ಇನ್ನು ಮುಂದೆ ಫೇಸ್‌ಬುಕ್ ಮೆಸೆಂಜರ್ ಮೂಲಕ ಸಂವಹನ ನಡೆಸಲು ಫೇಸ್‌ಬುಕ್ ತಾಣಕ್ಕೇ ಲಾಗಿನ್ ಆಗಬೇಕಾಗಿಲ್ಲ ಅಥವಾ ಸ್ಮಾರ್ಟ್ ಫೋನನ್ನೇ ನೆಚ್ಚಿಕೊಳ್ಳಬೇಕಾಗಿಲ್ಲ. ಈ ಮೆಸೆಂಜರ್‌ನ ವೆಬ್ ಆವೃತ್ತಿಯನ್ನು ಫೇಸ್‌ಬುಕ್ ಬಿಡುಗಡೆಗೊಳಿಸಿದೆ. ಅಂದರೆ, ಕಂಪ್ಯೂಟರಿನಲ್ಲಿ ಯಾವುದಾದರೂ ಬ್ರೌಸರ್ ಮೂಲಕವೇ ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವ ಮೂಲಕ ನೀವು ಚಾಟ್ ನಡೆಸಬಹುದಾಗಿದೆ. Messenger.com ಎಂದು ಬ್ರೌಸರ್‌ನ ಅಡ್ರೆಸ್ ಬಾರ್‌ನಲ್ಲಿ ಟೈಪ್ ಮಾಡಿ, ಲಾಗಿನ್ ಐಡಿ, ಪಾಸ್‌ವರ್ಡ್ ಮೂಲಕ ಒಳ ಹೊಕ್ಕರೆ ಸಾಕು. ಕಂಪ್ಯೂಟರಿನಿಂದಲೇ ಫೇಸ್‌ಬುಕ್ ಮಾತುಕತೆ ಮುಂದುವರಿಸಬಹುದು.
ಇವನ್ನೂ ನೋಡಿ
Nokia C30 Review: ಭರ್ಜರಿ ಬ್ಯಾಟರಿ, ದೊಡ್ಡ ಗಾತ್ರದ ಬಜೆಟ್ ಸ್ಮಾರ್ಟ್ ಫೋನ್
Nokia C30 - ನೋಕಿಯಾ ಸಿ30 ದೊಡ್ಡ ಗಾತ್ರ, ಹೆಚ್ಚು ತೂಕದ, ಭರ್ಜರಿ ಬ್ಯಾಟರಿಯುಳ್ಳ, ಉತ್ತಮ ಕ್ಯಾಮೆರಾ ಇರುವ, ತರಗತಿ ಅಥವಾ ಮೀಟಿಂಗ್ಗೆ ಅನುಕೂಲಕರವಾದ ದೊಡ್ಡ ಸ್ಕ್ರೀನ್ ಇರುವ ಫೋನ್ ಇದು.



