ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 92- ಸೆಪ್ಟೆಂಬರ್ 8, 2014
ಶಾಲೆಗಳಲ್ಲಿ ಉಗುರು ಕತ್ತರಿಸಿ ಸ್ವಚ್ಛವಾಗಿಟ್ಟಿರುತ್ತಾರೆಯೇ, ಕೈಗಳಲ್ಲಿ ಕೊಳೆಯಿದೆಯೇ, ಬಾಯಿಗೆ ಕೈ ಹಾಕುತ್ತಾರೆಯೇ ಎಂದೆಲ್ಲಾ ಪರೀಕ್ಷಿಸುವ ಜವಾಬ್ದಾರಿಯನ್ನು ಶಾಲಾ ಮಂತ್ರಿಮಂಡಲದ ‘ಆರೋಗ್ಯ ಸಚಿವರಿಗೆ’ ವಹಿಸುವ ಪರಿಪಾಠವಿತ್ತು. ಯಾವುದೇ ಕಾಯಿಲೆ ಹರಡದಂತೆ ಅಥವಾ ಬಾರದಂತೆ ಕೈಗಳ ಸ್ವಚ್ಛತೆಗೆ ಅಷ್ಟೊಂದು ಪ್ರಾಧಾನ್ಯವಿದೆ. ಊಟ ಮಾಡಿದ ಕೈಯಲ್ಲಿ, ಅಥವಾ ತಮಗರಿವಿಲ್ಲದಂತೆಯೇ ಮೂಗು, ಕಿವಿ, ಬಾಯಿಗೆ ಕೈ ಹಾಕುವುದು, ಪುಟ ತಿರುಗಿಸಲೂ ಬಾಯಿಗೆ ಕೈ, ಊಟ ಮಾಡುತ್ತಿರುವಾಗಲೂ ಸ್ಮಾರ್ಟ್‌ಫೋನ್ ಬಳಸುವವರಿದ್ದಾರೆ… ಇವೇ ಕೈಗಳು ಸದಾ ಕಾಲ ಸ್ಮಾರ್ಟ್‌ಫೋನ್‌ಗಳ ಸಂಪರ್ಕದಲ್ಲಿರುವುದರಿಂದ ಇದನ್ನು ನೆನಪಿಸಬೇಕಾಯಿತು.
ಸ್ಮಾರ್ಟ್‌ಫೋನ್‌ಗಳ ಸ್ಕ್ರೀನ್ ಕೈ, ಕಿವಿ, ಮತ್ತು ಬಾಯಿಗೆ ಸದಾ ಸಂಪರ್ಕದಲ್ಲಿರುವುದರಿಂದಾಗಿ ಅದು ಕೀಟಾಣು, ವೈರಸ್, ಬ್ಯಾಕ್ಟೀರಿಯಾಗಳ ಆವಾಸ ಸ್ಥಾನವಾಗಬಲ್ಲುದು ಎಂಬುದನ್ನು ಹಲವು ಸಂಶೋಧನೆಗಳೂ ತೋರಿಸಿಕೊಟ್ಟಿವೆ. ಕೈಗಳನ್ನಾದರೆ ನೀರು ಹಾಕಿ ಆಗಾಗ್ಗೆ ಶುಚಿ ಮಾಡಬಹುದು, ಆದರೆ ಈ ಟಚ್ ಸ್ಕ್ರೀನ್‌ಗಳನ್ನು? ಅವುಗಳನ್ನು ಆರೋಗ್ಯಪೂರ್ಣವಾಗಿಡುವುದು, ಸೋಂಕು ತಗುಲದಂತೆ ನೋಡಿಕೊಳ್ಳುವುದು ಹೇಗೆ? ಇಲ್ಲಿವೆ ಕೆಲವು ಸಲಹೆಗಳು.
ಕೆಲವರು ಸ್ಕ್ರೀನ್ ಗಾರ್ಡ್ (ಸ್ಕ್ರೀನ್ ಪ್ರೊಟೆಕ್ಟರ್) ಎಂಬ ತೆಳುವಾದ ಪದರವನ್ನು ಅಂಟಿಸಿಕೊಂಡಿರುತ್ತಾರೆ. ಇದರಲ್ಲಿ ಗ್ಲಾಸಿ (Glossy) ಬದಲು ಒಂದಿಷ್ಟು ದೊರಗು ಮೇಲ್ಮೈ ಇರುವ ಮ್ಯಾಟ್ (matt) ಸ್ಕ್ರೀನ್ ಗಾರ್ಡ್‌ಗಳನ್ನು ಆಯ್ದುಕೊಂಡರೆ, ಬೆವರು-ಧೂಳು ಸೇರಿ ಆಗುವ ಕಲೆಯಾಗುವುದನ್ನು ಕೊಂಚ ಮಟ್ಟಿಗೆ ತಡೆಯಬಹುದು. ಆದರೆ ಆಗಾಗ್ಗೆ ಅದನ್ನು ಬದಲಿಸುತ್ತಿರಬೇಕು. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ, ಯಾವುದೇ ಎಲೆಕ್ಟ್ರಾನಿಕ್ ಸಾಧನವನ್ನು ಸ್ವಚ್ಛಗೊಳಿಸುವ ಮುನ್ನ ಅದನ್ನು ಸ್ವಿಚ್ ಆಫ್ ಮಾಡಬೇಕು, ತೆಗೆಯಬಹುದಾಗಿದ್ದರೆ ಅವುಗಳ ಬ್ಯಾಟರಿ ತೆಗೆದ ಬಳಿಕವೇ ಕ್ಲೀನ್ ಮಾಡುವುದು ಉತ್ತಮ.
ಸ್ಕ್ರೀನ್ ಒರೆಸಲು, ಧೂಳಿನ ಕಣ, ಕಣ್ಣಿಗೆ ಕಾಣಬಲ್ಲ ಕೊಳೆ ಹಾಗೂ ಬೆರಳಚ್ಚಿನ ಕಲೆಗಳನ್ನು ನಿವಾರಿಸಲು ಮೆದುವಾದ ಬಟ್ಟೆ ಅಥವಾ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿ. ಟಿಶ್ಯೂಪೇಪರ್ ಅಥವಾ ಪೇಪರ್ ಟವೆಲ್‌ಗಳನ್ನು ಬಳಸಿದಲ್ಲಿ, ಅವುಗಳಲ್ಲಿರಬಹುದಾದ ಧೂಳಿನ ಕಣಗಳಿಂದಾಗಿ ಸ್ಕ್ರೀನ್‌ಗೆ ಹಾನಿಯಾಗುವ ಸಾಧ್ಯತೆಗಳಿರಬಹುದು. ಮಾರುಕಟ್ಟೆಯಲ್ಲಿ 700-800 ರೂ. ಆಸುಪಾಸಿನಲ್ಲಿ ಗ್ಯಾಜೆಟ್ ಕ್ಲೀನಿಂಗ್ ಕಿಟ್ ದೊರೆಯುತ್ತದೆ. ಇದರಲ್ಲಿ ಸ್ಕ್ರೀನ್ ಅಥವಾ ಲೆನ್ಸ್ ಕ್ಲೀನ್ ಮಾಡಲು, ಧೂಳು ನಿವಾರಿಸಲು ಜೆಲ್, ಮೈಕ್ರೋಫೈಬರ್ ಬಟ್ಟೆ, ಹ್ಯಾಂಡ್ ಬ್ಲೋ ಪಂಪ್, ಬ್ರಶ್ ಮುಂತಾದವು ಇರುತ್ತದೆ. ಒಂದು ಕಿಟ್ ತಂದಿಟ್ಟುಕೊಂಡರೆ ಕ್ಯಾಮೆರಾ, ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್‌ಫೋನ್, ಕೀಬೋರ್ಡ್, ಮಾನಿಟರ್ ಇತ್ಯಾದಿ ಗ್ಯಾಜೆಟ್‌ಗಳನ್ನು ಶುಚಿಗೊಳಿಸಲು ಬಳಸಬಹುದು.
ಜಾಸ್ತಿ ಕೊಳೆ ಇದ್ದರೆ ಒಂದಿಷ್ಟು ಡಿಸ್ಟಿಲ್ಡ್ ವಾಟರ್ ತೆಗೆದುಕೊಂಡು, ಸ್ಪ್ರೇಯರ್ ಮೂಲಕ ಮೆದುವಾಗಿ ಹಾಗೂ ಒಳಗಿನ ಭಾಗಗಳಿಗೆ ತಗುಲದಂತೆ ಎಚ್ಚರಿಕೆಯಿಂದ ಸ್ಪ್ರೇ ಮಾಡಿ, ಬಳಿಕ ಮೈಕ್ರೋಫೈಬರ್ ಬಟ್ಟೆಯಿಂದ ಒರೆಸಿರಿ. ಕೊಳೆಯ ಅಂಶ ಗಟ್ಟಿಯಿದ್ದರೆ, ಈ ಡಿಸ್ಟಿಲ್ಡ್ ವಾಟರ್ ಜತೆ ಕೊಂಚ ವಿನೆಗರ್ ಬಳಸಿ. ನೀರಿನಂಶವೇನಾದರೂ ಒಳಭಾಗಕ್ಕೆ ಹೋಯಿತು ಎಂಬ ಶಂಕೆ ಬಂದಲ್ಲಿ ಅಕ್ಕಿ ಅಥವಾ ಸಿಲಿಕಾ ಜೆಲ್ ಹರಳುಗಳ ಮಧ್ಯೆ ಸ್ಮಾರ್ಟ್‌ಫೋನನ್ನು ಸ್ವಲ್ಪ ಹೊತ್ತು ಇರಿಸಿ ತೆಗೆಯಿರಿ. ಇದು ನೀರಿನಂಶವನ್ನು ಹೀರಿಕೊಳ್ಳಬಲ್ಲುದು. ಆದರೆ ತೇವಾಂಶ ನಿವಾರಿಸಲು ಹೇರ್ ಡ್ರೈಯರ್ ಯಾವತ್ತೂ ಬಳಸಬಾರದು. ಸೂಕ್ಷ್ಮ ಭಾಗಗಳಿರುವುದರಿಂದ, ಬಿಸಿ ಜಾಸ್ತಿಯಾಗಿ ಅಥವಾ ವೇಗದ ಗಾಳಿಯಿಂದ ಬಿಡಿಭಾಗಗಳಿಗೆ ತೊಂದರೆಯಾಗಬಹುದು.
ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗೆ ಉಪಯೋಗಿಸುವ ಕೀಬೋರ್ಡ್‌ಗಳನ್ನು ಕೂಡ ಇದೇ ಮಾದರಿ ಸ್ವಚ್ಛಗೊಳಿಸಬಹುದು. ಈ ಗ್ಯಾಜೆಟ್‌ಗಳ ಪೋರ್ಟ್‌ಗಳನ್ನು ಸ್ವಚ್ಛಗೊಳಿಸಬೇಕೆಂದಾದರೆ, ತುಂಬಾ ಎಚ್ಚರಿಕೆಯಿಂದ ಮೆದುವಾಗಿ ಕಾಟನ್ ಬಡ್ ಬಳಸಿ. ಒಳಗಿನ ಧೂಳು, ಕೊಳೆ ನಿವಾರಿಸಲು, ಗ್ಯಾಜೆಟ್ ಕ್ಲೀನಿಂಗ್ ಕಿಟ್‌ನಲ್ಲಿ ಅಥವಾ ಪ್ರತ್ಯೇಕವಾಗಿ ದೊರೆಯಬಹುದಾದ ಹ್ಯಾಂಡ್ ಪಂಪ್ (ಕೈಯಿಂದ ಅದುಮಿ ಜೋರಾಗಿ ಬ್ಲೋ ಮಾಡುವ ಸಾಧನ) ಬಳಸಿ. ಒಟ್ಟಿನಲ್ಲಿ, ನಮ್ಮ ಕೈಗಳನ್ನು ಸ್ವಚ್ಛವಾಗಿಟ್ಟುಕೊಂಡರೆ, ಗ್ಯಾಜೆಟ್‌ಗಳೂ ಸ್ವಚ್ಛವಾಗಿರುತ್ತವೆ.
‘ನಾನು’ ಆ್ಯಪ್ ಮತ್ತೆ ಬಂತು
2ಜಿ ಸಂಪರ್ಕದಲ್ಲಿಯೇ ಉಚಿತ ಕರೆಗಳನ್ನು ಮಾಡಲು ಅನುಕೂಲ ಮಾಡಿಕೊಡುವ ಘೆಚ್ಞ್ಠ ಆ್ಯಪ್ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ತಾಂತ್ರಿಕತೆಯ ಸುಧಾರಣೆಗಾಗಿ ಅದು ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ ಇರಲಿಲ್ಲ. ಈಗ ಸರಿಪಡಿಸಲಾಗಿದೆ. ಆಸಕ್ತರು ಘೆಚ್ಞ್ಠ ಅಳವಡಿಸಿಕೊಳ್ಳಬಹುದು. ಕಿರು ವಿಳಾಸ ಇಲ್ಲಿದೆ: http://bit.ly/NanuApp
ಟೆಕ್ ಟಾನಿಕ್
Notable PDF
ನೋಟೆಬಲ್ ಪಿಡಿಎಫ್ ಎಂಬ ಎಕ್ಸ್‌ಟೆನ್ಷನ್ ಒಂದನ್ನು ನಿಮ್ಮ ಗೂಗಲ್ ಕ್ರೋಮ್ ಬ್ರೌಸರ್‌ಗೆ ಅಳವಡಿಸಿಕೊಂಡು ಬಿಟ್ಟರೆ, ಬ್ರೌಸರಿನಲ್ಲೇ ಪಿಡಿಎಫ್ ಫೈಲುಗಳನ್ನು ಎಡಿಟ್ ಮಾಡಲು ಅನುಕೂಲವಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಸಾಫ್ಟ್‌ವೇರ್ ಖರೀದಿಸಬೇಕಾಗಿಲ್ಲ. ಈ ಎಕ್ಸ್‌ಟೆನ್ಷನ್ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ಖಾತೆ ರಚಿಸಿಕೊಂಡರೆ, ಪಿಡಿಎಫ್ ತಿದ್ದುಪಡಿ ಮಾಡಿ, ಅದಕ್ಕೆ ಕಾಮೆಂಟ್‌ಗಳನ್ನು ಹಾಕಬಹುದು. ಡ್ರಾಪ್‌ಬಾಕ್ಸ್ ಮತ್ತು ಬಾಕ್ಸ್ ಎಂಬ ಕ್ಲೌಡ್ ಸೇವೆಗಳಿಂದಲೂ ಪಿಡಿಎಫ್ ಓಪನ್ ಮಾಡಲು ಮತ್ತು ಸೇವ್ ಮಾಡಲು ಸಾಧ್ಯ. ಗೂಗಲ್ ಡ್ರೈವ್‌ಗೆ ಸೇವ್ ಮಾಡಬೇಕಿದ್ದರೆ ಅಥವಾ ಡಿಜಿಟಲ್ ಸಹಿ ಹಾಕಬೇಕಿದ್ದರೆ ತಿಂಗಳಿಗೆ ಸುಮಾರು 5 ಡಾಲರ್ ಪಾವತಿಸಬೇಕಾಗುತ್ತದೆ. ಗೂಗಲ್ ಕ್ರೋಮ್ ಆ್ಯಪ್ ಸ್ಟೋರ್‌ನಲ್ಲಿ Notable PDF ಅಂತ ಸರ್ಚ್ ಮಾಡಿದರೆ ಅದರ ಲಿಂಕ್ ಸಿಗುತ್ತದೆ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು