ನಮ್ಮ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ಲಾಗಿನ್, ಇಮೇಲ್ ಮುಂತಾದವೆಲ್ಲವೂ ಸ್ಮಾರ್ಟ್‌ಫೋನ್ ಎಂಬ ಅದ್ಭುತದೊಳಗಿರುತ್ತದೆ. ಅದರ ಜತೆಗೆ ಫೋಟೋ, ವೀಡಿಯೊ, ಡಾಕ್ಯುಮೆಂಟ್‌ಗಳು ಮುಂತಾದ ಖಾಸಗಿ ಫೈಲುಗಳು ಕೂಡ. ಇದರ (ಪ್ರೈವೆಸಿ) ಸುರಕ್ಷತೆಗಾಗಿ ನಾವು ಸ್ಕ್ರೀನ್ ಲಾಕ್ ಅಳವಡಿಸಿಕೊಳ್ಳಲೇಬೇಕು. ಇದಲ್ಲದೆ ಸ್ಕ್ರೀನ್ ಮೇಲೆ ಆಕಸ್ಮಿಕವಾಗಿ ಬೆರಳು ಸ್ಪರ್ಶವಾಗಿ, ಯಾರಿಗೋ ಫೋನ್ ಕರೆ ಹೋಗುವುದು, ಯಾವುದಾದರೂ ಆ್ಯಪ್ ಓಪನ್ ಆಗುವುದು… ಇಂಥ ಆಕಸ್ಮಿಕಗಳನ್ನು ತಡೆಯುವುದು ಕೂಡ ಮತ್ತೊಂದು ಉದ್ದೇಶ. ಮಕ್ಕಳಂತೂ ತಿಳಿಯದೆ ಯಾವ್ಯಾವುದೋ ಆ್ಯಪ್ ಅಥವಾ ಸೆಟ್ಟಿಂಗ್‌ಗಳನ್ನು ಒತ್ತಿಬಿಟ್ಟರೆ ಆಗುವ ಫಜೀತಿ ಅಷ್ಟಿಷ್ಟಲ್ಲ.
ಸ್ಕ್ರೀನ್ ಲಾಕ್: ಮೂಲತಃ ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಕ್ರೀನ್ ಲಾಕ್ ಮಾಡಲು ಸ್ವೈಪ್, ಪ್ಯಾಟರ್ನ್, ಪಿನ್ ಹಾಗೂ ಪಾಸ್‌ವರ್ಡ್‌ಗಳೆಂಬ ನಾಲ್ಕು ವಿಧಾನಗಳಿರುತ್ತವೆ. ಈಗಿನ, ಅಂದರೆ ಲಾಲಿಪಾಪ್ (ಆಂಡ್ರಾಯ್ಡ್ 5.0 ಕಾರ್ಯಾಚರಣಾ ವ್ಯವಸ್ಥೆಯ ನಂತರದ) ಆಂಡ್ರಾಯ್ಡ್ ಫೋನ್‌ಗಳಲ್ಲಿ ಸ್ಮಾರ್ಟ್ ಲಾಕ್ ಎಂಬ ಮತ್ತೊಂದು ವಿಧಾನವೂ ಇದೆ. ಜತೆಗೆ ಫಿಂಗರ್‌ಪ್ರಿಂಟ್ (ಬೆರಳಚ್ಚು ಗುರುತು), ಫೇಸ್ ರೆಕಗ್ನಿಷನ್ (ಮುಖದ ಗುರುತು) ಅನ್‌ಲಾಕ್ ವ್ಯವಸ್ಥೆ ಕೂಡ ಹೊಸ ತಂತ್ರಜ್ಞಾನದ ಭಾಗ.
ಮೂಲ ಸ್ಕ್ರೀನ್ ಲಾಕ್ ವ್ಯವಸ್ಥೆ: ಫೋನ್‌ನ ಸೆಟ್ಟಿಂಗ್ಸ್ ಮೆನುವಿನಲ್ಲಿ, ‘ಸೆಕ್ಯುರಿಟಿ ಆ್ಯಂಡ್ ಲೊಕೇಶನ್’ ಎಂಬ ವಿಭಾಗವಿದೆ. ಇದರ ಹೆಸರು ಕೆಲವು ಬ್ರ್ಯಾಂಡ್‌ಗಳ ಫೋನ್‌ಗಳಲ್ಲಿ ಬೇರೆ ರೀತಿಯಲ್ಲಿರಬಹುದು. ಉದಾಹರಣೆಗೆ, ‘ಲಾಕ್ ಸ್ಕ್ರೀನ್ ಆ್ಯಂಡ್ ಸೆಕ್ಯುರಿಟಿ’ ಅಥವಾ ‘ಸೆಕ್ಯುರಿಟಿ ಆ್ಯಂಡ್ ಲೊಕೇಶನ್’ ಇತ್ಯಾದಿ ಕೂಡ ಇರಬಹುದು. ಅಲ್ಲಿ ‘ಡಿವೈಸ್ ಸೆಕ್ಯುರಿಟಿ’ ಎಂಬಲ್ಲಿ ‘ಸ್ಕ್ರೀನ್ ಲಾಕ್’ ವಿಭಾಗಕ್ಕೆ ಹೋದರೆ, ಮೊದಲನೆಯದಾಗಿ ಕಾಣಿಸುವುದು ‘ನನ್’ (ಸ್ಕ್ರೀನ್ ಲಾಕ್ ಬೇಡ) ಎಂಬ ಆಯ್ಕೆ. ನಂತರದ್ದು ಸ್ವೈಪ್. ಅಂದರೆ ಸ್ಕ್ರೀನ್ ಮೇಲೆ ಬೆರಳಿನಿಂದ ನಿರ್ದಿಷ್ಟ ದಿಕ್ಕಿಗೆ ಸ್ವೈಪ್ ಮಾಡುವುದು. ಇವೆರಡರಲ್ಲೂ ಯಾವುದೇ ಸುರಕ್ಷತೆ ಇರುವುದಿಲ್ಲ, ಯಾರು ಬೇಕಾದರೂ ಸ್ಕ್ರೀನ್ ಅನ್‌ಲಾಕ್ ಮಾಡಬಹುದು.
ಮುಂದಿನದು ನಿರ್ದಿಷ್ಟವಾದ ವಿನ್ಯಾಸದಲ್ಲಿ ಚುಕ್ಕೆಗಳನ್ನು ಜೋಡಿಸುವ ‘ಪ್ಯಾಟರ್ನ್’ ಅನ್‌ಲಾಕಿಂಗ್ ವ್ಯವಸ್ಥೆ. ನಮ್ಮದೇ ವಿನ್ಯಾಸವನ್ನು ಇಲ್ಲಿ ಎರಡು ಬಾರಿ ನಮೂದಿಸಿ, ಸೇವ್ ಮಾಡಿಟ್ಟುಕೊಂಡರೆ, ಆ ಜೋಡಣಾ ವಿನ್ಯಾಸ ತಿಳಿದವರು ಮಾತ್ರ ಸ್ಕ್ರೀನ್ ಅನ್‌ಲಾಕ್ ಮಾಡಬಹುದು. ಉಳಿದಂತೆ, ನಾಲ್ಕು ಅಂಕಿಗಳ ಪಿನ್ ನಂಬರ್ ಹೊಂದಿಸುವುದು ಹಾಗೂ ಪಾಸ್‌ವರ್ಡ್ ಹೊಂದಿಸುವುದು. ಇವುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಿ. ಅಥವಾ ಲಾಕ್ ಮಾಡುವ ಆ್ಯಪ್‌ಗಳೂ ಸಿಗುತ್ತವೆ. ಆಕಸ್ಮಿಕ ಟಚ್, ಕಳವು ಹಾಗೂ ದುರ್ಬಳಕೆಯಿಂದ ನಿಮ್ಮ ಫೋನನ್ನು ಹೀಗೆ ರಕ್ಷಿಸಿಕೊಳ್ಳಬಹುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…