ಮೊಬೈಲ್ ಬ್ಯಾಟರಿಯಲ್ಲಿ ಚಾರ್ಜ್ ನಿಲ್ಲುವುದಿಲ್ಲವೇ?

0
666
Wi-Fi Signal logo
Wi-Fi Signal logo (Photo credit: Wikipedia)

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ-5: ವಿಕ ಅಂಕಣ 24-ಸೆಪ್ಟೆಂಬರ್-2012

ಮೊಬೈಲ್ ಫೋನ್‌ನ ಬ್ಯಾಟರಿಯಲ್ಲಿ ಚಾರ್ಜ್ ಉಳಿಯೋದೇ ಇಲ್ಲ ಅಂತ ಪರಿತಪಿಸುತ್ತಿದ್ದೀರಾ?

ಕಂಪ್ಯೂಟರುಗಳ ಥರಾನೇ ಕೆಲಸ ಮಾಡುವ ಸ್ಮಾರ್ಟ್‌ಫೋನ್‌ಗಳನ್ನು ಸದಾ ಪ್ಲಗ್‌ಗೆ ಸಿಲುಕಿಸಿಡುವುದು ಸಾಧ್ಯವಿಲ್ಲ. ಹಲವಾರು ಅಪ್ಲಿಕೇಶನ್‌ಗಳು ರನ್ ಆಗುತ್ತಿರುವಾಗ ಬ್ಯಾಟರಿಯ ಹೀರಿಕೊಳ್ಳುವಿಕೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಹೀಗಾಗಿ 1000 – 1200 mAhಗಿಂತ ಹೆಚ್ಚು ಸಾಮರ್ಥ್ಯದ ಬ್ಯಾಟರಿ ಇರುವ ಸ್ಮಾರ್ಟ್ ಫೋನ್‌ಗಳನ್ನೇ ಖರೀದಿಸುವುದು ಸ್ಮಾರ್ಟ್ ಹೆಜ್ಜೆ.

ಸ್ಮಾರ್ಟ್‌ಫೋನ್‌ಗಳು ಎಂಪಿ3 ಪ್ಲೇಯರ್‌ಗಳಾಗಿ, ಇಮೇಲ್‌ಗಾಗಿ, ಡಿಜಿಟಲ್ ಕ್ಯಾಮರಾ ಆಗಿ, ಗೇಮಿಂಗ್ ಸಾಧನವಾಗಿ ಮತ್ತು ಟಿವಿಯಾಗಿಯೂ ಕೆಲಸ ಮಾಡುತ್ತವೆ. ಬ್ಯಾಟರಿ ಇದ್ದಾಗಲಷ್ಟೇ ಇದೆಲ್ಲ ಸಾಧ್ಯ. ಫೋನ್‌ಗಳು ಸ್ಮಾರ್ಟ್ ಆಗಿರುವಷ್ಟೂ ಬ್ಯಾಟರಿಯ ಸಾಮರ್ಥ್ಯ ಕಡಿಮೆಯಾಗುತ್ತಿರುತ್ತದೆ. ಬ್ಯಾಟರಿ ಉಳಿತಾಯಕ್ಕೆ ಇಲ್ಲಿವೆ ಒಂದಿಷ್ಟು ಟಿಪ್ಸ್:

  • ಫೋನನ್ನು ವೈಬ್ರೇಷನ್ ಮೋಡ್‌ನಲ್ಲಿ ಅಗತ್ಯ ಇದ್ದಾಗ ಮಾತ್ರ ಇರಿಸಿ.
  • GPS ಹಾಗೂ Wi-Fi ಅಗತ್ಯವಿಲ್ಲದಾಗ ಆಫ್ ಮಾಡಿ. ವೈ-ಫೈ ಆನ್ ಮಾಡಿಟ್ಟರೆ, ಅದು ಲಭ್ಯ ವೈ-ಫೈ ಸಂಪರ್ಕಕ್ಕಾಗಿ ಸರ್ಚ್ ಮಾಡುತ್ತಾ, ಬ್ಯಾಟರಿಯನ್ನು ಹೀರಿಕೊಳ್ಳುತ್ತದೆ.
  • ಬ್ಲೂಟೂತ್ ಹೆಡ್‌ಸೆಟ್ ಬಳಸುವುದಕ್ಕೂ ಮಿತಿ ಇರಲಿ, ಬಳಸಿದ ತಕ್ಷಣ ಆಫ್ ಮಾಡಲು ಮರೆಯಬೇಡಿ.
  • ಹೊಸಹೊಸಾ ಅಪ್ಲಿಕೇಶನ್‌ಗಳು ನಿಮ್ಮ ಫೋನನ್ನು ಮತ್ತಷ್ಟು ಸ್ಮಾರ್ಟ್ ಆಗಿಸುತ್ತವೆಯೇನೋ ಹೌದು. ಅವು ಅಗತ್ಯವಿಲ್ಲದಿದ್ದಾಗಲೂ ಹಿನ್ನೆಲೆಯಲ್ಲಿ (Background) ರನ್ ಆಗುತ್ತಿರುತ್ತವೆ. ಫೋನ್‌ನಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ ಎಲ್ಲ ಅಪ್ಲಿಕೇಶನ್‌ಗಳನ್ನು ಡಿಸೇಬಲ್ ಮಾಡಿದರೆ ಬ್ಯಾಟರಿ ದೀರ್ಘ ಕಾಲ ಬರುತ್ತದೆ.
  • ಸ್ಕ್ರೀನ್‌ನ ಬ್ರೈಟ್‌ನೆಸ್ ಕಡಿಮೆ ಇರಿಸಿ. ಹೆಚ್ಚು ಬ್ರೈಟ್ ಆದಷ್ಟೂ ಹೆಚ್ಚು ಬ್ಯಾಟರಿ ಖರ್ಚಾಗುತ್ತದೆ.
  • ಸಾಧನವು ಬಿಸಿಯಾದರೆ ಚಾರ್ಜ್ ಬೇಗನೇ ಕಳೆದುಕೊಳ್ಳುವುದರಿಂದ ಆದಷ್ಟೂ ಬಿಸಿಲಿನಿಂದ, ಬಿಸಿಯಿಂದ ದೂರವಿಡಿ.
  • ಸ್ಕ್ರೀನ್‌ನ ಆಟೋ-ಲಾಕ್ ಸಮಯವನ್ನು (ಗರಿಷ್ಠ 10 ಸೆಕೆಂಡ್) ಕಡಿಮೆ ಮಾಡುವುದು ಬ್ಯಾಟರಿ ಉಳಿತಾಯಕ್ಕೆ ಪೂರಕ.
  • 2ಜಿಗಿಂತ 3ಜಿ ಸಂಪರ್ಕವು ಹೆಚ್ಚು ಬ್ಯಾಟರಿಯನ್ನು ಹೀರುತ್ತದೆ. ಹಾಗಾಗಿ, ಅಗತ್ಯವಿದ್ದಾಗ ಮಾತ್ರ 3ಜಿ ಸಂಪರ್ಕ ಬಳಸುವಂತೆ ಮಾಡುವ ಸೌಲಭ್ಯ ನಿಮ್ಮ ಫೋನ್‌ನಲ್ಲಿದೆಯೇ ಎಂದು ನೋಡಿಕೊಳ್ಳಿ.
  • ದೂರದೂರುಗಳಿಗೆ ಪ್ರಯಾಣ ಮಾಡಿ (ರೈಲಿನಲ್ಲೋ, ಬಸ್ಸಿನಲ್ಲೋ) ಗಮ್ಯ ಸ್ಥಾನ ತಲುಪಿದಾಗ ನಿಮ್ಮ ಮೊಬೈಲ್ ಫೋನ್ ಆಫ್ ಆಗಿದ್ದನ್ನು ಅಥವಾ ಬ್ಯಾಟರಿ ತೀರಾ ಕಡಿಮೆಯಾಗಿದ್ದನ್ನು ನೋಡಿ ಆತಂಕಗೊಂಡಿದ್ದೀರಾ? ಬಸ್ಸು/ರೈಲುಗಳು ಸಿಗ್ನಲ್ ಇಲ್ಲದ ಪ್ರದೇಶಗಳಲ್ಲಿ ಸಂಚರಿಸುತ್ತಿರುವಾಗ, ನಿಮ್ಮ ಫೋನ್ ಸಿಗ್ನಲ್‌ಗಾಗಿ ಸ್ಕ್ಯಾನ್ ಮಾಡುತ್ತಿರುತ್ತದೆ. ಆಗ ಸಾಕಷ್ಟು ಬ್ಯಾಟರಿ ಖಾಲಿಯಾಗುತ್ತದೆ. ಹೀಗಾಗದಂತಿರಲು, ಪ್ರಯಾಣ ಕಾಲದಲ್ಲಿ ನಿಮ್ಮ ಫೋನನ್ನು ಏರ್‌ಪ್ಲೇನ್ ಮೋಡ್‌ನಲ್ಲಿ ಇರಿಸಿಬಿಡಿ. ಹೀಗೆ ಮಾಡಿದರೆ ಸಂಗೀತ ಕೇಳಲು ಯಾವುದೇ ಸಮಸ್ಯೆಯಾಗುವುದಿಲ್ಲ. ಕರೆ ಮಾಡಿದವರಿಗೆ ನಾಟ್ ರೀಚೆಬಲ್ ಅಂತ ಸಂದೇಶವೂ ದೊರೆಯುತ್ತದೆ.
  • ಬೇಕಾದಾಗ ಮಾತ್ರವೇ ಇಂಟರ್ನೆಟ್ ಸಂಪರ್ಕ (GPRS) ಆನ್ ಮಾಡಿ. ಸದಾಕಾಲ ಆನ್ ಇಟ್ಟರೆ ಅದು ಹೆಚ್ಚು ಬ್ಯಾಟರಿಯನ್ನು ಹೀರಿಕೊಳ್ಳುತ್ತದೆ.
  • ಫೋನ್ ನಂಬರುಗಳು, ಸಂದೇಶಗಳು, ಕ್ಯಾಲೆಂಡರ್ ನೋಟ್‌ಗಳು ಮುಂತಾದವುಗಳು ವೆಬ್ ಅಪ್ಲಿಕೇಶನ್ (ಇಮೇಲ್ ಅಥವಾ ಬೇರೆ ವೆಬ್ ಸರ್ವರ್ ಜೊತೆ) ಆಟೋಮ್ಯಾಟಿಕ್ ಆಗಿ ಸಿಂಕ್ ಆಗುವ ಸೌಲಭ್ಯವನ್ನು ಆಫ್ ಮಾಡಿ.

ಇದಕ್ಕೂ ಅಪ್ಲಿಕೇಶನ್‌ಗಳಿವೆ:
ಬ್ಯಾಟರಿ ಉಳಿಸುವ ಕೆಲಸವನ್ನು ಸುಲಭವಾಗಿಸುವ ಅಪ್ಲಿಕೇಶನ್‌ಗಳು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಆಪಲ್, ನೋಕಿಯಾ ಮುಂತಾದವುಗಳ App Store ಗಳಲ್ಲಿ ಲಭ್ಯವಿರುತ್ತವೆ. ಉದಾಹರಣೆಗೆ, NQ Android Booster, JuiceDefender, Carat ಮುಂತಾದ ಟಾಸ್ಕ್ ಕಿಲ್ಲರ್ ಅಪ್ಲಿಕೇಶನ್‌ಗಳು ಉಚಿತವಾಗಿ ಲಭ್ಯವಿದ್ದು, ಅನವಶ್ಯವಾಗಿ ರನ್ ಆಗುತ್ತಿರುವ ಅಪ್ಲಿಕೇಶನ್‌ಗಳನ್ನು ಆನ್/ಆಫ್ ಮಾಡಲು ನಿಮಗೆ ಬಟನ್‌ಗಳ ಮೂಲಕ ಇವು ಸಹಕರಿಸುತ್ತವೆ.

LEAVE A REPLY

Please enter your comment!
Please enter your name here