Selfie: ಚಿತ್ರ ಉಲ್ಟಾ ಬಾರದಂತೆ ಮಾಡುವುದು ಹೇಗೆ?

ಸಂಭ್ರಮಿಸಲು ಹಬ್ಬಗಳೇ ಬರಬೇಕಿಲ್ಲ. ಈ ಮಾತು ಸೆಲ್ಫೀ ತೆಗೆಯುವುದಕ್ಕೂ ಕೂಡ ಅನ್ವಯವಾಗುತ್ತದೆ. ತಮ್ಮ ಫೋಟೋಗಳನ್ನು ಸ್ಮಾರ್ಟ್ ಫೋನ್ ಮೂಲಕ ಸ್ವಯಂ ತಾವಾಗಿಯೇ ತೆಗೆದುಕೊಳ್ಳುವ ಈ ಪ್ರಕ್ರಿಯೆ, ಫೋನ್ ನೋಡಿದವರಿಗೆಲ್ಲರಿಗೂ ಪರಿಚಿತವೇ. ಸೆಲ್ಫೀ ಗೀಳು ಆಗಿಯೂ ಕೆಲವರನ್ನು ಕಾಡುತ್ತಿದೆ. ಅದೆಲ್ಲ ಇರಲಿ, ಕೆಲವರು ತಮ್ಮದೇ ಫೋಟೋ ತೆಗೆದುಕೊಳ್ಳುವಾಗ, ಕನ್ನಡಿಯಲ್ಲಿ ನೋಡಿದ ಫೋಟೋ ಥರಾ ಯಾಕೆ ಕಾಣಿಸುತ್ತದೆ? ನಾನು ಬಲಗೈಯಲ್ಲಿ ಊಟ ಮಾಡುತ್ತಾ, ಎಡಗೈಯಲ್ಲಿ ಕ್ಯಾಮೆರಾ ಹಿಡಿದಿದ್ದೆಯ ಆದರೆ ಎಡಗೈಯಲ್ಲಿ ತುತ್ತು ತೆಗೆದಂತೆ ಕಾಣಿಸುತ್ತದೆಯಲ್ಲಾ? ಅಂತ ಅಚ್ಚರಿಪಟ್ಟವರು ಹಲವರು. ನನ್ನದು ಮಾತ್ರ ಯಾಕೆ ಹೀಗೆ, ಬೇರೆಯವರು ಸೆಲ್ಫೀ ತೆಗೆದಾಗ ಸರಿಯಾದ ಚಿತ್ರವೇ ಯಾಕಾಗಿ ಬರುತ್ತದೆ ಅಂತ ಸಂದೇಹಪಟ್ಟು ಕಾರಣ ತಿಳಿಯದೆ ಹಲವಾರು ಮಂದಿ ವಿಚಾರಿಸಿದ್ದೂ ಇದೆ.

ಸೆಲ್ಫೀ ತೆಗೆಯುವಾಗ, ಕನ್ನಡಿಯಲ್ಲಿ ಕಂಡ ರೀತಿಯ ಚಿತ್ರಗಳನ್ನು (ಮಿರರ್ ಇಮೇಜ್) ತೆಗೆಯದಂತೆ ನಾವೇ ಸೆಟ್ ಮಾಡಿಕೊಳ್ಳಬಹುದು ಎಂಬುದು ಹಲವರಿಗೆ ಗೊತ್ತಿಲ್ಲ. ಯಾವುದೋ ಮಹತ್ವದ, ಅಪರೂಪದ ಸ್ಥಳ ಮಾಹಿತಿ ಇರುವ ಬೋರ್ಡ್ ಜತೆಗೆ ನಿಂತುಕೊಂಡು ಸೆಲ್ಫೀ ತೆಗೆದುಕೊಂಡಿರುತ್ತೇವೆ. ಆದರೆ, ಅದರ ಅಕ್ಷರಗಳು ಉಲ್ಟಾ ಗೋಚರಿದ್ದನ್ನು ಫೋಟೋದಲ್ಲಿ ನೋಡಿದಾಗ, ಈ ಐತಿಹಾಸಿಕ ಕ್ಷಣದ ಫೋಟೋಗೆ ಹೀಗಾಯಿತಲ್ಲಾ ಎಂಬ ಕೊರಗು. ಹೀಗಾಗದಂತಿರಲು, ಸೆಟ್ಟಿಂಗ್‌ನಲ್ಲಿ ಬದಲಾಯಿಸಿಕೊಳ್ಳಬಹುದಾದ ಅವಕಾಶವನ್ನು ಈಗಿನ ಬಹುತೇಕ ಸ್ಮಾರ್ಟ್ ಫೋನ್‌ಗಳು ಒದಗಿಸಿವೆ.

ಕ್ಯಾಮೆರಾ ಓಪನ್ ಮಾಡಿ. ಮೇಲ್ಭಾಗದಲ್ಲಿ ಮೂರು ಗೆರೆಗಳಿರುವ ಮೆನು ಬಟನ್ ಒತ್ತಿದಾಗ, ಹಲವಾರು ಆಯ್ಕೆಗಳು ಗೋಚರಿಸುತ್ತವೆ. ಅವುಗಳಲ್ಲಿ ಸೆಟ್ಟಿಂಗ್ಸ್ ಎಂಬ ಬಟನ್ ಮೇಲೆ ಒತ್ತಿದಾಗ ಅಲ್ಲಿಯೂ ಹಲವಾರು ವೈಶಿಷ್ಟ್ಯಗಳಿರುತ್ತವೆ. ಇವುಗಳಲ್ಲಿ ‘ಮಿರರ್ ಫೋಟೋಸ್’ ಎಂಬ ಆಯ್ಕೆಯನ್ನು ನೋಡಿ. ಕೆಲವು ಫೋನ್ ಮಾಡೆಲ್‌ಗಳಲ್ಲಿ ‘ಇನ್ವರ್ಟ್ ಫೋಟೋ’ ಎಂದು ಬರೆದಿರಬಹುದು ಮತ್ತು ಮಿರರ್ ಹಾಗೂ ಇನ್ವರ್ಟ್ ಪದಗಳ ಜತೆಗೆ ಬೇರೇನಾದರೂ ಸೇರ್ಪಡೆಯಾಗಿರಬಹುದು. ಗಮನಿಸಿ, ಅದನ್ನು ಆಯ್ಕೆಯನ್ನು ಆಫ್ ಮಾಡಿಬಿಟ್ಟರಾಯಿತು. ಸೆಲ್ಫೀ ಫೋಟೋಗಳು ಕೂಡ ಸಾಮಾನ್ಯ ಫೋಟೋಗಳಂತೆ ಕಾಣಿಸುತ್ತವೆ.

ಗಮನಿಸಿ: ವಾಟ್ಸ್ಆ್ಯಪ್ ಒಳಗಿನ ಕ್ಯಾಮೆರಾ ವೈಶಿಷ್ಟ್ಯದ ಮೂಲಕ ಸೆಲ್ಫೀ ಫೋಟೋ ತೆಗೆಯುವಾಗ ಉಲ್ಟಾ ಆಗದಂತೆ ಮಾಡಲಾಗದು.

ಶಟರ್ ಸೌಂಡ್ ಆಫ್ ಮಾಡುವುದು: ಕ್ಯಾಮೆರಾ ಕ್ಲಿಕ್ ಮಾಡುವಾಗ ಧ್ವನಿ ಕೇಳಿಸದಂತೆಯೂ (ಉದಾಹರಣೆಗೆ, ಮೌನವಾಗಿರಬೇಕಾದ ಕಾರ್ಯಕ್ರಮಗಳಲ್ಲಿ) ಮಾಡಬಹುದು. ಅದು ಕೂಡ ಕ್ಯಾಮೆರಾದ ಸೆಟ್ಟಿಂಗ್ಸ್‌ನಲ್ಲಿ, ‘ಶಟರ್ ಸೌಂಡ್’ ಎಂದು ಬರೆದಿರುವುದನ್ನು ನೋಡಿ, ಆಫ್ ಮಾಡಿಬಿಟ್ಟರಾಯಿತು.

ವಾಟರ್‌ಮಾರ್ಕ್ ತೆಗೆಯುವುದು: ಕೆಲವು ಕ್ಯಾಮೆರಾಗಳಲ್ಲಿ, ‘ಶಾಟ್ ಆನ್ XYZ ಮೊಬೈಲ್’ ಎಂಬ ವಾಟರ್ ಮಾರ್ಕ್ (ಫೋಟೋದ ಕೆಳಗೆ ಪಠ್ಯ, ತಾನಾಗಿಯೇ ದಾಖಲಾಗುತ್ತದೆ) ಬರುತ್ತಿರುತ್ತದೆ. ಇದರಲ್ಲಿ ಕೂಡ ವಿಭಿನ್ನ ಫೋನ್‌ಗಳಲ್ಲಿ ಭಿನ್ನ ವಾಕ್ಯಗಳಿರಬಹುದು. ಸ್ಥಳ, ದಿನಾಂಕ, ಸಮಯ ಹಾಗೂ ಫೋನ್ ಹೆಸರು ಕೂಡ ಕೆಲವು ಮೊಬೈಲ್ ಫೋನ್‌ಗಳಲ್ಲಿ ಫೋಟೋದ ಮೇಲೆ ಅಚ್ಚಾಗುತ್ತವೆ. ಅದನ್ನು ಕೂಡ ಬಾರದಂತೆ ಮಾಡುವುದು, ಇದೇ ಸೆಟ್ಟಿಂಗ್ಸ್ ಎಂಬ ಸ್ಥಳದಲ್ಲಿ. ವಾಟರ್‌ಮಾರ್ಕ್ ಎಂಬ ಪದವನ್ನು ಹುಡುಕಿ, ಬಟನ್ ಆಫ್‌ಗೆ ಸ್ಲೈಡ್ ಮಾಡಿಬಿಡಿ.

ಕ್ಯಾಮೆರಾ ಸೆಟ್ಟಿಂಗ್ಸ್‌ನಲ್ಲಿ ಮತ್ತೊಂದು ಆಯ್ಕೆಯಿದೆ. ಶಟರ್ ಕಂಟ್ರೋಲ್ ಅಥವಾ ಬರ್ಸ್ಟ್ ಎಂಬ ಹೆಸರು ಕಾಣಿಸಬಹುದು. ಯಾವುದಾದರೂ ಚಲನೆಯುಳ್ಳ ಫೋಟೋ ತೆಗೆಯುವಾಗ ಕ್ಯಾಮೆರಾ ಬಟನ್ ಒತ್ತಿ ಹಿಡಿದುಕೊಂಡರೆ, ಅದು ನಿರಂತರವಾಗಿ ಫೋಟೋಗಳನ್ನು ಕ್ಲಿಕ್ಕಿಸುತ್ತಾ ಹೋಗುತ್ತದೆ. ಅವುಗಳಲ್ಲಿ ಉತ್ತಮವಾದ ಫೋಟೋವನ್ನು ಆಯ್ಕೆ ಮಾಡಿ, ಅದನ್ನು ಮಾತ್ರ ಸೇವ್ ಮಾಡಿಟ್ಟುಕೊಳ್ಳಬಹುದು.

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ., 10 ಸೆಪ್ಟೆಂಬರ್ 2018 ಅಂಕಣ

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • moto G5 PLUS ನಲ್ಲಿ ಈ ಸೆಟ್ಟಿಂಗ್ಸ್ ಫೀಚರ್ ಇಲ್ಲವಲ್ಲ. ಹುಡುಕಿ ನೋಡಿದೆ

    • ಕ್ಯಾಮೆರಾ ಸೆಟ್ಟಿಂಗ್‌ನಲ್ಲಿ ಇರುತ್ತದೆ ಸರ್.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

3 weeks ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

4 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

5 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago