ಬೆಂಗಳೂರು: ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ರಿಯಲ್‌ಮಿ 14 ಪ್ರೊ, ಸೀರಿಸ್ 5 ಜಿ ಮತ್ತು ರಿಯಲ್‌ಮಿ ಬಡ್ಸ್ ವೈರ್ ಲೆಸ್ 5 ಬಿಡುಗಡೆಗೊಳಿಸಿದೆ. ರಿಯಲ್‌ಮಿ 14 ಪ್ರೊ ಸರಣಿಯ ರಿಯಲ್‌ಮಿ 14 ಪ್ರೊ 5 ಜಿ ಮತ್ತು ರಿಯಲ್‌ಮಿ 14 ಪ್ರೊ + 5 ಜಿ ಫೋನ್‌ಗಳು ಬಿಡುಡೆಯಾಗಿದ್ದು, ಎರಡೂ ಫೋನ್‌ಗಳನ್ನು ಪ್ರಸಿದ್ಧ ಡ್ಯಾನಿಶ್ ಡಿಸೈನ್ ಸ್ಟುಡಿಯೋ, ವ್ಯಾಲರ್ ಡಿಸೈನರ್ಸ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು, ತಂಪಾದಾಗ (ಕೋಲ್ಡ್-ಸೆನ್ಸಿಟಿವ್) ಬಣ್ಣ ಬದಲಾಯಿಸುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಎಂದು ಗುರುತಿಸಲ್ಪಟ್ಟಿದೆ.
ರಿಯಲ್‌ಮಿ 14 ಪ್ರೊ 5ಜಿ ಸರಣಿಯ ಫೋನ್‌ಗಳು 16°C ಗಿಂತ ಕಡಿಮೆ ತಾಪಮಾನಕ್ಕೆ ಒಡ್ಡಿಕೊಂಡಾಗ ಬಣ್ಣವನ್ನು (ಬಿಳಿಯ ಕವಚವು ನೀಲಿ ಬಣ್ಣಕ್ಕೆ) ಬದಲಾಯಿಸುತ್ತವೆ. ಪರಿಸರದ ತಾಪಮಾನವು ಮತ್ತೆ ಹೆಚ್ಚಾದಂತೆ ಬಣ್ಣವು ಮರಳುತ್ತದೆ. ಸ್ಮಾರ್ಟ್ ಫೋನ್‌ಗಳ ಜೊತೆಗೆ, ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ಕೂಡ ಬಿಡುಗಡೆಯಾಗಿದೆ.
ಬಿಡುಗಡೆಯ ಬಗ್ಗೆ ಮಾತನಾಡಿದ ರಿಯಲ್‌ಮಿ ವಕ್ತಾರರು, “3ನೇ ಪೀಳಿಗೆಯ ಸ್ನ್ಯಾಪ್‌ಡ್ರ್ಯಾಗನ್ 7Sನಿಂದ ಚಾಲಿತವಾದ ಮತ್ತು ಕೋಲ್ಡ್-ಸೆನ್ಸಿಟಿವ್ ತಂತ್ರಜ್ಞಾನವನ್ನು ಹೊಂದಿರುವ ಮೊದಲ ಸ್ಮಾರ್ಟ್ ಫೋನ್‌ಗಳಿವು” ಎಂದಿದ್ದಾರೆ.
ರಿಯಲ್‌ಮಿ 14 ಪ್ರೊ ಪ್ಲಸ್ ಫೋನ್‌ಗಳು ಸೋನಿ IMX 882 ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್, DSLR ಮಟ್ಟದ ಸೋನಿ IMX 896 OIS ಕ್ಯಾಮೆರಾ ಮತ್ತು ಸುಧಾರಿತ ಎಐ ಅಲ್ಟ್ರಾ ಕ್ಲಾರಿಟಿ 2.0 ತಂತ್ರಜ್ಞಾನ ಇದರಲ್ಲಿದ್ದು, ಸ್ಪಷ್ಟ ಫೋಟೊಗಳಿಗೆ ಮತ್ತು ರಾತ್ರಿ ಛಾಯಾಗ್ರಹಣಕ್ಕೂ ಅನುಕೂಲವಾಗಿದೆ. ಮ್ಯಾಜಿಕ್ ಗ್ಲೋ ಟ್ರಿಪಲ್ ಫ್ಲ್ಯಾಶ್ ಇದರಲ್ಲಿದೆ. ಬೆಜೆಲ್-ರಹಿತ ಮತ್ತು ಕ್ವಾಡ್-ಕರ್ವ್ಡ್ ಡಿಸ್ಪ್ಲೇ ಇದರಲ್ಲಿದ್ದು, ಹೆಚ್ಚುಕಾಲ ಬಾಳಿಕೆ ಬರುವ 6000 mAh ಟೈಟಾನ್ ಬ್ಯಾಟರಿ ಇದೆ. ರಿಯಲ್‌ಮಿ 14 ಪ್ರೊ + 5 ಜಿ ಮೂರು ವಿಶಿಷ್ಟ ಬಣ್ಣಗಳಲ್ಲಿ ಬರುತ್ತದೆ – ಪರ್ಲ್ ವೈಟ್ ಮತ್ತು ಸ್ಯೂಡ್ ಗ್ರೇ, ಮತ್ತು ಬಿಕಾನೇರ್ ಪರ್ಪಲ್ ಎಂಬ ಭಾರತದ ವಿಶೇಷ ಬಣ್ಣ ರೂಪಾಂತರವನ್ನು ಸಹ ಪರಿಚಯಿಸುತ್ತದೆ ಮತ್ತು ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯವಿದೆ: 8GB+128GB ಬೆಲೆ ರೂ.27,999. 8GB+256GB ಬೆಲೆ ರೂ. 29,999, ಮತ್ತು 12GB+256GB ಬೆಲೆ 30,999 ರೂ., ಇದು ವ್ಯಾಪಕ ಶ್ರೇಣಿಯ ಬಳಕೆದಾರರ ಆದ್ಯತೆಗಳು ಮತ್ತು ಅಗತ್ಯಗಳನ್ನು ಪೂರೈಸುತ್ತದೆ.
ರಿಯಲ್‌ಮಿ 14 ಪ್ರೊ + 5 ಜಿ ಮೂರು ಸ್ಟೋರೇಜ್ ರೂಪಾಂತರಗಳಲ್ಲಿ ಲಭ್ಯ. 8 GB + 128 GB ಬೆಲೆ ₹27,999, 8 GB + 256 GB ಬೆಲೆ ₹29,999 ಮತ್ತು 12 GB + 256 GB ಬೆಲೆ ₹30,999.
ರಿಯಲ್‌ಮಿ 14 ಪ್ರೊ 5 ಜಿ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯ. ಪರ್ಲ್ ವೈಟ್, ಸ್ಯೂಡ್ ಗ್ರೇ, ಮತ್ತು ಭಾರತದ ವಿಶೇಷ ಜೈಪುರ್ ಪಿಂಕ್ ಬಣ್ಣ. ಇದರ ಬೆಲೆ 8GB+128GB ₹22,999 ಮತ್ತು 8GB+256GB ₹24,999.
ರಿಯಲ್‌ಮಿ ಬಡ್ಸ್ ವೈರ್‌ಲೆಸ್ 5 ANC ಮೂರು ಸ್ಟೈಲಿಶ್ ಬಣ್ಣಗಳಲ್ಲಿ ಲಭ್ಯ: ಮಿಡ್ ನೈಟ್ ಬ್ಲ್ಯಾಕ್, ಟ್ವಿಲೈಟ್ ಪರ್ಪಲ್ ಮತ್ತು ಡಾನ್ ಸಿಲ್ವರ್; ಬೆಲೆ ₹1,799 ಮತ್ತು ಈಗಿನ ರಿಯಾಯಿತಿಯಲ್ಲಿ ₹1,599ಗೆ ಲಭ್ಯ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು