ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್ ಇಂಟರ್ನೆಟ್‌ನಲ್ಲಿ ಹರಿಯಬಿಟ್ಟಿತ್ತು. ಇದೇ ಮಾದರಿಯಲ್ಲಿ ಮತ್ತೊಂದು ಮನರಂಜನೆ. ಗೂಗಲ್ ಸರ್ಚ್ ಎಂಜಿನ್ ತೆರೆಯಿರಿ. tilt ಅಂತ ಬರೆದು ಸರ್ಚ್ ಮಾಡಿ. ನಿಮ್ಮ ಸ್ಕ್ರೀನ್ ಟಿಲ್ಟ್ ಆದಂತೆ (ಓರೆಯಾಗಿ ವಾಲಿದಂತೆ) ಕಾಣಿಸುತ್ತದೆ. ಇದು ಗೂಗಲ್ ಎಂಜಿನಿಯರ್‌ಗಳು ಮನರಂಜನೆಗಾಗಿಯೇ ಮಾಡಿದ ಕೆಲಸ. ಇನ್ನು ಮೊದಲ ಲಿಂಕ್ ಕಾಣಸಿಗುತ್ತದೆಯಲ್ಲ, ಅದನ್ನು http://elgoog.im/tilt/ ಕ್ಲಿಕ್ ಮಾಡಿ. ಅದರಲ್ಲಿ ಯಾವುದೇ ಪದವನ್ನು ಟೈಪ್ ಮಾಡಿ ಹುಡುಕಿ. ಉಲ್ಟಾ ಸರ್ಚ್ ಮಾಡಿ ತೋರಿಸುತ್ತದೆ.
ಇವನ್ನೂ ನೋಡಿ
ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ ‘ವ್ಯರ್ಥ’?
ಆಂಡ್ರಾಯ್ಡ್ ಹೊಸ ಆವೃತ್ತಿ 'ಪಿ' ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್ಬುಕ್...