ಇಂಥ ಇನ್ಸ್ಟಾಗ್ರಾಂ ತಾಣವನ್ನು ಕಂಪ್ಯೂಟರಿನಲ್ಲಿ ಬಳಸುವುದು ಹೇಗೆ ಎಂಬುದು ಹಲವರ ಪ್ರಶ್ನೆ. ಮೊಬೈಲ್ ಸ್ಮಾರ್ಟ್ ಫೋನ್ಗಳಲ್ಲಾದರೆ ಇನ್ಸ್ಟಾಗ್ರಾಂ ಬಳಸಲು ಆ್ಯಪ್ ಇದೆ. ಕಂಪ್ಯೂಟರಿನಲ್ಲಿ ಬ್ರೌಸರ್ ಮೂಲಕವೂ ಇನ್ಸ್ಟಾಗ್ರಾಂ ಖಾತೆಗೆ ಲಾಗಿನ್ ಆಗಬಹುದಾದರೂ ಇಲ್ಲಿ ಫೋಟೋ ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವುದು ಅಸಾಧ್ಯ. ವೆಬ್ ಆವೃತ್ತಿಯಲ್ಲಿ ಇನ್ಸ್ಟಾಗ್ರಾಂನಲ್ಲಿ ಸೀಮಿತವಾದ ಕೆಲಸ ಕಾರ್ಯಗಳನ್ನು ಮಾತ್ರ ಮಾಡಬಹುದು. ಕೆಲವರಿಗೆ ಮೊಬೈಲ್ಗಿಂತಲೂ ಲ್ಯಾಪ್ಟಾಪ್ ಅಥವಾ ಡೆಸ್ಕ್ಟಾಪ್ ಮೂಲಕವೇ ಇನ್ಸ್ಟಾಗ್ರಾಂ ಜಾಲಾಡುವುದು ಇಷ್ಟದ ವಿಷಯವಾದುದರಿಂದ ಅವರು ಈ ಕುರಿತು ಸಲಹೆ ಕೇಳಿದ್ದಾರೆ. ನಿಮಗೂ ಕಂಪ್ಯೂಟರ್ನಲ್ಲಿ ಬ್ರೌಸರ್ ಮೂಲಕವೇ ಇನ್ಸ್ಟಾಗ್ರಾಂ ಅನ್ನು ಪೂರ್ಣಪ್ರಮಾಣದಲ್ಲಿ ಬಳಸಬೇಕೆಂದಿದ್ದರೆ ಸುಲಭೋಪಾಯ ಇಲ್ಲಿದೆ.
ಮುಖ್ಯವಾಗಿ ಬೇಕಾಗಿರುವುದು ಗೂಗಲ್ ಕ್ರೋಮ್ ಎಂಬ ಬ್ರೌಸರ್. ಅದರ ಲೇಟೆಸ್ಟ್ ಆವೃತ್ತಿಯನ್ನು ಕಂಪ್ಯೂಟರಿಗೆ ಇನ್ಸ್ಟಾಲ್ ಮಾಡಿಕೊಳ್ಳಿ. ನಂತರ, ಬ್ರೌಸರ್ನ ಮೆನುವಿಗೆ ಹೋಗಲು ಬಲ ಮೇಲ್ಭಾಗದಲ್ಲಿರುವ ಲಂಬಸಾಲಿನ ಮೂರು ಚುಕ್ಕಿಗಳನ್ನು ಕ್ಲಿಕ್ ಮಾಡಿ. ‘ಮೋರ್ ಟೂಲ್ಸ್’ ಅಂತ ಕ್ಲಿಕ್ ಮಾಡಿದಾಗ, ಮತ್ತೊಂದು ವಿಂಡೋ ಪಾಪ್-ಔಟ್ ಆಗುತ್ತದೆ. ಅಲ್ಲಿ ‘ಡೆವಲಪರ್ ಟೂಲ್ಸ್’ ಎಂಬುದನ್ನು ಕ್ಲಿಕ್ ಮಾಡಿ. ಇಲ್ಲವಾದರೆ, ಬ್ರೌಸರ್ ತೆರೆದಿರುವಾಗ ಶಾರ್ಟ್ಕಟ್ ವಿಧಾನವೆಂದರೆ, ಶಿಫ್ಟ್, ಕಂಟ್ರೋಲ್ ಹಾಗೂ ‘ಸಿ’ ಕೀಗಳನ್ನು ಏಕಕಾಲದಲ್ಲಿ ಒತ್ತುವುದು. ಕೆಲವು ಕಂಪ್ಯೂಟರುಗಳಲ್ಲಿ ಮತ್ತೊಂದು ಶಾರ್ಟ್ಕಟ್ ವಿಧಾನವೆಂದರೆ, ನಂಬರ್ ಲಾಕ್ ಕೀ ಒತ್ತುವುದು. ಕೆಲವು ಕಂಪ್ಯೂಟರುಗಳಲ್ಲಿ, ಬೇರೆಯೇ ವಿಂಡೋ ಒಂದು ತೆರೆದುಕೊಳ್ಳುತ್ತದೆ. ಅದು ಪಕ್ಕನೇ ಗಮನಕ್ಕೆ ಬರುವುದಿಲ್ಲ. ಅದು ಡೆವಲಪರ್ಗಳಿಗಾಗಿರುವ ವಿಂಡೋ ಎಂಬುದು ನೆನಪಿರಲಿ. ಅದರಲ್ಲಿ ಕೋಡ್ಗಳ ರೀತಿ ಅಕ್ಷರಗಳು ಕಾಣಿಸುತ್ತವೆ.
ಈಗ ಈ ವಿಂಡೋದಲ್ಲಿ ‘ಎಲಿಮೆಂಟ್ಸ್’ ಎಂಬ ಟ್ಯಾಬ್ನ ಎಡಭಾಗದಲ್ಲಿ, ಪುಟ್ಟದಾದ ಮೊಬೈಲ್ ಫೋನ್ ಐಕಾನ್ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ಇದಾದ ಬಳಿಕ ಇನ್ಸ್ಟಾಗ್ರಾಂ ಪುಟವನ್ನು ರೀಫ್ರೆಶ್ ಮಾಡಿ (ಇದಕ್ಕೆ ಎಫ್-5 ಅಥವಾ ಕಂಟ್ರೋಲ್+ಎಫ್5 ಕೀಗಳನ್ನು ಬಳಸಬಹುದು).
ಈಗ ಇನ್ಸ್ಟಾಗ್ರಾಂ ಪುಟದ ಎಡಮೇಲ್ಭಾಗದಲ್ಲಿ ಕೆಲವೊಂದು ಮೊಬೈಲ್ ಫೋನ್ ಮಾಡೆಲ್ಗಳನ್ನು ಆಯ್ಕೆ ಮಾಡಿಕೊಳ್ಳುವ ಡ್ರಾಪ್ಡೌನ್ ವಿಂಡೋ ಕಾಣಿಸುತ್ತದೆ. ಅದರಲ್ಲಿ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳಿ. ಈ ಪುಟದಲ್ಲೀಗ ನೀವು ನಿಮ್ಮ ಕಂಪ್ಯೂಟರಿನಲ್ಲಿರುವ ಫೋಟೋಗಳನ್ನೂ ಇನ್ಸ್ಟಾಗ್ರಾಂಗೆ ಅಪ್ಲೋಡ್ ಮಾಡಬಹುದು. ಪ್ರತ್ಯೇಕ ವಿಂಡೋ ಕ್ಲೋಸ್ ಮಾಡಿದಾಗ, ಪುಟವು ಮತ್ತೆ ಹಿಂದಿನ ಸ್ಥಿತಿಗೆ ಮರಳುತ್ತದೆ. ಮಾಡಿ ನೋಡಿ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್ಶಿಪ್ ಚಿಪ್ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಆಗಿರುವ ರಿಯಲ್ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…