ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲ ತಾಣವನ್ನು ಬಳಸುತ್ತಿರುವವರಿಗೆ, ನಿರ್ದಿಷ್ಟ ವಿಷಯವೊಂದರ ಬಗ್ಗೆ ಮೊದಲು ಟ್ವೀಟ್ ಮಾಡಿದ್ದು ಯಾರು ಅಂತ ತಿಳಿದುಕೊಳ್ಳುವ ಕುತೂಹಲವಿರಬಹುದು. ಉದಾಹರಣೆಗೆ, ಮೊನ್ನೆ ನಟ ಸಲ್ಮಾನ್ ಖಾನ್‌ಗೆ ಶಿಕ್ಷೆ ಪ್ರಕಟವಾದ ದಿನ #SalmanVerdict ಎಂಬ ಹ್ಯಾಶ್‌ಟ್ಯಾಗ್‌ನಲ್ಲಿ ಲಕ್ಷಾಂತರ ಟ್ವೀಟ್‌ಗಳು ಹರಿದಾಡಿದವು. ಆದರೆ ಅದನ್ನು ಮೊದಲು ಪ್ರಾರಂಭಿಸಿದ್ದು ಯಾರು ಅಂತ ತಿಳಿದುಕೊಳ್ಳುವುದು ಹೇಗೆ? ಅದಕ್ಕಾಗಿಯೇ ಒಂದು ಜಾಲ ತಾಣವಿದೆ. http://ctrlq.org/first/ ಎಂಬಲ್ಲಿಗೆ ಹೋಗಿ, ಯಾವ ವಿಷಯದ ಟ್ವೀಟ್ ಬೇಕೋ ಅದನ್ನು ಟೈಪ್ ಮಾಡಿ. ಕೆಲವೇ ಕ್ಷಣಗಳಲ್ಲಿ ಅದು ಟ್ವಿಟರ್ ಡೇಟಾಬೇಸ್ ಅನ್ನು ಪರೀಕ್ಷಿಸಿ, ಫಲಿತಾಂಶವನ್ನು ನಿಮ್ಮ ಮುಂದಿಡುತ್ತದೆ.
ಇವನ್ನೂ ನೋಡಿ
ವಿಂಡೋಸ್ 10 ಉಚಿತವಾಗಿ ಅಪ್ಗ್ರೇಡ್ ಮಾಡಿಕೊಳ್ಳಲು ಸಿದ್ಧರಾಗಿ
ಜನಪ್ರಿಯ ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ವಿಂಡೋಸ್ನ 10ನೇ ಆವೃತ್ತಿಯ ಬಿಡುಗಡೆಯನ್ನು ಈಗಾಗಲೇ ಮೈಕ್ರೋಸಾಫ್ಟ್ ಜು.29ಕ್ಕೆ ನಿಗದಿಪಡಿಸಿದೆ. ಇದು ಮೈಕ್ರೋಸಾಫ್ಟ್ನ ಕೊನೆಯ ಕಾರ್ಯಾಚರಣಾ ವ್ಯವಸ್ಥೆ ಅಂತ ಹೇಳಲಾಗುತ್ತಿದೆ ಮತ್ತು ಅದ್ಭುತವಾದ ವೈಶಿಷ್ಟ್ಯಗಳೂ ಇದರಲ್ಲಿರುತ್ತವೆ. ಈಗಾಗಲೇ...



