹೇಳಿಕೊಡುವ ಉಮಾ ಟೀಚರ್ ಊರಿನ ಪಾಲಿಗೆ ಕ್ಷಕಿರಣ, ಪಾಠಕ್ಕೆ ನಿಂತರೆ ಅಕ್ಷರಶಃ ಸರ್ವಜ್ಞ ಋಷಿ, ಏರಿ ಬಂದರೆ ಒನಕೆ ಓಬವ್ವ, ಖಡ್ಗ ಹಿಡಿದು ಘರ್ಜಿಸಿ ಎಂಥವರನ್ನೂ ಜರ್ಝರಿತಗೊಳಿಸುವ ಛತ್ರಪತಿ ಶಿವಾಜಿ, ಅಂತರಂಗ ನಿಗೂಢತೆಯ ಐರಾವತ, ಭವ್ಯ ದಿವ್ಯ ಔಷಧ."
ಸಾರಥಿಯವರೆ,
ಅದ್ಭುತವಾಗಿದೆ ನಿಮ್ಮ ಪ್ರಯತ್ನ. ಲೋಪ ಏನಾದರೂ ಪತ್ತೆ ಹಚ್ಚಲು ತಲೆಕೆರೆದುಕೊಳ್ಳಬೇಕಾಗಿದೆ. :) ಙ,ಞ ಗಳ ಪೂರ್ಣ ಅಕ್ಷರ ಬಳಕೆ ಕಡಿಮೆ. ವಾಙ್ಮಯತೆ, ಕಿಞ್ಞಣ್ಣ ಗಳಲ್ಲಿ ಕಾಣಬಹುದು.
ಅಧ್ಬುತ!! ನಿಜಕ್ಕೂ ಬಹಳ ಖುಷಿ ಆಯ್ತು. ವಿಜಯಸಾರಥಿಗಳೇ, ತಾವು ಪಂಡಿತರೆ ಸರಿ...
ಅವಿನಾಶ್ ಅವರೆ, ನಿಮಗೆ ಈ ಯೋಚನೆ ಬಂದದ್ದು ಇನ್ನೊಂದು ಪ್ರಶಂಸನೀಯ ಪ್ರಸಂಗ.
-ವೀಣಾ..
ವೀಣಾ ಅವರೆ,
ಸಮಯ ಸಿಕ್ಕರೆ ನೀವೂ ಇದನ್ನು ಪ್ರಯತ್ನಿಸಿ ನೋಡಿ. ಮೆದುಳಿಗೊಂದು ಮೇವು.
ಪ್ರೋತ್ಸಾಹದ ನುಡಿಗೆ ಧನ್ಯವಾದಗಳು.
ಸಾರಥಿಯವರ ಬರಹ ಬಹಳ ಸೊಗಸಾಗಿದೆ.
ಅವೀ,
ಕನ್ನಡದ ಎಲ್ಲಾ ಅಕ್ಷರಗಳು ಕೂಡಿದ ವಾಕ್ಯ..ಚೆನ್ನಾಗಿದೆ ಯೋಚನೆ
ಸಾರಥಿ ಅವರೇ,
ಅದ್ಬುತ ವಾಕ್ಯ!
ಇಲ್ಲಿ ನೋಡಿ. http://vishvakannada.com/node/359
ಸುನಿಲರೆ,
ಮಾಹಿತಿ ನೀಡಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.
ನಿಮ್ಮ ಗುಲಾಬಿ ಹೂವಿನ ಮೇಲೆ ಸಣ್ಣ ಹನಿಗಳು ಇವೆ. ಅದೇ ಹಸುರು ಹುಲ್ಲಿನ ಮೇಲೆ ಅದು ಇದ್ದರೆ ಅದರ ಸೌಂದರ್ಯ ಇಮ್ಮಡಿಸಬಹುದು. ನೋಡಿ ಪ್ರಯತ್ನಿಸಿ.
ವೆಂ.
ಸಲಹೆಗೆ ಧನ್ಯವಾದ ವೆಂಕಟೇಶರೇ,
ಇನ್ನೊಮ್ಮೆ ಪ್ರಯತ್ನಿಸ್ತೀನಿ...