realme GT 7 Pro
ಬೆಂಗಳೂರು: ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ ರಿಯಲ್‌ಮಿ ಜಿಟಿ 7 ಪ್ರೊ ಸ್ಮಾರ್ಟ್ ಫೋನನ್ನು ಅನಾವರಣಗೊಳಿಸಿದೆ.
ರಿಯಲ್‌ಮಿ ಜಿಟಿ 7 ಪ್ರೊ ಅದ್ಭುತ ಸಾಧನವಾಗಿದ್ದು, ಭಾರತದಲ್ಲಿ ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಮೊದಲ ಫೋನ್ ಇದಾಗಿದೆ. ಛಾಯಾಗ್ರಹಣ ಉತ್ಸಾಹಿಗಳಿಗಾಗಿ, ರಿಯಲ್‌ಮಿ ಜಿಟಿ 7 ಪ್ರೊ ಸೋನಿ IMX882 ಪೆರಿಸ್ಕೋಪ್ ಕ್ಯಾಮೆರಾ ಹೊಂದಿದ್ದು, ಇದೇ ಮೊದಲ ಬಾರಿಗೆ ಎಐ ಅಂಡರ್ ವಾಟರ್ ಫೋಟೋಗ್ರಫಿ ಮೋಡ್ ಅಳವಡಿಸಲಾಗಿದೆ.
ಇದೇ ಮೊದಲ ಬಾರಿಗೆ ರಿಯಲ್ ವರ್ಲ್ಡ್ ಇಕೋ ಡಿಸ್‌ಪ್ಲೇಯನ್ನು ಸ್ಯಾಮ್ಸಂಗ್ ನೆರವಿನಿಂದ ಅಭಿವೃದ್ಧಿಪಡಿಸಲಾಗಿದೆ.
ಕ್ವಾಲ್ಕಾಮ್ ಇಂಡಿಯಾದ ಮೊಬೈಲ್, ಕಂಪ್ಯೂಟ್ ಮತ್ತು ಎಕ್ಸ್ಆರ್ ಬಿಸಿನೆಸ್ ಹೆಡ್ ಸೌರಭ್ ಅರೋರಾ ಮಾತನಾಡಿ, ಸ್ನ್ಯಾಪ್ ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್‌ಫಾರ್ಮ್ ಚಾಲಿತ ಸ್ಮಾರ್ಟ್‌ಫೋನ್ ಬಿಡುಗಡೆಯಲ್ಲಿ ರಿಯಲ್‌ಮಿ ಜೊತೆ ಸಹಯೋಗ ನೀಡಲು ಖುಷಿಯಾಗುತ್ತಿದೆ. ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಮೊಬೈಲ್ ಪ್ಲಾಟ್‌ಫಾರ್ಮ್ ಅನ್ನು ವೇಗ, ದಕ್ಷತೆ ಮತ್ತು ಸಂಪರ್ಕದಲ್ಲಿ ಹೊಸ ಮಾನದಂಡಗಳಿಗಾಗಿ ರೂಪಿಸಲಾಗಿದೆ ಎಂದಿದ್ದಾರೆ.
ಜಿಟಿ 7 ಪ್ರೊ ನೆಕ್ಸ್ಟ್ ಎಐ ಎಂಬ ಸುಧಾರಿತ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ವ್ಯವಸ್ಥೆ ಇದರಲ್ಲಿದೆ. ಹೊಸದಾದ “ಎಐ ಸ್ಕೆಚ್ ಟು ಇಮೇಜ್” ವೈಶಿಷ್ಟ್ಯವನ್ನು ಬಳಸಿಕೊಂಡು ಸರಳ ರೇಖಾಚಿತ್ರಗಳನ್ನು ಚಿತ್ರ ರೂಪಕ್ಕೆ ಪರಿವರ್ತಿಸಬಹುದು. ಇದಲ್ಲದೆ, ರಿಯಲ್‌ಮಿ ಜಿಟಿ 7 ಪ್ರೊ ತನ್ನ ಎಐ ಮೋಷನ್ ಡಿ-ಬ್ಲರ್ ತಂತ್ರಜ್ಞಾನದೊಂದಿಗೆ, ಚಿತ್ರದಲ್ಲಿರುವ ಮಸುಕಾದ ಭಾಗವನ್ನು ಎಐ ಮೂಲಕ ಸರಿಪಡಿಸಬಲ್ಲದು. ಫ್ಲ್ಯಾಶ್ ಸ್ನ್ಯಾಪ್ ಮೋಡ್ ಮತ್ತು ಎಐ ಜೂಮ್ ಅಲ್ಟ್ರಾ ಮೋಡ್ ಇದ್ದು, ಎಐ ಅಲ್ಟ್ರಾ-ಕ್ಲಿಯರ್ ಸ್ನ್ಯಾಪ್ ಕ್ಯಾಮೆರಾ ಹೊಂದಿದೆ. ನೀರಿನೊಳಗೆ ಕೂಡ ಚಿತ್ರ, ವಿಡಿಯೊ ಸೆರೆಹಿಡಿಯಬಲ್ಲ ವ್ಯವಸ್ಥೆ ಇದರಲ್ಲಿದೆ. ಅತ್ಯುತ್ತಮ 5800mAh ಬ್ಯಾಟರಿ ಮತ್ತು 120W ಸೂಪರ್ ವೂಕ್ ಚಾರ್ಜರ್ ನೀಡಲಾಗುತ್ತದೆ. ರಿಯಲ್‌ಮಿ ಯುಐ 6.0 ಫ್ಲೂಯಿಡ್ ಡಿಸೈನ್ ಇದ್ದು, ಆಂಡ್ರಾಯ್ಡ್ 15ರ ಆಧಾರದಲ್ಲಿದೆ.
ರಿಯಲ್‌ಮಿ ಜಿಟಿ 7 ಪ್ರೊ ಎರಡು ಅದ್ಭುತ ಬಣ್ಣಗಳಲ್ಲಿ ಲಭ್ಯವಿದೆ: ಮಾರ್ಸ್ ಆರೆಂಜ್ ಮತ್ತು ಗ್ಯಾಲಕ್ಸಿ ಗ್ರೇ. ಎರಡು ಸ್ಟೋರೇಜ್ ರೂಪಾಂತರಗಳು: 12GB+256GB ಬೆಲೆ 56,999 ರೂ ಮತ್ತು 16GB+512GB ಬೆಲೆ 62,999 ರೂ.
realme.com ಮತ್ತು Amazon.in ತಾಣಗಳಲ್ಲಿ, ವಿವಿಧ ಕೊಡುಗೆಗಳೊಂದಿಗೆ ಲಭ್ಯ ಇದೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.