ವಿಶ್ವಾಸಾರ್ಹ ನೋಕಿಯಾ ಬ್ರ್ಯಾಂಡ್‌ನ ಪೂರ್ಣ ಸದುಪಯೋಗಪಡಿಸಿಕೊಳ್ಳಲು ಯತ್ನಿಸುತ್ತಿರುವ ಹೆಚ್ಎಂಡಿ ಗ್ಲೋಬಲ್, ಇದೀಗ ಬಜೆಟ್ ಶ್ರೇಣಿಯಲ್ಲಿ, ಮೊದಲ ಸ್ಮಾರ್ಟ್ ಫೋನ್ ಕೊಳ್ಳುವವರನ್ನೇ ಗುರಿಯಾಗಿರಿಸಿ ಸಿ01 ಪ್ಲಸ್ ಸ್ಮಾರ್ಟ್ ಫೋನನ್ನು ಬಿಡುಗಡೆ ಮಾಡಿದೆ. ಅದು ಹೇಗಿದೆ, ಅದರ ಕಾರ್ಯನಿರ್ವಹಣೆ ಹೇಗಿದೆ? ಇಲ್ಲಿದೆ ಮಾಹಿತಿ.
ನೋಕಿಯಾ ಬ್ರ್ಯಾಂಡ್‌ನ ಪರವಾನಗಿ ಹೊಂದಿರುವ ಹೆಚ್ಎಂಡಿ ಗ್ಲೋಬಲ್ ಸಂಸ್ಥೆಯು, ನೋಕಿಯಾ ಸಿ-ಸರಣಿಯಲ್ಲಿ ಆಂಡ್ರಾಯ್ಡ್ 11ರ ಮೂಲ ರೂಪವಾಗಿರುವ ‘ಗೋ’ ಆವೃತ್ತಿಯೊಂದಿಗೆ ಈ ಬಜೆಟ್ ಫೋನನ್ನು ಭಾರತೀಯ ಮಾರುಕಟ್ಟೆಗೆ ಇಳಿಸಿದೆ. 5.45 ಇಂಚಿನ ಹೆಚ್‌ಡಿ ಪ್ಲಸ್ ಸ್ಕ್ರೀನ್ ಇದ್ದು, 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಪ್ರಧಾನ ಕ್ಯಾಮೆರಾ (ಒಂದೇ ಲೆನ್ಸ್) ಮತ್ತು 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಹೊಂದಿದೆ. ಇದರ ಬ್ಯಾಟರಿ (3000mAh ಸಾಮರ್ಥ್ಯ) ತೆಗೆಯಬಹುದಾಗಿರುವುದು ವಿಶೇಷ. ಎಂದರೆ, ಹಳೆಯ ಕಾಲದ ಫೋನ್‌ಗಳ ಯುಗವನ್ನು ನೋಕಿಯಾ ಮತ್ತೆ ನೆನಪಿಸಿದೆ.
ಹಗುರವಾಗಿದ್ದು, ಹಿಂಭಾಗದ ವಿನ್ಯಾಸವು ಮ್ಯಾಟ್ ಫಿನಿಶಿಂಗ್ ಹೊಂದಿದೆ. ಹಿಂಭಾಗದಲ್ಲಿ ಸ್ಪೀಕರ್ ಹಾಗೂ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಒಂದು ಕ್ಯಾಮೆರಾ ಇದೆ. ಹಾರ್ಡ್‌ವೇರ್ ಗಮನಿಸಿದರೆ, 1.6GHz ಒಕ್ಟಾ ಕೋರ್ ಪ್ರೊಸೆಸರ್ ಇದ್ದು, 2ಜಿಬಿ RAM ಮತ್ತು 16GB ಸ್ಟೋರೇಜ್ ಮಾದರಿಯನ್ನು ನೀಲ ಮತ್ತು ನೆರಳೆ – ಹೀಗೆ ಎರಡು ಬಣ್ಣಗಳಲ್ಲಿ ಮಾರುಕಟ್ಟೆಗಿಳಿಸಿದೆ. ಎರಡು ಸಿಮ್ ಅಳವಡಿಸಲು, ಮೆಮೊರಿ ಕಾರ್ಡ್ ಅಳವಡಿಸಲು ಅವಕಾಶವಿದೆ. ಇದರ ಬೆಲೆ ₹5999.
ನೋಡಲು ಸಾಮಾನ್ಯ ಫೋನ್‌ಗಳಂತೆಯೇ ಇದ್ದು, ಸ್ಕ್ರೀನ್ ದೊಡ್ಡದಾಗಿರುವುದರಿಂದ ವಿಡಿಯೊ, ಫೋಟೋ ವೀಕ್ಷಣೆಗೆ ಅನುಕೂಲವಾಗಿದೆ. ಸ್ಕ್ರೀನ್ ಮೇಲೆ ಹಾಗೂ ಕೆಳಗೆ ಬೆಝೆಲ್ ದಪ್ಪವಾಗಿದ್ದು, ಕೆಳಭಾಗದಲ್ಲಿ ಎಂದಿನಂತೆ ನೋಕಿಯಾ ಲಾಂಛನ ಇದೆ.
ಆದರೆ, ಹೆಚ್ಚು ಗಮನ ಸೆಳೆದಿದ್ದು, ಇದರಲ್ಲಿರುವ ಮುಖ ಗುರುತಿಸುವ (ಫೇಸ್ ಅನ್‌ಲಾಕ್) ತಂತ್ರಜ್ಞಾನ. ತುಂಬ ವೇಗವಾಗಿ ಇದು ಕೆಲಸ ಮಾಡುತ್ತಿದೆ. ಬೇಸಿಕ್ ಸ್ಮಾರ್ಟ್ ಫೋನ್‌ಗಳಲ್ಲಿ ಈ ಆಧುನಿಕ ತಂತ್ರಜ್ಞಾನವೂ ಸೇರಿಸಿರುವುದು ನೋಕಿಯಾದ ಪ್ಲಸ್ ಪಾಯಿಂಟ್.
ಆಂಡ್ರಾಯ್ಡ್‌ನ ಮೂಲ ಆವೃತ್ತಿ ಆಂಡ್ರಾಯ್ಡ್ -ಗೋ ಬಳಸಲಾಗಿದ್ದು, ಕಾರ್ಯಾಚರಣೆ ಸುಲಲಿತವಾಗಿದೆ. ಗೋ ಆವೃತ್ತಿಗೇ ರೂಪಿಸಲಾಗಿರುವ ಆ್ಯಪ್‌ಗಳು ಕೂಡ ಬೇಗನೇ ಲೋಡ್ ಆಗುತ್ತವೆ. ಜೊತೆಗೆ, ಕಂಪನಿಯು ಹೇಳುವಂತೆ ಆಂಡ್ರಾಯ್ಡ್ ಗೋ ಆವೃತ್ತಿ ಬಳಸುತ್ತಿರುವ ಫೋನ್‌ಗಳಲ್ಲಿ ಡೇಟಾ ಬಳಕೆ ಕಡಿಮೆ, ಉಳಿತಾಯ ಜಾಸ್ತಿ.
ಪ್ರಧಾನ ಕ್ಯಾಮೆರಾ ಲೆನ್ಸ್ (5 ಮೆಗಾಪಿಕ್ಸೆಲ್) ಒಂದೇ ಇದೆಯಾದರೂ, ಹೊರಾಂಗಣದ ಚಿತ್ರಗಳು, ಫೋನ್ ಬೆಲೆಯನ್ನು ಗಮನಿಸಿ ಹೇಳುವುದಾದರೆ, ಉತ್ತಮವಾಗಿಯೇ ಮೂಡಿಬಂದಿವೆ. ಅನತಿ ದೂರದ ಚಿತ್ರಗಳಲ್ಲಿಯೂ ಗಮನಾರ್ಹವೆನಿಸುವ ಸ್ಪಷ್ಟತೆಯಿದೆ. 2 ಮೆಗಾಪಿಕ್ಸೆಲ್ ಸೆಲ್ಫೀ ಕೂಡ ಸಾಮಾನ್ಯವಾಗಿದೆ.
ಇದು ಎಂಟ್ರಿ ಲೆವೆಲ್, ಎಂದರೆ ಹೊಸದಾಗಿ ಸ್ಮಾರ್ಟ್ ಫೋನ್ ಕೊಳ್ಳುವವರಿಗಾಗಿ ಮತ್ತು ಅಗ್ಗದ ದರದಲ್ಲಿ ಸ್ಮಾರ್ಟ್ ಫೋನ್ ಹುಡುಕುತ್ತಿರುವವರಿಗಾಗಿ ರೂಪಿಸಿರುವ ಫೋನ್. ಈ ಬೆಲೆಯಲ್ಲಿ ಫೇಸ್ ಅನ್‌ಲಾಕ್ ತಂತ್ರಜ್ಞಾನ ಇರುವುದು ವಿಶೇಷ. ಆಂಡ್ರಾಯ್ಡ್ ಗೋ ಎಡಿಶನ್ ಇರುವ ಮತ್ತು ಸಾಮಾನ್ಯ ಕಾರ್ಯಾಚರಣೆಯಲ್ಲಿ 2 ದಿನ ಬ್ಯಾಟರಿ ಬಾಳಿಕೆ ಬರುತ್ತದೆ. ಕೈಗೂ, ಜೇಬಿಗೂ ಅನುಕೂಲಕರ ಫೋನ್ ಇದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…