Categories: myworldOpinion

ಕನ್ನಡಾಂಬೆಯ ಸಿಂಗರಿಸುವ “ಸಿಂಗಾರಿ”

ಸಿಂಧೂರ
ಬೈತಲೆಬೊಟ್ಟು
ಬೆಂಡೋಲೆ
ಜಡೆಬಂಗಾರ
ಮೂಗುತಿ
ಮುತ್ತಿನ ಹಾರ
ತೋಳ್ವಂಕಿ
ಹೊಂಬಳೆ
ಒಡ್ಯಾಣ
ಕಾಲ್ಗೆಜ್ಜೆ….

ಏನಿದು ಅಂತ ಆಲೋಚನೆಯೇ? ಸ್ತ್ರೀಯರ ಮೈಯಾಭರಣಗಳು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾನು ಹೇಳಹೊರಟಿರುವುದು ಕನ್ನಡಾಂಬೆಯನ್ನು ಈ ಆಭರಣಗಳಿಂದ ಅಂತರಜಾಲದಲ್ಲಿ ಸಿಂಗರಿಸಲು ಹೊರಟಿರುವ ಸಿಂಗಾರಿ ಬಗ್ಗೆ.

ವಿಜ್ಞಾನಿಗಳು ತಮ್ಮ ಕ್ಷೇತ್ರದಲ್ಲಿ ಮಾತ್ರವೇ ಜ್ಞಾನಿಗಳು, ಉಳಿದ ವಿಷಯಗಳಲ್ಲಿ ಅಜ್ಞಾನಿಗಳು ಎಂಬ ಕೊಂಕು ಮಾತಿಗೆ ಅಪವಾದವಾಗಿ, ವಿಜ್ಞಾನಿಗಳು, ವಿಜ್ಞಾನ ಪದವೀಧರರು, ವಿಜ್ಞಾನ ವಿದ್ಯಾರ್ಥಿಗಳ ಸಹಯೋಗದಲ್ಲಿ ನಿರ್ಮಿಸಿರುವ ಅಂತರಜಾಲದಲ್ಲಿ ಮೂಡಿಬರುತ್ತಿರುವ ಕನ್ನಡ ಮಾಸಿಕದ ಹೆಸರು ಸಿಂಗಾರಿ.

ಹೀಗೆಯೇ ಅಂತರಜಾಲದಲ್ಲಿ ಅಡ್ಡಾಡುತ್ತಿದ್ದಾಗ ಕಾಲಿಗೆ ಎಡವಿದ ಕನ್ನಡ ರತ್ನವಿದು. ಪ್ರಬುದ್ಧ ಮತ್ತು ಸಹ್ಯ ಬರಹಗಳಿಂದ ಇದು ಇಷ್ಟವಾಗುತ್ತದೆ.

ಮೇಲೆ ಹೇಳಿದ ಆಭರಣಗಳೆಲ್ಲವೂ ಒಂದೊಂದು ಅಂಕಣಕ್ಕೆ ನೀಡಿದ ಹೆಸರುಗಳು. ಇದರ ‘ಸಿಂಧೂರ’ ಅಂಕಣದಲ್ಲಿ ಮಹಿಳಾ ಸಾಧಕಿಯರನ್ನು ಅಭಿನಂದಿಸುವ ಪ್ರಯತ್ನವಿದ್ದರೆ, ಬೈತಲೆಬೊಟ್ಟು ಎಂಬುದು ಸಂಪಾದಕೀಯ. ಅಂತೆಯೇ, ಮುತ್ತಿನ ಹಾರದಲ್ಲಿ 20ನೇ ಶತಮಾನದ ಲೇಖಕಿಯರ ಪರಿಚಯವನ್ನು ಪೋಣಿಸಲಾಗುತ್ತದೆ ಎಂದು ಸಂಪಾದಕೀಯ ವರ್ಗ ಹೇಳಿಕೊಂಡಿದೆ.

ಇದರ ಪ್ರಧಾನ ಸಂಪಾದಕಿ ನಿವೃತ್ತ ವಿಜ್ಞಾನಿ ಜಿ.ವಿ.ನಿರ್ಮಲ. ಉಪಸಂಪಾದಕಿಯರಾಗಿ ನಿವೃತ್ತ ಪ್ರಾಧ್ಯಾಪಕಿ ಗಾಯತ್ರಿ ಮೂರ್ತಿ, ಹಾಗೂ ಸಂಶೋಧನಾ ಸಹಾಯಕಿ ಎಸ್. ಕ್ಷಮಾ ಕಾರ್ಯ ನಿರ್ವಹಿಸುತ್ತಾ, ವೆಬ್‌ಸೈಟನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರೆ.

ವೆಬ್‌ಸೈಟ್ ನುಡಿ ಲಿಪಿಯಲ್ಲಿದೆ. ಆದರೆ ಈಗ ಯುನಿಕೋಡ್ ಎಲ್ಲೆಡೆ ಪ್ರಸ್ತುತವಾಗುತ್ತಿರುವುದರಿಂದ ಮತ್ತು ಅದನ್ನು ಭವಿಷ್ಯದ ಗಣಕ ಲಿಪಿ ಎಂದೇ ಪರಿಭಾವಿಸಲಾಗಿರುವುದರಿಂದ ಸೈಟಿನ “ಯುನಿಕೋಡೀಕರಣ” ಸೂಕ್ತವಾಗುತ್ತಿತ್ತು.

ಸುಂದರ ಮತ್ತು ಸರಳ ಸಿಂಗಾರಿಯ ಸಾಹಿತ್ಯ ಸೇವೆ ನಿರಂತರವಾಗಿರಲಿ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಕನ್ನಡ-ಕನ್ನಡಿಗ-ಕರ್ನಾಟಕಗಳ ಏಳಿಗೆಗೆ ಬದ್ಧವಾದ ಬನವಾಸಿ ಬಳಗದ ಹೊಸ ಬ್ಲಾಗಿಗೊಮ್ಮೆ ಭೇಟಿಕೊಡಿ. ವಿಳಾಸ:
    http://enguru.blogspot.com

  • ಧನ್ಯವಾದಗಳು. ನಮ್ಮ ಈ ಪ್ರಯತ್ನಕ್ಕೆ ನಿಮ್ಮಂತಹ ಕನ್ನಡಪ್ರಿಯರ ಉತ್ತೇಜನ ಸ್ವಾಗತ. 30ವರ್ಷ ಕಾಲ ವಿಜ್ಞಾನದ ಜಾಲದಲ್ಲಿದ್ದು, ಈಗ ತಂತ್ರಜ್ಞಾನ ಮತ್ತು ಸಾಹಿತ್ಯದ ಸುಳಿಯಲ್ಲಿ ಸಿಕ್ಕಿಬಿದ್ದಿದ್ದೇನೆ. ನಿಮ್ಮ ಜೀವನದ ಬಗ್ಗೆಯೂ ಓದಿದೆ. ಬದಲಾವಣೆ ಈ ಜೀವನ ಚಕ್ರದಲ್ಲಿ ಅಗತ್ಯವಲ್ಲವೆ? ನೀವು ತಿಳಿಸಿದ ಯೂನಿಕೋಡ್ ಬಳಕೆಗೆ ಪ್ರಯತ್ನ ಮಾಡುತ್ತಿದ್ದೇನೆ. ಮುಂದೆಯೂ ನಿಮ್ಮ ಸಲಹೆಗಳಿಗೆ, ಬರಹಗಳಿಗೆ ಸಿಂಗಾರಿ ಸಿದ್ಧವಾಗಿರುತ್ತದೆ.
    ನಮಸ್ಕಾರ
    ನಿರ್ಮಲ

  • ನಿರ್ಮಲಾ ಅವರಿಗೆ ಸ್ವಾಗತ...

    ಇಂದಿನ ಕಾಲದಲ್ಲಿ ವಿಜ್ಞಾನಕ್ಕೂ ಸಾಹಿತ್ಯಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಹಾಗಾಗಿ ನಿಮ್ಮ ದಾರಿ ಕೂಡ ಅದ್ಭುತ ಭವಿಷ್ಯದತ್ತ ನಿಮ್ಮನ್ನು ಒಯ್ಯುತ್ತದೆ ಎಂದು ಭಾವಿಸುವೆ.
    ನಮಸ್ಕಾರ
    -ಅವಿನಾಶ್

  • geLeyare,
    ide tara, kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

    http://enguru.blogspot.com

    - KattEvu kannaDada naaDa, kai joDisu baara !
    Banavasi Balaga

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

11 months ago