[ಜೂ.27- ಹೆಲನ್ ಕೆಲ್ಲರ್ ಜನ್ಮದಿನ. ಈ ಪ್ರಯುಕ್ತ ಚೆನ್ನೈ ಆಕಾಶವಾಣಿಯಲ್ಲಿ ಜೂ.24, ಭಾನುವಾರ ಪ್ರಸಾರವಾದ ಸ್ವರಚಿತ ಕವನ]
ಗಾಢಾಂಧಕಾರದೊಳು ಅಡಿಗಡಿಗೆ ನಲುಗುತ್ತ
ನಲಿವ ಮರೆಯುತ ನೋವಿನಲೆ ಹೈರಾಣಾಗುತ್ತ
ಬಳಬಳಲಿ ಬೆಂಡಾದ ದೃಷ್ಟಿಹೀನರ ಮನೆಗೆ
ಜ್ಯೋತಿಯಾದವಳಲ್ಲವೇ ಹೆಲನ್ ಕೆಲ್ಲರ್!
ಶ್ರವಣ-ದೃಷ್ಟಿಯ ನೈಜ ಸಾಮರ್ಥ್ಯವರಿಯದೆ
ದಾರಿಗಾಣದೆ ಬದುಕ ಕಳೆದುಕೊಂಡವರಿಂಗೆ
ಹೊಚ್ಚಹೊಸ ಬಾಳ ಕಟ್ಟಲು ನವನವೀನತೆಯ
ದಾರಿತೋರಿದ ಮಾತೆಯಲ್ಲವೆ ಹೆಲನ್ ಕೆಲ್ಲರ್!
ಆನ್ನೆ ಸುಲಿವಾನ್ ಹಾಯ್ಸಿದ ಜಲ ಧಾರೆಗೆ ಕೈಯೊಡ್ಡಿ
ಜೀವನದ ಶರಧಿಯನು ಈಜ ಕಲಿತವಳೀಕೆ
ವಿಕಲಚೇತನರ ಬದುಕಿಗೆ ಛಲವ ಕಲಿಸಿದವಳೀಕೆ
ಹೊಸ ಬೆಳಕು ಹೊಸ ಹೊಳಹು ಈ ಹೆಲನ್ ಕೆಲ್ಲರ್!
ಮೆಟ್ಟಿ ಅಂಗವೈಕಲ್ಯವ ಮೆಟ್ಟಿಲೇರುತ ಯಶದ
ಸುತ್ತಿ ವಿಶ್ವದೆಲ್ಲೆಡೆಯಲಿ ವಿಶ್ವಾಸವನು ಹರಡುತಲಿ
ಕಣ್ಣಿದ್ದು ಕುರುಡಾಗಿಹರ ನಡುವೆ ಕಣ್ಣಿಲ್ಲದವರ
ಏಳಿಗೆಗೆ ಶ್ರಮಿಸಿದಳು ಈಕೆ ಹೆಲನ್ ಕೆಲ್ಲರ್ !
ಅಂಧರ ಬಾಳ ಜ್ಯೋತಿ ಒಳಗಣ್ಣೇ ಪರಮಪದ
ಸಮಾಜವಾದದ ನೆರಳ ನಡುವೆ ಅರಳಿದ ಹೂವು
ಸ್ಪರ್ಶಮಾತ್ರದಿ ಭೌತ ವಸ್ತು ವಿಷಯವ ಅರಿಯುತಲಿ
ಅಂಧರಿಗೆ ಬೆಳಕಾದವಳು ಈ ಹೆಲನ್ ಕೆಲ್ಲರ್!
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
View Comments
ಚಂದದ ಕವನ, ಒಳ್ಳೆಯ ಬರವಣಿಗೆ.
"ಆನ್ನೆ ಸುಲಿವಾನ್ ಹಾಯ್ಸಿದ ಜಲ ಧಾರೆಗೆ ಕೈಯೊಡ್ಡಿ
ಜೀವನದ ಶರಧಿಯನು ಈಜ ಕಲಿತವಳೀಕೆ"
ಈ ಸಾಲುಗಳು ಇಷ್ಟವಾದವು.
ಹೀಗೇ ಬರೆಯುತ್ತಿರಿ... ಎದುರು ನೋಡುತ್ತೇನೆ.
ಸುಪ್ತದೀಪ್ತಿ ಅವರೆ,
ನಿಮ್ಮ ಪ್ರೋತ್ಸಾಹದ ನುಡಿಗೆ ಧನ್ಯವಾದ.
ಹೆಲನ್ ಬಗ್ಗೆ, ಆಕೆಯ ಸಾಧನೆಯ ಬಗ್ಗೆ ತಿಳಿದುಕೊಂಡಾಗ ಮೈ ನವಿರೇಳುತ್ತದೆ. ಹಾಗಾಗಿ ಬರೆದದ್ದು ಸಾರ್ಥಕ ಅಂದ್ಕೋತೀನಿ.