ನಿಮ್ಮ ಆಂಡ್ರಾಯ್ಡ್ ಫೋನ್ ಎಲ್ಲಿಟ್ಟಿರಿ ಅಂತ ಮರೆತು ಹೋಯಿತೇ? ಎಷ್ಟು ಹುಡುಕಿದರೂ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಕಂಪ್ಯೂಟರ್ ಆನ್ ಮಾಡಿ, ಇಂಟರ್ನೆಟ್ ಸಂಪರ್ಕಿಸಿ, ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಹುಡುಕಿ! ಹೌದು, ಗೂಗಲ್ ಸರ್ಚ್ ಎಂಜಿನ್‌ನಲ್ಲಿ Find My Phone ಅಂತ ಬರೆದು ಎಂಟರ್ ಕೊಡಿ. ಲಾಗ್ ಇನ್ ಆಗಲು ಹೇಳುತ್ತದೆ. ಕಣ್ಣಿನಿಂದ ಮರೆಯಾದ ಆಂಡ್ರಾಯ್ಡ್ ಫೋನ್ ಜತೆಗೆ ಮೇಳೈಸಿದ ಇಮೇಲ್ ಮೂಲಕ ಲಾಗಿನ್ ಆಗಿ, ಬಲ ಮೇಲ್ಭಾಗದಲ್ಲಿ ಯಾವ ಫೋನ್ ಎಂಬುದನ್ನು (ಹಲವು ಆಂಡ್ರಾಯ್ಡ್ ಫೋನ್‌ಗಳು ಒಂದೇ ಇಮೇಲ್ ಐಡಿಗೆ ಸಂಪರ್ಕಗೊಂಡಿದ್ದರೆ) ಆಯ್ಕೆ ಮಾಡಿ, Ring ಎಂಬ ಬಟನ್ ಒತ್ತಿ. ಎಲ್ಲೇ ಇದ್ದರೂ ಕಿರುಚಿಕೊಳ್ಳುತ್ತದೆ.
ಇವನ್ನೂ ನೋಡಿ
ಶಿಕ್ಷಣವೀಗ ಜನ್ಮಸಿದ್ಧ ಹಕ್ಕು; ಶುಲ್ಕಕ್ಕೆ ಕಡಿವಾಣ ಬಿದ್ದೀತೇ?
ಸ್ವಾತಂತ್ರ್ಯ ದೊರೆತ ಆರು ದಶಕಗಳ ಬಳಿಕ ಇಂಥದ್ದೊಂದು ಐತಿಹಾಸಿಕ ಹೆಜ್ಜೆ ಇಡಲು ಮನಸ್ಸು ಮಾಡಿದ ಕೇಂದ್ರ ಸರಕಾರಕ್ಕೆ ಸಲಾಂ. ಇನ್ನೀಗ ಶಿಕ್ಷಣ ಎಂಬುದು ಪ್ರತೀ ಮಗುವಿನ ಮೂಲಭೂತ ಹಕ್ಕು. ಅಂದರೆ, 6ರಿಂದ 14...