
ಇದುವರೆಗೆ ಕೇವಲ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುತ್ತಿದ್ದ ಮೈಕ್ರೋಸಾಫ್ಟ್ ಕಂಪನಿಯ ಆಫೀಸ್ 365 (ಎಕ್ಸೆಲ್, ವರ್ಡ್, ಪವರ್ ಪಾಯಿಂಟ್, ಒನ್‌ಡ್ರೈವ್ ಮುಂತಾದವುಗಳ ಸಮೂಹ) ತಂತ್ರಾಂಶವನ್ನು ಇದೀಗ ಇತರ ದೇಶಗಳಿಗೂ ವಿಸ್ತರಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತವೂ ಇದೆ. ನಿರ್ದಿಷ್ಟ ಶಾಲೆಯು ತನ್ನದೇ ಆದ ಇಮೇಲ್ ವಿಳಾಸದ ಡೊಮೇನ್ ಹೊಂದಿರಬೇಕಾಗುತ್ತದೆ. ಮತ್ತು ಶಾಲೆಯಿಂದ ವಿದ್ಯಾರ್ಥಿಗಳಿಗೆ ಒದಗಿಸಲಾಗುವ ಇಮೇಲ್ ಐಡಿಯ ಮೂಲಕ http://bit.ly/Student365 ಎಂಬಲ್ಲಿ ಲಾಗಿನ್ ಆಗಿ ಉಚಿತವಾಗಿ ಪಡೆಯಬಹುದು. ಮಾರುಕಟ್ಟೆಯಲ್ಲಿ ಇದರ ಬೆಲೆ ಐದಾರು ಸಾವಿರ ರೂ. ಇರುತ್ತದೆ. ಈ ಉಚಿತ ಪ್ಯಾಕೇಜಿನಲ್ಲಿ ಆಫೀಸ್ ಆನ್‌ಲೈನ್ ಮಾತ್ರವಲ್ಲದೆ, 1ಟಿಬಿಯಷ್ಟು ಒನ್‌ಡ್ರೈವ್ ಆನ್‌ಲೈನ್ ಸ್ಟೋರೇಜ್ ಕೂಡ ಉಚಿತವಾಗಿ ದೊರೆಯುತ್ತದೆ.
Like this:
Like Loading...
Related