ಕಂಪ್ಯೂಟರ್, ಇಂಟರ್ನೆಟ್ ಜತೆಗೆ ನೀವು ಸಿದ್ಧ ಮಾಡಿಟ್ಟುಕೊಳ್ಳಬೇಕಾಗಿರುವ ವಿಷಯಗಳು:
1. ನಿಮ್ಮ 16 ಅಂಕಿಗಳ ಆಧಾರ್ ಸಂಖ್ಯೆ
2. ಎಲ್‌ಪಿಜಿ ವಿತರಕರ (ಡಿಸ್ಟ್ರಿಬ್ಯೂಟರ್) ಸರಿಯಾದ ಹೆಸರು
3. ಎಲ್‌ಪಿಜಿ ಗ್ರಾಹಕ ಸಂಖ್ಯೆ (ಎಲ್‌ಪಿಜಿ ಪಾಸ್‌ಬುಕ್ ಅಥವಾ ಕಾರ್ಡ್‌ನಲ್ಲಿರುವ ಆರಂಕಿಯ ಸಂಖ್ಯೆ)
4. ನೆಟ್ ಬ್ಯಾಂಕಿಂಗ್‌ನ ಯೂಸರ್ ನೇಮ್ ಹಾಗೂ ಪಾಸ್‌ವರ್ಡ್ ಹಾಗೂ ಬ್ಯಾಂಕ್ ಖಾತೆ ಸಂಖ್ಯೆ
5. ಎಲ್‌ಪಿಜಿ ಐಡಿ (17 ಅಂಕಿಯ ಒಂದು ಸಂಖ್ಯೆ)
6. ನಿಮ್ಮ ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ
http://bit.ly/AdharLPG ಎಂಬಲ್ಲಿ ಹೋಗಿ, Start Now ಎಂಬ ಬಟನ್ ಒತ್ತಿಬಿಡಿ. ಅಲ್ಲಿ ತೆರೆದುಕೊಳ್ಳುವ ಪುಟದ ಒಂದನೇ ಹಂತದಲ್ಲಿ ನಿಮ್ಮ ರಾಜ್ಯ, ಜಿಲ್ಲೆ, 2ನೇ ಹಂತದಲ್ಲಿ ನೀವು ಪಡೆಯಬೇಕೆಂದಿರುವ ಪ್ರಯೋಜನದ ವಿಧವನ್ನು LPG ಅಂತಲೂ, ‘ಸ್ಕೀಮ್’ ಎಂದಿರುವಲ್ಲಿ, ನಿಮ್ಮ ಎಲ್‌ಪಿಜಿ ವಿತರಣಾ ಕಂಪನಿಯ ಹೆಸರನ್ನು [ಬಿಪಿಸಿಎಲ್ (ಭಾರತ್), ಹೆಚ್‌ಪಿಸಿಎಲ್ ಅಥವಾ ಐಒಸಿಎಲ್ (ಇಂಡೇನ್)] ಆಯ್ಕೆ ಮಾಡಿಕೊಳ್ಳಿ. ನಂತರ ನಿಮ್ಮ ವಿತರಕರ (ಡಿಸ್ಟ್ರಿಬ್ಯೂಟರ್) ಹೆಸರು ಆಯ್ಕೆ ಮಾಡಿಕೊಳ್ಳುವ ಡ್ರಾಪ್ ಡೌನ್ ಮೆನು ಕಾಣಿಸುತ್ತದೆ. ನಂತರದ ಫೀಲ್ಡ್‌ನಲ್ಲಿ ಎಲ್‌ಪಿಜಿ ಗ್ರಾಹಕ ಸಂಖ್ಯೆ (ಕನ್ಸ್ಯೂಮರ್ ನಂಬರ್) ದಾಖಲಿಸಿ.
ಗ್ರಾಹಕ ಸಂಖ್ಯೆ ದಾಖಲಿಸಿದ ಬಳಿಕ ಪಕ್ಕದಲ್ಲೇ ಎಲ್‌ಪಿಜಿ ಯಾರ ಹೆಸರಲ್ಲಿದೆಯೋ ಅವರ ಹೆಸರು ಕಾಣಿಸಿಕೊಳ್ಳುತ್ತದೆ (ಸರಿಯಾಗಿಲ್ಲದಿದ್ದರೆ ನಿಮ್ಮ ಡಿಸ್ಟ್ರಿಬ್ಯೂಟರನ್ನು ಸಂಪರ್ಕಿಸಿ). ಮೂರನೇ ಹಂತದಲ್ಲಿ ನಿಮ್ಮ ಇಮೇಲ್ ವಿಳಾಸ ಹಾಗೂ ಎಲ್‌ಪಿಜಿ ಕಂಪನಿ ಜತೆಗೆ ಈಗಾಗಲೇ ನೋಂದಾಯಿಸಿಕೊಂಡಿರುವ ಫೋನ್ ಸಂಖ್ಯೆ ದಾಖಲಿಸಿ. ನಿಮ್ಮ ಮಾಹಿತಿಯನ್ನು ದೃಢೀಕರಿಸಿಕೊಳ್ಳುವುದಕ್ಕಾಗಿ ಇವರೆಡಕ್ಕೂ ಏಕ ಕಾಲಿಕ ಪಾಸ್‌ವರ್ಡ್ (ಒನ್ ಟೈಮ್ ಪಾಸ್‌ವರ್ಡ್ -ಒಟಿಪಿ) ಕಳುಹಿಸಲಾಗುತ್ತದೆ. ಒಟಿಪಿ ದಾಖಲಿಸುವಾಗ ಕ್ಯಾಪ್ಚಾ ಎಂದು ಹೇಳಲಾಗುವ ಅಂಕಿ ಮತ್ತು ಅಕ್ಷರಗಳನ್ನು ಅಲ್ಲಿರುವ ಬಾಕ್ಸ್‌ನಲ್ಲಿ ಟೈಪ್ ಮಾಡಿ ಹಾಕಿಬಿಡಿ. (ಇದು ಆನ್‌ಲೈನ್ ಭದ್ರತೆಗಾಗಿ). ನಂತರ 16 ಅಂಕಿಗಳ ಆಧಾರ್ ಸಂಖ್ಯೆ ದಾಖಲಿಸಿ. ಈಗ ಆಧಾರ್ ಮತ್ತು ಎಲ್‌ಪಿಜಿ ಖಾತೆ ಪರಸ್ಪರ ಸಂಪರ್ಕವಾಯಿತು. ಕೆಲವು ದಿನಗಳ ಬಳಿಕ ಈ ಬಗ್ಗೆ ನಿಮಗೆ ದೃಢೀಕರಣ ಸಂದೇಶ ಬರುತ್ತದೆ.
ಆಧಾರ್ ಮತ್ತು ಎಲ್‌ಪಿಜಿ ಖಾತೆಗೆ ಬ್ಯಾಂಕ್ ಖಾತೆಯನ್ನು ಸಂಪರ್ಕಿಸಲು, ಸ್ಟೇಟ್ ಬ್ಯಾಂಕ್, ಕೆನರಾ, ಆ್ಯಕ್ಸಿಸ್ ಬ್ಯಾಂಕ್ ಮುಂತಾದವುಗಳಲ್ಲಿ ಇಂಟರ್ನೆಟ್ ಬ್ಯಾಂಕಿಂಗ್‌ಗೆ ಲಾಗಿನ್ ಆಗಿ, ನೋಂದಾಯಿಸಬಹುದು. ನಿಮ್ಮ ಬ್ಯಾಂಕ್‌ಗೆ ಆನ್‌ಲೈನ್ ವ್ಯವಸ್ಥೆ ಇಲ್ಲದಿದ್ದರೆ, ಶಾಖಾ ಕಚೇರಿಗೆ ಹೋಗಿ ಅದನ್ನು ಲಿಂಕ್ ಮಾಡಬಹುದು.
ಬಳಿಕ, MyLpg.in ಎಂಬಲ್ಲಿ ಹೋಗಿ. ಲಾಗ್ ಇನ್ ಆಗುವುದು ಎಲ್ಲಿ ಎಂಬುದು ಗೊಂದಲವಾಗಬಹುದು. ನಿಮ್ಮ ಅಡುಗೆ ಅನಿಲ ವಿತರಣಾ ಕಂಪನಿಯ ಸಿಲಿಂಡರ್ ಮೇಲೆ ಕ್ಲಿಕ್ ಮಾಡಿ. ಎಲ್‌ಪಿಜಿ ಗ್ರಾಹಕ ಸಂಖ್ಯೆ ಹಾಗೂ ಈಗಾಗಲೇ ನೋಂದಾಯಿಸಿರುವ ಮೊಬೈಲ್ ಸಂಖ್ಯೆ ನಮೂದಿಸಿ, ನೋಂದಾಯಿಸಿಕೊಳ್ಳಿ. ಇಮೇಲ್ ವಿಳಾಸ ಸೇರಿಸಿದರೆ, ಇಮೇಲ್ ವಿಳಾಸವೇ ನಿಮ್ಮ ಲಾಗಿನ್ ಐಡಿ ಆಗುತ್ತದೆ. ಪಾಸ್‌ವರ್ಡನ್ನು ಇದೇ ಇಮೇಲ್ ವಿಳಾಸಕ್ಕೆ ಕಳುಹಿಸುತ್ತಾರೆ. ಹೊಸ ಸಿಲಿಂಡರ್ ಬುಕ್ ಮಾಡಲು, ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಆಗಿದೆಯೇ ಎಂದು ಪರಿಶೀಲಿಸಲು, ನಿಮ್ಮ ಎಲ್‌ಪಿಜಿ ಐಡಿ ತಿಳಿಯಲು, ಸಬ್ಸಿಡಿ ನಿರಾಕರಿಸಲು, ಎರಡನೇ ಸಿಲಿಂಡರ್ ಅಥವಾ 5 ಕೆಜಿಯ ಸಿಲಿಂಡರ್ ಬುಕ್ ಮಾಡಲು, ಸೇವೆ ಸರಿ ಇಲ್ಲದಿದ್ದರೆ ವಿತರಕರನ್ನು ಅಥವಾ ವಿತರಣಾ ಕಂಪನಿಯನ್ನೇ (ಪೋರ್ಟಿಂಗ್) ಬದಲಾಯಿಸಲು…. ಹೀಗೆ ಎಲ್ಲ ಆಯ್ಕೆಗಳು ಇಲ್ಲೇ ಲಭ್ಯ.
ಟೆಕ್ ಟಾನಿಕ್: ಇಮೇಲ್‌ನಲ್ಲಿ BCC, ಏನಿದು?
ಇಮೇಲ್ ಮಾಡುವಾಗ, ಮುಖ್ಯವಾಗಿ ಯಾರಿಗೆ ಉದ್ದೇಶಿತವಾಗಿದೆಯೋ ಅವರ ಇಮೇಲ್ ವಿಳಾಸವನ್ನು To ಎಂಬಲ್ಲಿಯೂ, ಅದರ ಒಂದು ನಕಲು ಪ್ರತಿಯು ಬೇರೆಯವರಿಗೆ ಕಳುಹಿಸಬೇಕಿದ್ದರೆ ಅವರ ಇಮೇಲ್ ವಿಳಾಸವನ್ನು CC ಎಂಬಲ್ಲಿಯೂ ದಾಖಲಿಸಬೇಕೆಂದು ಹೆಚ್ಚಿನವರಿಗೆ ಗೊತ್ತು. ಆದರೆ BCC ಎಂಬ ಮತ್ತೊಂದು ಕ್ಷೇತ್ರವಿದೆ. ಇದರ ಉಪಯೋಗ ಏನು ಕೆಲವರಿಗೆ ಮಾತ್ರ ಗೊತ್ತಿದೆ. ಇಲ್ಲಿ ಯಾರದ್ದೇ ಇಮೇಲ್ ವಿಳಾಸ ದಾಖಲಿಸಿದರೆ, BCC ಯಲ್ಲಿರುವ ವಿಳಾಸವು ನೀವು To ಮತ್ತು CC ಮೂಲಕ ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಅಂದರೆ, ಯಾರಿಗೆಲ್ಲಾ ಇಮೇಲ್ ಕಳುಹಿಸಿದ್ದೀರಿ ಎಂಬುದು ಯಾರಿಗೂ ತಿಳಿಯದಿರಲಿ ಎಂಬ ಉದ್ದೇಶ ನಿಮ್ಮದಾಗಿದ್ದರೆ, BCC ಯಲ್ಲಿ ಇಮೇಲ್ ವಿಳಾಸ ಹಾಕಿದರಾಯಿತು.
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, ಜನವರಿ 19, 2015
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
Gud,,,, job
ಥ್ಯಾಂಕ್ಸ್ ಕುಸುಮ್
Reblogged this on My Blog and commented:
ಮಾನ್ಯರೇ, ಒಳ್ಳೆಯ ಮಾಹಿತಿ ಇಂತಹ ಮಾಹಿತಿಗಳು ಆಗಾಗ ಬರುತ್ತಿರಲಿ. ವಂದನೆಗಳು.
ಮಾನ್ಯರೇ, ಇದು ಒಳ್ಳೆಯ ಉಪಯುಕ್ತ ಮಾಹಿತಿ. ಇಂತಹ ಮಾಹಿತಿಗಳು ಆಗಾಗ ಬರುತ್ತಿರಲಿ. ವಂದನೆಗಳು.
ಮೆಚ್ಚಿ ಕೊಂಡಿರುವುದಕ್ಕೆ ಧನ್ಯವಾದಗಳು ನಂಜುಂಡರಾಜು ಅವರೇ.