ಮೊಬೈಲ್ ನಂಬರ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲೇಬೇಕೆಂದು ಈಗಾಗಲೇ ಸುತ್ತೋಲೆ ಬಂದಿದೆ. ಇದಕ್ಕೆ 31 ಮಾರ್ಚ್ 2018 ಅಂತಿಮ ದಿನ. ಈಗ ನೀವು ಮನೆಯಲ್ಲೇ ಕುಳಿತು ಮೊಬೈಲ್ ಸಂಖ್ಯೆ ಮತ್ತು ಆಧಾರ್ ಲಿಂಕ್ ಆಗಿದೆಯೇ ಎಂದು ದೃಢೀಕರಿಸಿಕೊಳ್ಳಬಹುದು. ಅಂದರೆ ಆಧಾರ್ ಕಾರ್ಡ್ ಮಾಡಿಸುವಾಗ ಯಾವ ನಂಬರ್ ಕೊಟ್ಟಿರುತ್ತೀರಿ ಎಂಬುದು ನಿಮಗೆ ಮರೆತುಹೋಗಿದ್ದರೆ ದೃಢಪಡಿಸಿಕೊಳ್ಳಲು ಹಾಗೂ ಆಧಾರ್‌ಗೆ ನೀಡಿರುವ ಮೊಬೈಲ್ ನಂಬರ್ ಬಗ್ಗೆ ಪುನಃ ಖಚಿತಪಡಿಸಿಕೊಳ್ಳಲು ಇದು ಅನುಕೂಲ.
ಆಧಾರ್ ಕಾರ್ಡ್ ವಿತರಿಸುವ ಯುಐಡಿಎಐ ಸೂಚನೆಯಂತೆ ಮೊಬೈಲ್ ಸರ್ವಿಸ್ ಪ್ರೊವೈಡರ್‌ಗಳಲ್ಲಿ ಹೆಚ್ಚಿನವರು ಈ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ. ನೀವು ನಿಮ್ಮ ನಿರ್ದಿಷ್ಟ ಮೊಬೈಲ್ ಸಂಖ್ಯೆಯಿಂದ 14546 ಗೆ ಕರೆ ಮಾಡಿದಾಗ ಅತ್ತ ಕಡೆಯಿಂದ ಬರುವ ಸೂಚನೆಯನ್ನು ಅನುಸರಿಸಿ, ಆಧಾರ್ ಸಂಖ್ಯೆ ನಮೂದಿಸಿದರೆ, ಮೊಬೈಲಿಗೆ ಒಟಿಪಿ ಬರುತ್ತದೆ. ಅದನ್ನು ಅಲ್ಲಿ ನಮೂದಿಸಿದರೆ ಸಾಕು. ನಿಮ್ಮ ಸರ್ವಿಸ್ ಪ್ರೊವೈಡರ್ ಮಳಿಗೆಗಳಿಗೆ ಭೇಟಿ ನೀಡಬೇಕಿಲ್ಲ, ಕುಳಿತಲ್ಲೇ ಮೊಬೈಲ್-ಆಧಾರ್ ಲಿಂಕ್ ದೃಢೀಕರಿಸಿಕೊಳ್ಳಬಹುದಾಗಿದೆ.
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು
ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…