ಇದು ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್ ಆಗಿದ್ದು, ನೋಡಲು ಆಕರ್ಷಕವಾಗಿದೆ. ಕತ್ತಿನ ಸುತ್ತ ಚೆನ್ನಾಗಿ ಕೂರುತ್ತದೆ. ಇದರ ಇಯರ್ ಬಡ್‌ಗಳು ಬಳಕೆಯಲ್ಲಿಲ್ಲದಿರುವಾಗ ಪರಸ್ಪರ ಬೆಸೆಯುವಂತೆ ಅಯಸ್ಕಾಂತವಿದೆ. ಇದರ ಮತ್ತೊಂದು ವಿಶೇಷತೆ ಎಂದರೆ 11.5 ಗಂಟೆಗಳ ಪ್ಲೇಬ್ಯಾಕ್ ಸಮಯ. ಅಂದರೆ, ಸಂಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆ ಬೇಕಿದ್ದು, ಈ ಬ್ಯಾಟರಿ ಮೂಲಕ ನಿರಂತರವಾಗಿ 11.5 ಗಂಟೆ ಹಾಡುಗಳನ್ನು ಆಲಿಸಬಹುದು. ನಿರಂತರವಾಗಿ 5.5. ಗಂಟೆ ಫೋನ್ ಕರೆಗೆ ಬಳಸಬಹುದು. ಇದರ ಸ್ಟ್ಯಾಂಡ್‌ಬೈ ಸಮಯ 200 ಗಂಟೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ 38 ಗ್ರಾಂ ತೂಗುವ ಈ ಇಯರ್‌ಫೋನ್ (ನೆಕ್ ಬ್ಯಾಂಡ್) ಅದ್ಭುತವಾದ ಧ್ವನಿಯನ್ನು ಹೊರಸೂಸುತ್ತದೆ.
ವಾಯ್ಸ್ ಅಸಿಸ್ಟೆಂಟ್ ಬೆಂಬಲಿಸುವ ಈ ನೆಕ್ ಬ್ಯಾಂಡ್, ಎಎಸಿ (ಅಡ್ವಾನ್ಸ್‌ಡ್ ಆಡಿಯೋ ಕೋಡಿಂಗ್) ವೈಶಿಷ್ಟ್ಯದೊಂದಿಗೆ ಬ್ಲೂಟೂತ್ ಮೂಲಕ ಫೋನ್‌ನಿಂದ ಆಡಿಯೋ ಪ್ರಸಾರವನ್ನು ಸುಲಲಿತವಾಗಿಸುತ್ತದೆ. ಏಕಕಾಲದಲ್ಲಿ ಎರಡು ಫೋನ್ ಅಥವಾ ಬ್ಲೂಟೂತ್ ಸಾಧನಗಳನ್ನು ಇದಕ್ಕೆ ಸಂಪರ್ಕಿಸಬಹುದಾಗಿದೆ. ಮೊದಲು ಒಂದು ಫೋನ್ ಸಂಪರ್ಕಿಸಿ, ಬಳಿಕ ಆ ಫೋನ್‌ನಲ್ಲಿ ಬ್ಲೂಟೂತ್ ಆಫ್ ಮಾಡಬೇಕು. ನಂತರ ಇನ್ನೊಂದು ಸಾಧನದಲ್ಲಿ ಬ್ಲೂಟೂತ್ ಆನ್ ಮಾಡಬೇಕು. ಒಮ್ಮೆ ಒಬ್ಬರು ತಮ್ಮ ಫೋನ್‌ನ ಆಡಿಯೋ ಕೇಳಲು ಇದನ್ನು ಬಳಸಿದರೆ, ಮತ್ತೊಂದು ಬಾರಿಗೆ ಇನ್ನೊಬ್ಬರು ತಮ್ಮ ಫೋನ್‌ನಿಂದ ಹಾಡುಗಳನ್ನು ಇದೇ ಇಯರ್‌ಫೋನ್‌ನಲ್ಲಿ ಆಲಿಸಬಹುದು. ಈ ಡ್ಯುಯಲ್ ಪೇರಿಂಗ್ ವ್ಯವಸ್ಥೆಯು ಮನೆಯಲ್ಲಿ ಹಾಡುಗಳನ್ನು ಕೇಳಲು ಅನುಕೂಲ.
ಕರೆ ಸ್ವೀಕರಿಸಲು ಮತ್ತು ನಿರಾಕರಿಸಲು ಒಂದು ಬಟನ್, ಹಾಡುಗಳ ಪ್ಲೇ/ಪಾಸ್ ಬಟನ್, ವಾಲ್ಯೂಮ್ ಅಪ್/ಡೌನ್ ಬಟನ್ ಮತ್ತು ಅದನ್ನೇ ಒತ್ತಿ ಹಿಡಿದುಕೊಂಡರೆ ಮುಂದಿನ/ಹಿಂದಿನ ಹಾಡನ್ನು ಕೇಳಬಹುದು. ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇದರಲ್ಲಿದೆ. ನೀರು ಬಿದ್ದರೆ ಪಕ್ಕನೇ ಏನೂ ಆಗುವುದಿಲ್ಲ. ಆ ರೀತಿಯ ಕವಚವಿದೆ. ಕರೆ ಬರುವಾಗ ಅಲರ್ಟ್ ಮಾಡಲು ವೈಬ್ರೇಟ್ ಆಗುವ ವ್ಯವಸ್ಥೆ ಇದರಲ್ಲಿದೆ. ಇದರೊಂದಿಗೆ, ಆನ್/ಆಫ್ ಮಾಡುವ ಬಟನ್ ಕೂಡ ಇದೆ.
ರಬ್ಬರ್‌ನ ಇಯರ್‌ಬಡ್ಸ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಕೇಬಲ್ ಹಾಗೂ ಬಳಕೆದಾರರ ವಿವರಣಾ ಪುಸ್ತಕವನ್ನೂ ನೀಡಲಾಗುತ್ತಿದ್ದು, ಈ ಬ್ಲೂಟೂತ್ ನೆಕ್ ಬ್ಯಾಂಡ್ ಆಕರ್ಷಕವಾದ ತುಸು ದೊಡ್ಡದೇ ಎನಿಸಬಹುದಾದ ಬಾಕ್ಸ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ನೆಕ್ ಬ್ಯಾಂಡ್ ರಬ್ಬರ್ ಗುಣಮಟ್ಟವು ಚೆನ್ನಾಗಿದ್ದು, ಕತ್ತಿನ ಸುತ್ತ ಅನುಕೂಲಕರವಾಗಿ ಕೂರುತ್ತದೆ. ಪ್ರೀಮಿಯಂ ಲುಕ್ ಜತೆಗೆ ವಿನ್ಯಾಸವು ಆಕರ್ಷಕವಾಗಿದೆ. ಇದರ ಬೆಲೆ ರೂ.3499.
-ಅವಿನಾಶ್ ಬಿ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…