ಅವಿನಾಶ್ ಬಿ.
ಜನಸಾಮಾನ್ಯರ ಕೈಯಲ್ಲಿರಬಹುದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‍ಗೆ ಹೋಗಿ Karnataka Mobileone ಅಂತ ಟೈಪ್ ಮಾಡಿ ಸರ್ಚ್ ಮಾಡಿದಾಗ ಈ ಆ್ಯಪ್ ಲಭ್ಯವಾಗುತ್ತದೆ. Mobile ಮತ್ತು one ಮಧ್ಯೆ ಸ್ಪೇಸ್ ಇರಬಾರದು. ಸ್ಪೇಸ್ ನೀಡದಿದ್ದರೆ, ಕರ್ನಾಟಕ ಸರಕಾರದ ಲಾಂಛನವಿರುವ ಬೇರೊಂದು ಆ್ಯಪ್ ಕಾಣಿಸಿಕೊಳ್ಳುತ್ತದೆ.
ಸುಮಾರು 9.5 ಎಂಬಿ ತೂಕವಿರುವ ಅಧಿಕೃತ ಆ್ಯಪ್ ಡೌನ್‌ಲೋಡ್ ಆದ ಬಳಿಕ ನಿಮ್ಮ ಮೊಬೈಲ್ ಸಂಖ್ಯೆ ನೀಡಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ಅದೇ ಮೊಬೈಲ್‌ಗೆ ಪಿನ್ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಲಾಗ್ ಇನ್ ಆಗಲು ಇದು ಬೇಕಾಗುತ್ತದೆ. ಇದರಲ್ಲಿರುವ ಸೇವೆಗಳ ಬಗ್ಗೆ ಕ್ಷಿಪ್ರನೋಟ ಇಲ್ಲಿದೆ.
* ಅಗತ್ಯ ಸೇವೆಗಳಲ್ಲಿ ಪ್ರಸ್ತುತ ಬೆಸ್ಕಾಂ, ಹೆಸ್ಕಾಂ ಹಾಗೂ ಬೆಂಗಳೂರು ಜಲಮಂಡಳಿಯ ಬಿಲ್ ಪಾವತಿ ವ್ಯವಸ್ಥೆ, ಬ್ಯಾಂಕಿಂಗ್ ಸೇವೆಗಳಡಿ ಕೆಲವು ಬ್ಯಾಂಕ್‌ಗಳ ಖಾತೆ ತೆರೆಯಬಹುದು.
* ಪೊಲೀಸ್ ಸೇವೆಗಳಲ್ಲಿ, ಬೆಂಗಳೂರು ಪೊಲೀಸ್, ಬೆಂಗಳೂರು ಸಂಚಾರಿ ಪೊಲೀಸ್ ಹಾಗೂ ರಾಜ್ಯ ಅಪರಾಧ ದಾಖಲೆಗಳ ಬ್ಯುರೋದ ಲಿಂಕ್ ಇವೆ. (ಸಮೀಪದ ಪೊಲೀಸ್ ಠಾಣೆ ಯಾವುದು ಮತ್ತು ಅದರ ಸಂಪರ್ಕ ಸಂಖ್ಯೆ, ಇಮೇಲ್, ಅಲ್ಲದೆ, ಜಿಪಿಎಸ್ ಆನ್ ಮಾಡಿದರೆ ಅಲ್ಲಿಗೆ ಹೋಗುವ ನಕ್ಷೆಯೂ ಗೂಗಲ್ ಮ್ಯಾಪ್ ಮೂಲಕ ಲಭ್ಯ. ಪೊಲೀಸರಿಗೆ ದೂರು/ಸಲಹೆ ನೀಡುವ ವ್ಯವಸ್ಥೆ ಸದ್ಯಕ್ಕೆ ಕಾರ್ಯತತ್ಪರವಾಗಿಲ್ಲ. ವಾಹನದ ಸಂಖ್ಯೆ ನೋಂದಾಯಿಸಿ, ದಂಡ ಕಟ್ಟುವ ಅವಕಾಶವಿದೆ. ಪೊಲೀಸ್ ದೃಢೀಕರಣ, ಧ್ವನಿವರ್ಧಕ (ಮೈಕ್) ಅಳವಡಿಸಲು ಅನುಮತಿ, ಕಳವು ವಾಹನದ ದೂರು ನೀಡಲು ಇಲ್ಲಿ ಸಾಧ್ಯ.
* ಆಸ್ಪತ್ರೆಗಳು ಹಾಗೂ ವೈದ್ಯರ ಅಪಾಯಿಂಟ್‌ಮೆಂಟ್ ಪಡೆಯುವ ಅವಕಾಶವಿದ್ದು, ಪೂರ್ಣರೂಪದಲ್ಲಿ ಇನ್ನಷ್ಟೇ ಕಾರ್ಯಾಚರಿಸಬೇಕಿದೆ.
* ಸಾರಿಗೆ ವಿಭಾಗದಲ್ಲಿ, ಮೇರು ಕ್ಯಾಬ್ಸ್, ಓಲಾ ಕ್ಯಾಬ್ಸ್, ರೈಡಿಂಗೋ ಹಾಗೂ ಮೈಸೂರಿನ ಐಟಿಎಸ್ ವ್ಯವಸ್ಥೆಯ ಲಿಂಕ್ ಇವೆ. ಆರ್‌ಟಿಒ ಸೇವೆಯಡಿ, ಚಾಲನಾ ಪರವಾನಗಿ (ಡಿಎಲ್), ಕಲಿಕಾ ಪರವಾನಗಿ (ಎಲ್ಎಲ್)ಗೆ ಅರ್ಜಿ ಸಲ್ಲಿಸಬಹುದು. ಮೆಟ್ರೋ ರೈಲಿನ ದರ ಮಾಹಿತಿ, ಸ್ಮಾರ್ಟ್ ಕಾರ್ಡ್ ರೀಚಾರ್ಜ್ ವ್ಯವಸ್ಥೆಯಿದೆ.
* ಟೆಲಿಕಾಂ ಸೇವೆಯಡಿ, ಪೋಸ್ಟ್‌ಪೇಯ್ಡ್ ಬಿಲ್ ಪಾವತಿ ಹಾಗೂ ಪ್ರೀಪೇಯ್ಡ್ ರೀಚಾರ್ಜ್ ಆಯ್ಕೆಗಳಿವೆ.
* ಮುನಿಸಿಪಲ್ ಸೇವೆಗಳ ಅಡಿ, ಬೆಂಗಳೂರಿನ ಆಸ್ತಿ ತೆರಿಗೆ ಪಾವತಿ ಆಯ್ಕೆಯಿದ್ದರೆ, ಪೌರಾಡಳಿತ ನಿರ್ದೇಶನಾಲಯದ ಲಿಂಕ್ ಮೂಲಕ ರಾಜ್ಯದ ಯಾವುದೇ ಸ್ಥಳದಿಂದ ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಬಹುದು.
* ಪ್ರವಾಸ ಸೇವೆಯಡಿ, ಕೆಎಸ್ಸಾರ್ಟಿಸಿ, ರೆಡ್‌ಬಸ್ ಮೂಲಕ ಬಸ್ಸು ಟಿಕೆಟ್, ಐಆರ್‌ಸಿಟಿಸಿ ಮೂಲಕ ರೈಲು ಟಿಕೆಟ್ ಹಾಗೂ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಲಿಂಕ್ ಮೂಲಕ ಪ್ಯಾಕೇಜ್ ವಿಚಾರಿಸುವ, ಕಾಯ್ದಿರಿಸುವ ಆಯ್ಕೆಯಿದೆ.
* ಉದ್ಯೋಗ ಸೇವೆಯಡಿ ಬಾಬಾ ಜಾಬ್ ಪೋರ್ಟಲ್‌ನ ಲಿಂಕ್ ಇದ್ದು, ನೋಂದಾಯಿಸಿಕೊಳ್ಳಬೇಕಾಗುತ್ತದೆ.
* ಆಸ್ತಿ ತೆರಿಗೆ, ಆದಾಯ ತೆರಿಗೆ ಇಲಾಖೆಗಳ ಲಿಂಕ್, ತೆರಿಗೆ ಪಾವತಿಗಾಗಿ ಕ್ಲಿಯರ್‌ಟ್ಯಾಕ್ಸ್ ಎಂಬ ಸೇವೆಯ ಲಿಂಕ್ ಇದೆ.
* ಏಕಾಂಗಿಯಾಗಿ ಓಡಾಡುತ್ತಿರುವ ಮಹಿಳೆಯರು, ವಯೋವೃದ್ಧರು, ಮಕ್ಕಳ ಭದ್ರತೆಗಾಗಿ ಎಂ-ಪವರ್ ಎಂಬ ಆ್ಯಪ್ ವ್ಯವಸ್ಥೆಯಿದ್ದು, ಕಾರ್ಯಾಚರಿಸುತ್ತಿದೆ.
* ಟ್ರಾಫಿಕ್ ಪೊಲೀಸರಿಗೆ, ಆರ್‌ಟಿಒಗೆ ಮತ್ತು ಬಿಬಿಎಂಪಿಗೆ ಯಾವುದೇ ಸಮಸ್ಯೆಯ ಬಗ್ಗೆ ದೂರು ನೀಡಬೇಕಿದ್ದರೆ, ಮೊಬೈಲ್‌ನಿಂದಲೇ ಫೋಟೋ ತೆಗೆದು ಅಪ್‌ಲೋಡ್ ಮಾಡಿ ಸಾಕ್ಷ್ಯಾಧಾರ ಸಮೇತ ದೂರು ನೀಡುವ ಆ್ಯಪ್ ಕೂಡ ಅಡಕವಾಗಿದೆ.
* ಕೃಷಿ ಸೇವೆಯಡಿ ರಾಜ್ಯ ಕೃಷಿ ಇಲಾಖೆಯು ಉಚಿತ ಎಸ್ಎಂಎಸ್ ಬೆಳೆಗಳ ಬೆಲೆ ತಿಳಿದುಕೊಳ್ಳಲು, ಪ್ರಕೃತಿ ವಿಕೋಪ, ಹವಾಮಾನ ಮುನ್ಸೂಚನೆ ಪಡೆಯುವ, ಬೆಳೆ ರಕ್ಷಣೆಗೆ ಯೋಜನೆ ರೂಪಿಸಲು ನೆರವಾಗುವ ಆ್ಯಪ್ ಇದೆ.
* ಪಾಸ್‌ಪೋರ್ಟ್, ಮುದ್ರಾಂಕ ಮತ್ತು ನೋಂದಣಿ ಇಲಾಖೆ, ಕಾನೂನು ಸಹಾಯ, ಸಕಾಲ, ಬಿ2ಸಿ (ಉದ್ದಿಮೆಗಳಿಂದ ಗ್ರಾಹಕನ ಬಳಿಗೆ) ಆ್ಯಪ್‌ಗಳ ಗುಚ್ಛವಿದೆ.
* ಪಿಯುಸಿ ಅಂಕಗಳ ಮರುಮಾಪನಕ್ಕೆ ಅರ್ಜಿ, ನಕಲು ಪ್ರತಿಗೆ ಅರ್ಜಿ ಸಲ್ಲಿಸಲು ಮತ್ತು ಎಸ್ಸೆಸ್ಸೆಲ್ಸಿ ಫಲಿತಾಂಶ ತಿಳಿದುಕೊಳ್ಳುವ ಆ್ಯಪ್ ಇದರಲ್ಲೇ ಅಡಕವಾಗಿದೆ.
* ಅಂಚೆ ಇಲಾಖೆ ಮೂಲಕ ಕಳುಹಿಸಲಾದ ಸರಕು, ಲಕೋಟೆಗಳ ಸ್ಥಿತಿಗತಿ ತಿಳಿದುಕೊಳ್ಳಬಹುದು. ಸರಕಾರಿ ನೌಕರರು ತಾವು ಕೆಲಸಕ್ಕೆ ಸೇರಿದಂದಿನಿಂದ ನಿವೃತ್ತಿಯಾಗುವವರೆಗಿನ ಕೆಲಸದ ಮಾಹಿತಿಯನ್ನು ಪಡೆದುಕೊಳ್ಳುವ ಹೆಚ್ಆರ್‌ಎಂಎಸ್ ವ್ಯವಸ್ಥೆಯಿದೆ.
ಬೆಂಗಳೂರು ಕೇಂದ್ರಿತ
ಇವಿಷ್ಟು ಸೇವೆಗಳಿರುವ ಈ ಆ್ಯಪ್ ಅನ್ನು ಹಲವರು ಈಗಾಗಲೇ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ, ಶಹಭಾಸ್ ನೀಡಿದ್ದಾರೆ. ಆದರೆ ಬೆಂಗಳೂರು ಕೇಂದ್ರಿತವಾಗಿಯೇ ಸೇವೆಗಳಿವೆ ಎಂಬ ಬಗ್ಗೆ ಈ ಆ್ಯಪ್‌ನ ಕೆಳಗೆಯೇ ಕಾಮೆಂಟ್‌ಗಳ ಮೂಲಕ ಗಮನ ಸೆಳೆದು, ರಾಜ್ಯದ ಬೇರೆಡೆಯ ಸೇವೆಗಳನ್ನೂ ಸೇರ್ಪಡೆಗೊಳಿಸಲು ಕೋರಿದ್ದಾರೆ.
ಕನ್ನಡ
ಪ್ರಮುಖಾಂಶಗಳು
ಆಂಡ್ರಾಯ್ಡ್ ಮತ್ತು ಆ್ಯಪಲ್ ಸ್ಮಾರ್ಟ್‌ಫೋನ್‌ಗಳಲ್ಲಿ Karnataka Mobileone ಆ್ಯಪ್ ಲಭ್ಯವಿದೆ.
ಸಾಮಾನ್ಯ ಫೀಚರ್ ಫೋನ್‌ಗಳಲ್ಲಿ *161# ಅಂತ ಟೈಪ್ ಮಾಡಿ ಕಳುಹಿಸುವ ಮೂಲಕ, ಸೇವೆಗಳ ಮಾಹಿತಿ ಪಡೆಯಬಹುದು.
ಕಂಪ್ಯೂಟರಿನಲ್ಲೇ ನೋಡುವವರಿಗೆ mobile.karnataka.gov.in ತಾಣವಿದೆ.
ಗ್ರಾಹಕ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಲು: 1800-425-425-426
1800-425-425-425 ಗೆ ಮಿಸ್ಡ್ ಕಾಲ್ ನೀಡಿದರೆ, ಈ ಮೇಲಿನ ವಿವರ ಎಸ್ಎಂಎಸ್ ರೂಪದಲ್ಲಿ ಲಭ್ಯ.
161 ಗೆ ಎಸ್ಎಂಎಸ್ ಸೇವೆ ಇದೆ ಎಂದು ಹೇಳಲಾಗಿದೆ. ಪ್ರಯೋಗಕ್ಕಾಗಿ ಹಲೋ ಎಂದು ಟೈಪ್ ಮಾಡಿ ಕಳುಹಿಸಿದ ತಕ್ಷಣ, ನಿರ್ದಿಷ್ಟ ಸೇವೆಗೆ ನಿರ್ದಿಷ್ಟ ಪದಗಳನ್ನು ಎಸ್ಎಂಎಸ್ ರೂಪದಲ್ಲಿ ಕಳುಹಿಸಿ ಎಂಬ ಪ್ರತ್ಯುತ್ತರವೂ ಜತೆಗೆ ಸಂಪೂರ್ಣ ಲಿಂಕ್‌ಗಳ ವಿವರವುಳ್ಳ ಮಾಹಿತಿಯೂ ಬಂದಿದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…