ಯಾವುದಾದರೂ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುತ್ತಿವೆಯೇ? ಅಂತಹಾ ಜಾಹೀರಾತುಗಳನ್ನು ನಂಬಿ ಕೈಸುಟ್ಟುಕೊಂಡಿದ್ದೀರೇ? ಎಲ್ಲ ದಾಖಲೆಗಳೊಂದಿಗೆ ನೀವು ನೇರವಾಗಿ ಸರಕಾರಕ್ಕೆ ದೂರು ಸಲ್ಲಿಸಬಹುದು. ಇದಕ್ಕಾಗಿಯೇ ಭಾರತ ಸರಕಾರವು http://www.gama.gov.in/ ಎಂಬ ವೆಬ್ ತಾಣವನ್ನು ಆರಂಭಿಸಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯವು ಇದನ್ನು ನೋಡಿಕೊಳ್ಳುತ್ತಿದೆ. ಇಲ್ಲಿ ನಿಮ್ಮ ದೂರನ್ನು ದಾಖಲೆ ಸಮೇತ ಸಲ್ಲಿಸಿದರೆ, ಸರಕಾರ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತದೆ. ಈ ಪೋರ್ಟಲ್ ಹೆಸರು GAMA ಅಂತ. ಅಂದರೆ ಗ್ರೀವೆನ್ಸಸ್ ಅಗೇನ್‌ಸ್ಟ್ ಮಿಸ್‌ಲೀಡಿಂಗ್ ಅಡ್ವರ್ಟೈಸ್‌ಮೆಂಟ್ಸ್ (ದಾರಿ ತಪ್ಪಿಸುವ ಜಾಹೀರಾತುಗಳ ಕುಂದುಕೊರತೆ ನಿವಾರಣೆ) ಎಂದರ್ಥ.
ಇವನ್ನೂ ನೋಡಿ
ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?
ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ,
ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ?
ಉದಾಹರಣೆಗೆ, ಇಂಗ್ಲಿಷ್ ವರ್ಣಮಾಲೆಯ ಎಲ್ಲ ಅಕ್ಷರಗಳಿರುವ (A to Z),...