ಯಾರೋ ಒತ್ತಾಯಪಟ್ಟು ನಿರ್ದಿಷ್ಟ ವಾಟ್ಸ್ಆ್ಯಪ್ ಗ್ರೂಪಿಗೆ ನಿಮ್ಮನ್ನು ಸೇರಿಸಿದ್ದಾರೆ. ನಿಮಗಿಷ್ಟವಿಲ್ಲದ ಗುಡ್ಮಾರ್ನಿಂಗ್, ಗುಡ್‌ನೈಟ್ ಹಾಗೂ ಖಚಿತವಲ್ಲದ ಫಾರ್ವರ್ಡ್ ಮೆಸೇಜುಗಳೇ ಅದರಲ್ಲಿ ಹರಿದಾಡುತ್ತವೆ ಹೊರತು, ಉಪಯೋಗಕ್ಕಿಲ್ಲ. ಹೊರಬರುವಂತಿಲ್ಲ, ದಾಕ್ಷಿಣ್ಯ. ಇಂತಹಾ ಪರಿಸ್ಥಿತಿಯಲ್ಲಿ ಸಿಲುಕಿದ್ದೀರಾ? ವಾಟ್ಸ್ಆ್ಯಪ್ ಇದಕ್ಕೆ ಸುಲಭ ಪರಿಹಾರ ಕೊಟ್ಟಿದೆ. ಮ್ಯೂಟ್ ಮಾಡಿಬಿಡಿ. ಹೇಗಂತೀರಾ? ವಾಟ್ಸ್ಆ್ಯಪ್ ತೆರೆಯಿರಿ. ನಿಮಗಿಷ್ಟವಿಲ್ಲದ ಗ್ರೂಪನ್ನು ಒತ್ತಿ ಹಿಡಿಯಿರಿ. ಮೇಲೆ ಅಡ್ಡಗೆರೆ ಹಾಕಿದ ಧ್ವನಿವರ್ಧಕದ ಐಕಾನ್ ಕಾಣಿಸುತ್ತದೆ. ಅದನ್ನು ಒತ್ತಿರಿ. ಎಷ್ಟು ಸಮಯ (8 ಗಂಟೆ, ಒಂದು ವಾರ, ಒಂದು ವರ್ಷ) ಮ್ಯೂಟ್ ಮಾಡಬೇಕೆಂದು ಆಯ್ಕೆ ಮಾಡಿಕೊಳ್ಳಿ. ಆ ಗ್ರೂಪಿನಿಂದ ಬರುವ ಯಾವುದೇ ನೋಟಿಫಿಕೇಶನ್‌ಗಳು ನಿಮಗೆ ಸದ್ದು ಮಾಡುವುದಿಲ್ಲ. ಸದ್ದು ಬೇಡ, ಆದರೆ ನೋಟಿಫಿಕೇಶನ್ ಕಾಣಿಸಲಿ ಎಂದಾದರೆ, ಕೆಳಗಿರುವ ಚೆಕ್ ಮಾರ್ಕ್ ಮೇಲೆ ಟಿಕ್ ಗುರುತು ಹಾಕಿ.
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು